ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

ಸಾವನ್ನೇ ಗೆದ್ದು ಚಿರಂಜೀವಿಯಾದ ಮಿ. ಮೃತ್ಯುಂಜಯನ ಕಥೆ

BeFunky collage (82)

ಗಣರಾಜ್ಯೋತ್ಸವದ ದಿನ ‘ಸರ್ವೈವರ್’ ಅನ್ನೋ ಟೈಟಲ್ ಜೊತೆ ಬಂದ ಈ ವೀಡಿಯೋ ಈಗ ಎಲ್ಲರಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ. ಇದು ಸಾದಾ ಡಾಕ್ಯುಮೆಂಟರಿ ಟೀಸರ್ ಅಲ್ಲ..ಹ್ಯಾಟ್ರಿಕ್ ಹೀರೋ ಜೀವನದ ನಿಜವಾದ ಹೋರಾಟದ ಝಲಕ್. ಸಾವನ್ನೇ ಎದುರಿಸಿ ಮತ್ತೆ ಗರ್ಜನೆ ಮಾಡ್ತಿರುವ ಸರ್ವೈವರ್ ಶಿವಣ್ಣ ಕಥೆ ಹೇಳೋಕೆ ನಾವು ರೆಡಿ..ನೀವೂ ರೆಡಿನಾ..?

ಇಂದು ಬೆಳಗ್ಗೆ 10 ಗಂಟೆಗೆ ಅಚಾನಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಡ್ರಾಪ್ ಆಗುತ್ತೆ. ಟೈಟಲ್  ‘ಸರ್ವೈವರ್’. ಕೆಲವೇ ಸೆಕೆಂಡ್‌ಗಳಲ್ಲಿ ಫ್ಯಾನ್ಸ್‌ಗಳ ಹಾರ್ಟ್ ಬೀಟ್ ಜಾಸ್ತಿ ಆಗುತ್ತೆ. “ಇದು ಏನು?” ಯಾರ ಕಥೆ? ಅನ್ನೋ ಕುತೂಹಲ ಪೀಕ್‌ಗೆ ಏರುತ್ತೆ. ಗಣರಾಜ್ಯೋತ್ಸವದ ದಿನವೇ ರಿಲೀಸ್ ಆಗಿರುವ ಈ ಟೀಸರ್, ಸಾಮಾನ್ಯ ಝಲಕ್ ಅಲ್ಲ ಅನ್ನೋದು ಮೊದಲ ಫ್ರೇಮ್‌ನಲ್ಲೇ ಗೊತ್ತಾಗುತ್ತದೆ.

ಸಾವನ್ನೇ ಗೆದ್ದು ಚಿರಂಜೀವಿಯಾದ ಮಿ. ಮೃತ್ಯುಂಜಯನ ಕಥೆ

ಶಿವಣ್ಣ ರೀಬರ್ತ್.. ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

ಸ್ಲೋ ಮ್ಯೂಸಿಕ್.. ಎಮೋಶನಲ್ ದೃಶ್ಯಗಳು..ಜೀವನದ ಏರುಪೇರುಗಳ ಕಟ್‌ಗಳು..ಹೋರಾಟದ ಕ್ಷಣಗಳು..ಮತ್ತೆ ಎದ್ದು ನಿಂತ ಹೆಜ್ಜೆಗಳು. ಇದು ಕೇವಲ ಸಿನಿಮಾ ಟೀಸರ್ ಫೀಲ್ ಕೊಡಲ್ಲ..ಲೆಜೆಂಡ್ ರಿಬರ್ತ್ ಆಲ್ಸೋ ನಿಜವಾದ ಜೀವನದ ಫೈಟ್‌ನ ಝಲಕ್. 40 ವರ್ಷಗಳ ಸಿನಿಮಾ ಪಯಣದ ಬಳಿಕ, ಇನ್ನೊಂದು ದೊಡ್ಡ ಅಧ್ಯಾಯ ತೆರೆಮೇಲೆ ಬರ್ತಿದೆ ಅನ್ನೋ ಹಿಂಟ್ ಟೀಸರ್ ಕೊಡ್ತಿದೆ.

ಈ ‘ಸರ್ವೈವರ್’ ಡಾಕ್ಯುಮೆಂಟರಿ ಯಾರದ್ದು ಅಂತ ಗೊತ್ತಾದ ಕ್ಷಣವೇ ಕರುನಾಡ ಚಕ್ರವರ್ತಿ ಫ್ಯಾನ್ಸ್ ಎಮೋಷನಲ್ ಆಗಿದ್ದಾರೆ. ಕ್ಯಾನ್ಸರ್‌ನಂತಹ ಭಯಾನಕ ಖಾಯಿಲೆಗೆ ತುತ್ತಾಗಿ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿ, ಸಾವಿನ ನೆರಳನ್ನೇ ಎದುರಿಸಿ ಮತ್ತೆ ಸ್ಟ್ರಾಂಗ್ ಆಗಿ ವಾಪಸ್ಸಾದ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಅವರ ಜೀವನ ಹೋರಾಟವೇ ಇದರ ಹೃದಯ. ಚಿಕಿತ್ಸೆ ಬಳಿಕ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಅವರ ಸರ್ವೈವರ್ ಕಥೆ ಇದು.

ಗಂಡನ ಸಾಕ್ಷ್ಯಚಿತ್ರಕ್ಕೆ ಪತ್ನಿ ಗೀತಕ್ಕ ಸಾಥ್..!

ಪ್ರದೀಪ್ ಶಾಸ್ತ್ರಿ ಆ್ಯಕ್ಷನ್ ಕಟ್ ಶಿವಣ್ಣನಿಗೆ ಟ್ರಿಬ್ಯೂಟ್

ಗೀತಾ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ, ಪ್ರದೀಪ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸರ್ವೈವರ್ ಸಾಕ್ಷ್ಯಚಿತ್ರಕ್ಕೆ ಗೀತಾ ಪಿಕ್ಚರ್ಸ್ ಬ್ಯಾನರ್ ಬೆಂಬಲ ನೀಡಿದೆ. ದರ್ಶನ್ ಮತ್ತು ಚಿನ್ಮಯ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿರುವುದು ವಿಶೇಷ. ಇದು ಕೇವಲ ಒಂದು ಡಾಕ್ಯುಮೆಂಟರಿ ಅಲ್ಲ..ಇದು ಕುಟುಂಬದ ಪ್ರೀತಿ, ಅಭಿಮಾನಿಗಳ ಪ್ರಾರ್ಥನೆ, ಮತ್ತು ಒಬ್ಬ ಹೀರೋ ಜೀವನದ ನಿಜವಾದ ಹೋರಾಟದ ದಾಖಲಾತಿ.

ಇದೀಗ ಟೀಸರ್ ಮಾತ್ರ ಔಟ್ ಆಗಿದೆ ಫುಲ್ ಸ್ಟೋರಿ ಇನ್ನೂ ಬಾಕಿ ಇದೆ. ಸಾವನ್ನೇ ಗೆದ್ದು ಮತ್ತೆ ಗರ್ಜನೆ ಮಾಡುತ್ತಿರುವ ಕರುನಾಡ ಚಕ್ರವರ್ತಿ ಕಥೆ ‘ಸರ್ವೈವರ್’ ಇದಕ್ಕೆ ಆಡಿಬರಹ ನಮ್ಮ ಸೂಪರ್ ಸ್ಟಾರ್ ಎಂದಿದೆ.ಕನ್ನಡ ಸಿನಿಪ್ರೇಮಿಗಳಿಗೆ ‘ಸರ್ವೈವರ್’ ಒಂದು ಪವರ್‌ಫುಲ್ ಅನುಭವ ಕೊಡೋದು ಪಕ್ಕಾ. ಹೀರೋ ಆಗಿ ಗೆದ್ದವರು ಹಲವರು. ಆದರೆ ಜೀವನದಲ್ಲೇ ಸರ್ವೈವರ್ ಆಗಿ ಗೆದ್ದವರು ಕೆಲವರು ಮಾತ್ರ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version