ಜೋಗಿ ಪ್ರೊಡ್ಯೂಸರ್ ಮಗನ ಚಿತ್ರದಲ್ಲಿ ಡಿಬಾಸ್ ದರ್ಶನ್ ಸಾಂಗ್. ಘಾರ್ಗಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಲಾಕ್ ಬಸ್ಟರ್ ಹಿಟ್ ಗಜ ಎವರ್‌ಗ್ರೀನ್ ಸಾಂಗ್ ಇರಲಿದೆ. ಬಂಗಾರಿ ಯಾರೇ ನೀ ಬುಲ್‌ಬುಲ್‌ನ ರೀಮಿಕ್ಸ್ ವರ್ಷನ್ ಕಾಣಸಿಗಲಿದ್ದು, ಸದ್ಯದಲ್ಲೇ ಸಾಂಗ್ ರಿಲೀಸ್ ಆಗಲಿದೆ. ಸದ್ಯ ಟ್ರೈಲರ್ ಹೇಗಿದೆ..? ಟೀಂ ಏನ್ ಹೇಳುತ್ತೆ ಅನ್ನೋದನ್ನ ತೋರಿಸ್ತೀವಿ ನೋಡಿ.
ಇದು ಘಾರ್ಗಾ ಚಿತ್ರದ ಟ್ರೈಲರ್ ಝಲಕ್..ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿಮಾನಿಯಿಂದ ಟ್ರೈಲರ್ ಲಾಂಚ್ ಮಾಡಿಸಲಾಯಿತು. ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಚಿತ್ರವಿದು. ಅವ್ರ ಪುತ್ರ ಅರುಣ್ ರಾಮ್‌ಪ್ರಸಾದ್ ಈ ಚಿತ್ರದ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಫಾರ್ಗಾ ಒಂದು ಊರಿನ ಹೆಸರಾಗಿದ್ದು, ದಿ ಲ್ಯಾಂಡ್ ಆಫ್ ಶಾಡೋ ಅನ್ನೋ ಟ್ಯಾಗ್‌ಲೈನ್ ಹೊಂದಿದೆ.
‘ಘಾರ್ಗಾ’ದಲ್ಲಿ ಡಿಬಾಸ್ ಬಂಗಾರಿ ಯಾರೇ ನೀ ಬುಲ್ ಬುಲ್
ಜೋಗಿ ಪ್ರೊಡ್ಯೂಸರ್ ಮಗ.. ಗಜ ಡ್ಯಾನ್ಸ್ ನಂಬರ್ ರೀಮಿಕ್ಸ್
ಕಥೆಗೋಸ್ಕರ ನಾನೀ ಸಿನಿಮಾ ಮಾಡಿದೆ. ಇಲ್ಲಿ ಕ್ರಿಯೇಟಿವಿಟಿ ಇದೆ. ಸತ್ವವಿದೆ. ಶಶಿ ಕಥೆ ಹೇಳಿದ ರೀತಿ, ಸ್ಕ್ರೀನ್ ಪ್ಲೇ ನನಗೆ ತುಂಬಾ ಇಷ್ಟವಾಯ್ತು. ಇದು ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯಲ್ಲಿದೆ, ಸಿನಿಮಾ ರಿಲೀಸಾದ ಮೇಲೆ ನೀವೇ ನೋಡ್ತೀರಾ, ಮುಂದಿನ ತಿಂಗಳು ರಿಲೀಸ್ ಮಾಡುತ್ತಿದ್ದೇವೆ ಅಂದ್ರು ಪ್ರೊಡ್ಯೂಸರ್ ಅಶ್ವಿನಿ ರಾಮ್ ಪ್ರಸಾದ್.
ಜನ ಮೆಚ್ಚುವ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್‌ಗಳಿವೆ. ಈ ಟ್ರೈಲರ್ ನೋಡಿದಾಗ ನಿಮಗೆಲ್ಲಾ ನಂಬಿಕೆ ಬಂದಿರುತ್ತೆ. ಸಿನಿಮಾ ಕೂಡ ಅದೇ ಥರ ಮಾಡಿದ್ದೇನೆ. ನೀವೆಲ್ಲ ಸಿನಿಮಾ ನೋಡಿ, ನನ್ನ ನಂಬರ್ ಕೊಡ್ತೀನಿ, ಚೆನ್ನಾಗಿದ್ರೆ ಅಥ್ವಾ ಚೆನ್ನಾಗಿಲ್ಲ ಅಂದ್ರೂ ಕಾಲ್ ಮಾಡಿ ಅಂದ್ರು ಡೈರೆಕ್ಟರ್ ಶಶಿಧರ್.
50 ವರ್ಷ ಪೂರೈಸಿದ ‘ಡೈಲಾಗ್ ಕಿಂಗ್’ಗೆ ವಿಶೇಷ ಗೌರವ..!
ಅಡ್ವೆಂಚರ್ ಡ್ರಾಮಾದಲ್ಲಿ ಅರುಣ್.. RP ಪಟ್ನಾಯಕ್ ಟ್ಯೂನ್
ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು, ಇದಕ್ಕೆ ರೈಟರ್, ಅಂಡರ್‌ವರ್ಲ್ಡ್.. ಹೀಗೆ ಹಲವಾರು ಶೇಡ್ಸ್ ಇದೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್. ನಾನು ಬಣ್ಣ ಹಚ್ಚುವ ಮೊದಲೇ ಕಲರಿಪಯಟ್ಟು, ಆ್ಯಕ್ಷನ್, ಡ್ಯಾನ್ಸ್ ಎಲ್ಲವನ್ನೂ ಕಲಿತು ಬಂದಿದ್ದೇನೆ ಅಂತಾರೆ ಹೀರೋ ಅರುಣ್. ಸಂಗೀತ ಸಂಯೋಜಕ, ಆರ್.ಪಿ. ಪಟ್ನಾಯಕ್ ತಾವೇ ಕಂಪೋಸ್ ಮಾಡಿದ ಹಾಡನ್ನು ಹಾಡಿದ್ದು ಮತ್ತೊಂದು ವಿಶೇಷ.
ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಿದ್ದರು. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ ಕಮ್ ಹಾರರ್ ಚಿತ್ರವಾಗಿದ್ದು ಪ್ರಾಮಿಸಿಂಗ್ ಅನಿಸಿದೆ. ಈ ಚಿತ್ರವನ್ನ ಎನ್ ಕುಮಾರ್ ರಿಲೀಸ್ ಮಾಡ್ತಿದ್ದು, ಮೇಕಿಂಗ್‌ನಿಂದ ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದೆ ಘಾರ್ಗಾ.
