• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಂಧ್ರ ನೆಲದಲ್ಲಿ ಕನ್ನಡ ಬಾವುಟ ಹಾರಿಸಿದ ಹೆಮ್ಮೆಯ ಕನ್ನಡಿಗ ಯಶ್

‘GenZ’ಗೆ ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟ ಮಾನ್‌ಸ್ಟರ್ ಯಶ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 23, 2026 - 3:24 pm
in ಸಿನಿಮಾ
0 0
0
ವಾಹನ (3)

ಟಾಕ್ಸಿಕ್ ಸಿನಿಮಾದಷ್ಟೇ ಅದ್ರ ತೆಲುಗು ಪ್ರೀ-ರಿಲೀಸ್ ಇವೆಂಟ್ ಕೂಡ ಸೌಂಡ್ ಮಾಡ್ತಿದೆ. ಅದಕ್ಕೆ ಕಾರಣ ಯಶ್ ಆ ವೇದಿಕೆಯಲ್ಲಿ ಆಡಿದ ಮಾತುಗಳು. ನಮ್ಮ ಹೆಮ್ಮೆಯ ಕನ್ನಡಿಗನ ಬಗ್ಗೆ ದಿಲ್ ರಾಜು ಕೊಟ್ಟ ಸ್ಟೇಟ್ಮೆಂಟ್‌‌ಗಳು. ಇಂಡಿಯನ್ ಸ್ಪೀಲ್‌‌ಬರ್ಗ್‌ ರಾಜಮೌಳಿಗೆ ಯಶ್‌‌ನ ಹೋಲಿಕೆ ಮಾಡಿದ್ದಾದ್ರೂ ಯಾಕೆ ಅನ್ನೋದ್ರ ಜೊತೆ ರಾಕಿಂಗ್ ಸ್ಟಾರ್ ಇಂದಿನ GenZಗೆ ಕೊಟ್ಟ ಸ್ಫೂರ್ತಿದಾಯಕ ಟಿಪ್ಸ್ ಇಲ್ಲಿವೆ.

  • ಆಂಧ್ರ ನೆಲದಲ್ಲಿ ಕನ್ನಡ ಬಾವುಟ ಹಾರಿಸಿದ ಹೆಮ್ಮೆಯ ಕನ್ನಡಿಗ
  • 50 ಸಾವಿರ ಜನ ಸಾಗರ.. ಯಶ್ ಪ್ರತಿ ಮಾತು ನುಡಿಮುತ್ತು..!

ಟಾಕ್ಸಿಕ್.. ರಾಕಿಂಗ್ ಸ್ಟಾರ್ ಯಶ್ ಮಾಡಿದ ತಪ್ಪಸ್ಸಿನ ಫಲವಿದು. ಕನ್ನಡದ ಮಣ್ಣಿನ ಮಗನೊಬ್ಬ ಇಂದು ಇಲ್ಲಿನ ಕಥೆಯನ್ನ ಗ್ಲೋಬಲ್ ಪ್ಲಾಟ್‌‌ಫಾರ್ಮ್‌ಗೆ ಕೊಂಡೊಯ್ಯುತ್ತಿರುವುದು ತಮಾಷೆಯ ಮಾತಲ್ಲ. ಅದಕ್ಕೆ ಬಹುದೊಡ್ಡ ಸಂಕಲ್ಪ ಬೇಕಾಗುತ್ತೆ. ಅದ್ರ ಹಿಂದೆ ಸಾಕಷ್ಟು ಶ್ರಮವಿದೆ. ಮಿಗಿಲಾಗಿ ಹಗಲಿರುಳು ಅದನ್ನೇ ಜೀವಿಸಿ, ಉಸಿರಾಡಿ, ಪೂಜಿಸಿ, ಇದೀಗ ನಿಮ್ಮ ಮುಂದೆ ತರ್ತಿದ್ದಾರೆ. ಈ ಚಿತ್ರದ ಸ್ಯಾಂಪಲ್ಸ್ ನೋಡಿದ್ರೆ ಸಾಕು ಯಶ್ ಎಂಥಹ ಛಲದಂಕಮಲ್ಲ ಅನ್ನೋದು ಗೊತ್ತಾಗುತ್ತೆ. ಅಂತಹ ದೂರದೃಷ್ಠಿ, ಗುರಿ, ಅದನ್ನ ತಲುಪಲು ಬೇಕಾದ ನೈಪುಣ್ಯತೆ ಎಲ್ಲವೂ ಅವರಲ್ಲಿತ್ತು. ಹಾಗಾಗಿ ಟಾಕ್ಸಿಕ್ ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ.

RelatedPosts

“NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ

ಕಷ್ಟ ಪಟ್ಟು ಮೇಲೆ ಬಂದು ಬ್ರ್ಯಾಂಡ್ ಆದ ಒಂಟಿ ಹೆಣ್ಣು..!

ಟಾಕ್ಸಿಕ್ ಡೈರೆಕ್ಟರ್ ಗೀತು ಯಾರು? ಹಿನ್ನೆಲೆ ಏನು ಗೊತ್ತಾ..?

ರೇಣುಕಾಸ್ವಾಮಿ ಕೇಸ್: ಇಂದು ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಕೋರ್ಟ್ ಆದೇಶ

ADVERTISEMENT
ADVERTISEMENT

ಚಿತ್ರತಂಡ ಎಲ್ಲೆಡೆ ಭರ್ಜರಿ ಪ್ರಮೋಷನ್ಸ್ ಮಾಡ್ತಿದ್ದು, ಹೈದ್ರಾಬಾದ್‌‌ನಲ್ಲಿ ನಡೆದ ತೆಲುಗು ಪ್ರೀ-ರಿಲೀಸ್ ಇವೆಂಟ್ ಸಿನಿಮಾದಷ್ಟೇ ಜೋರಾಗಿ ಸೌಂಡ್ ಮಾಡ್ತಿದೆ. ಹೌದು.. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಜನಸಾಗರ ಟಾಕ್ಸಿಕ್‌ ಇವೆಂಟ್‌‌ಗಾಗಿ ಹರಿದು ಬಂದಿತ್ತು ಅಂದ್ರೆ ನೀವು ನಂಬಲೇಬೇಕು. ತೆಲಂಗಾಣದ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ನಡೆದ ಈ ಇವೆಂಟ್ ಸಿಕ್ಕಾಪಟ್ಟೆ ಕಲರ್‌‌ಫುಲ್ ಹಾಗೂ ಬ್ಯೂಟಿಫುಲ್ ಆಗಿ ಮೂಡಿಬಂದಿದ್ದು ವಿಶೇಷ.

  • ಅಂದು ರಣ್‌ಬೀರ್ ಅನಿಮಲ್.. ಇಂದು ಕನ್ನಡಿಗನ ಟಾಕ್ಸಿಕ್
  • ರಾಕಿಭಾಯ್‌ಗೆ ಬಿಗ್ಗೆಸ್ಟ್ ಅಭಿಮಾನಿ ಎಂಎಲ್‌ಎ ಮಲ್ಲಾರೆಡ್ಡಿ..!

ರಣ್‌ಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದದ್ದು ಇದೇ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲೇ ಅನ್ನೋದು ಮತ್ತೊಂದು ಹೈಲೈಟ್. ಹೌದು.. ಅಂದು ರಣ್‌ಬೀರ್ ಕಪೂರ್ ನಿಂತಿದ್ದ ಅದೇ ವೇದಿಕೆಯಲ್ಲಿ ಇಂದು ನಮ್ಮ ಯಶ್ ನಿಂತು ತಮ್ಮ ಸಿನಿಮಾದ ಪ್ರಮೋಷನ್ಸ್ ಮಾಡಿದ್ದಾರೆ. ಅಂದಹಾಗೆ ಬಹುದೊಡ್ಡ ಬ್ಯುಸಿನೆಸ್ ಟೈಕೂನ್, ಎಜುಕೇಷನಲಿಸ್ಟ್ ಕಮ್ ತೆಲಂಗಾಣದ ಎಂಎಲ್‌ಎ ಕೂಡ ಆಗಿರೋ ಮಲ್ಲಾರೆಡ್ಡಿ ಯೂನಿವರ್ಸಿಟಿಯ ಮುಖ್ಯಸ್ಥ ಮಲ್ಲಾರೆಡ್ಡಿ ನಮ್ಮ ರಾಕಿಭಾಯ್‌ಗೆ ಬಹುದೊಡ್ಡ ಅಭಿಮಾನಿ. ಯೂತ್ ರೀತಿ ಆತ ಯಶ್‌ರನ್ನ ವೇದಿಕೆಗೆ ಕರೆತಂದು ಹಾಡಿ, ಹೊಗಳಿದ ಪರಿ ಅನನ್ಯ.

  • ‘GenZ’ಗೆ ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟ ಮಾನ್‌ಸ್ಟರ್ ಯಶ್
  • ಕಡ್ಡಿ ಅಲ್ಲಾಡಿಸಿದ್ರೆ, ರಾಜಕೀಯ ಮಾಡಿದ್ರೆ ಆಸ್ಪಾದ ಕೊಡಬೇಡಿ
  • ನಾರ್ತ್-ಸೌತ್, ಗಡಿ-ಭಾಷೆ ಯಾವುದೂ ಬೇಡ.. ಒಟ್ಟಾಗಿ ನಿಲ್ಲಿ
  • ಯೂತ್ ಐಕಾನ್ ಮಾತೇ ಈ ಯಂಗ್‌ಸ್ಟರ್ಸ್‌ಗೆ ವೇದವಾಕ್ಯ..!

ಕೆಜಿಎಫ್ ಬಳಿಕ ನಿಮಗೆಲ್ಲಾ ಒಂದು ಥ್ಯಾಂಕ್ಸ್ ಆದ್ರೂ ಹೇಳೋಕೆ ನಾನು ಈ ಕಡೆ ಬರಲಾಗಲಿಲ್ಲ. ಕೆಲಸದಲ್ಲಿ ತಲ್ಲೀನನಾಗಿಬಿಟ್ಟೆ ಅಂತ ಮಾತು ಶುರು ಮಾಡಿದ ಯಶ್, ತೆಲುಗು ಚಿತ್ರಪ್ರೇಮಿಗಳಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದರು. ಅಷ್ಟೇ ಅಲ್ಲ.. ಭಾರತೀಯ ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್ಸ್‌ಗೆ ನೀವು ಕಾನ್ಫಿಡೆನ್ಸ್ ಕೊಟ್ಟಿದ್ದೀರಿ ಅಂದರು. ಹಾನೆಸ್ಟಿಯಿಂದ ಶ್ರಮ ಹಾಕಿ ಕೆಲಸ ಮಾಡಿದ ಪ್ರತಿಯೊಬ್ಬರನ್ನೂ ನೀವು ಕೈ ಹಿಡಿಯುತ್ತೀರಿ. ನನ್ನಂತಹ ಒಬ್ಬ ಶ್ರೀಸಾಮಾನ್ಯ ಕೂಡ ಕನಸು ಕಾಣಬಹುದು, ಅದಕ್ಕೆ ಗಡಿ, ಎಲ್ಲೆ, ಪಾಲಿಟಿಕ್ಸ್ ಯಾವುದೂ ಇಲ್ಲ. ಭಾಷೆಯನ್ನ ಮೀರಿದ ಬಂಧವಿದೆ. ಪ್ರೀತಿ ಇದೆ ಅಂತ ತೋರಿಸಿಕೊಟ್ಟಿದ್ದೀರಿ ಎಂದರು.

ನಮ್ಮ ಕರ್ನಾಟಕದಿಂದಲೂ ತೆಲುಗು ಮಂದಿಗೆ ಅದೇ ರೀತಿಯ ಪ್ರೀತಿ ಹಂಚಿದ್ದೀವಿ. ಇದೊಂಥರಾ ಪರಸ್ಪರ ಕೊಡು ಕೊಳ್ಳುವಿಕೆ. ನಾವು ತೆಲುಗು ಚಿತ್ರಗಳನ್ನ ಬಹಳಷ್ಟು ಇಷ್ಟ ಪಡ್ತೀವಿ. ಅದೇ ರೀತಿ ನೀವು ಕೂಡ ನಮ್ಮ ಕನ್ನಡ ಸಿನಿಮಾನ ಇಷ್ಟ ಪಡ್ತೀರಿ ಅಂತ ಗೊತ್ತು. ನಾವೆಲ್ಲಾ ಒಟ್ಟಿಗೆ ಕೈ ಜೋಡಿಸಿದ್ರೇನೇ ಇಂಡಿಯನ್ ಸಿನಿಮಾ ಆಗೋಕೆ ಸಾಧ್ಯ. ಆದಷ್ಟು ಬೇಗ ನಾವೆಲ್ಲಾ ಗ್ಲೋಬಲ್ ಮಾರ್ಕೆಟ್‌‌ನಲ್ಲಿ ನಮ್ಮ ಇಂಡಿಯನ್ ಸಿನಿಮಾನ ಮಾರ್ಕ್ ಮಾಡಬೇಕು. ಅದಕ್ಕೊಂದು ನೆಲೆ, ಬೆಲೆ ತರಬೇಕು ಎಂದರು.

ನೀವೆಲ್ಲಾ ಯಂಗ್‌‌ಸ್ಟರ್ಸ್ ಇದ್ದೀರಿ.. ಸ್ಟೂಡೆಂಟ್ಸ್ ಇದ್ದೀರಿ. ಸಿನಿಮಾನ ಜಾಸ್ತಿ ಸೀರಿಯಸ್ ಆಗಿ ತಗೋಬೇಡಿ. ನಾವೆಲ್ಲಾ ಏನೂ ದೊಡ್ಡದಾಗಿ ಸಾಧಿಸಿಲ್ಲ. ನೀವು ಕನಸು ಕಾಣಿ. ಅದ್ರ ಹಿಂದೆ ಬೆನ್ನತ್ತಿ ಹೋಗಿ. ಆಗ ಅದು ಯಾವುದೇ ಪ್ರೊಫೆಷನ್ ಆಗಿರಲಿ. ಅಲ್ಲಿ ನಿಮಗೆ ಗೌರವ ಅನ್ನೋದು ಸಿಕ್ಕೇ ಸಿಗುತ್ತೆ. ಸಕ್ಸಸ್ ಕೂಡ ಸಿಗುತ್ತೆ. ನಾವು ಏನೂ ಸಾಧಿಸಿಲ್ಲ ಅಂದ್ರೆ ಪ್ರಪಂಚವನ್ನ ನಿಂದಿಸಬಾರದು. ನಮಗೆ ನಾವು ಮಾತ್ರ ಜವಾಬ್ದಾರರು ಅಂತ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ರು.

ಯಂಗ್‌‌ಸ್ಟರ್ಸ್‌ಗೆ ಒಂದು ಮನವಿ ಮಾಡಿದ ಯಶ್.. ನಮ್ಮ ಇಂಡಿಯನ್ ಸಿಸ್ಟಮ್‌‌ನಲ್ಲಿ ಸಾಕಷ್ಟು ಪ್ರಾಂತ್ಯಗಳಿವೆ. ಭಾಷೆಗಳಿವೆ. ಎಲ್ಲರಿಗೂ ಅವರವರ ಭಾಷೆ ಅಂದ್ರೆ ಪ್ರೀತಿ, ಗೌರವ, ಅಭಿಮಾನ ಕೊಂಚ ಜಾಸ್ತಿನೇ. ಆದ್ರೆ ಈಗ ಎಲ್ಲಾ ಒಟ್ಟಿಗೆ ಒಗ್ಗಟ್ಟಾಗಿ ಬರುವ ಅವಶ್ಯಕತೆಯಿದೆ. ಯಾರಾದ್ರೂ ಅದರ ನಡುವೆ ಕಡ್ಡಿ ಅಲ್ಲಾಡಿಸಿದ್ರೆ, ರಾಜಕೀಯ ಮಾಡಿದ್ರೆ, ಅದಕ್ಕೆ ನೀವೆಲ್ಲಾ ಆಸ್ಪಾದ ನೀಡಬಾರದು. ನಾರ್ತ್, ಸೌತ್ ಅನ್ನೋದೆಲ್ಲಾ ಬೇಡವೇ ಬೇಡ. ನೀವೊಬ್ಬರು ಮನಸ್ಸು ಮಾಡಿದ್ರೆ ಸಾಕು. ದೇಶದ ಯಾವುದೇ ಭಾಗಕ್ಕೆ ಹೋದ್ರೂ ಸಹ ಒಂದೇ ಬಗೆಯ ಪ್ರೀತಿ ಸಿಗಲಿದೆ. ಎಲ್ಲಿಂದ ಆದ್ರೂ ಸರಿ.. ಯಾರಾದ್ರೂ ಸರಿ.. ಬಂದು ಒಳ್ಳೆಯ ಕೆಲಸ ಮಾಡಿದ್ರೆ ಸಾಥ್ ಕೊಡ್ತೀರಿ ಅನ್ನೋ ನಂಬಿಕೆ ನನಗಿದೆ ಅಂತ ಸ್ಟಾರ್ ವಾರ್, ಲಾಂಗ್ವೇಜ್ ವಾರ್, ಫ್ಯಾನ್ಸ್ ವಾರ್, ಪ್ರಾಂತ್ಯದ ವಾರ್‌ಗೆ Genzಗೆ ಕಿವಿಮಾತು ಹೇಳಿದ್ರು ಯಶ್.

  • ಕಾಲೆಳೆಯುವವರಿಗೆ ಸ್ಟೀಮ್ ಬೋಟ್ ಕಥೆ ಹೇಳಿದ ಕನ್ನಡಿಗ
  • ಆಡಿಕೊಳ್ಳೋರಿಗೆ ಕಿವಿ ಕೊಡ್ಬೇಡಿ.. ಮುನ್ನುಗ್ಗಿದ್ರೆ ಸಕ್ಸಸ್ ನಿಮ್ದು

ಟಾಕ್ಸಿಕ್ ವೇದಿಕೆಯಲ್ಲಿ ಯಶ್ ಆಡಿದ ಒಂದೊಂದು ಮಾತು ಕೂಡ ಇಂಪ್ರೆಸ್ಸೀವ್ ಆಗಿತ್ತು. ಅಲ್ಲಿನ ಯೂತ್‌‌‌ಗೆ ಸಿಕ್ಕಾಪಟ್ಟೆ ಕನೆಕ್ಟ್ ಆಗುವಂತಿತ್ತು. ಯಾಕಂದ್ರೆ ಯಾವ ಮೇಷ್ಟ್ರು, ತಂದೆ-ತಾಯಿ ಹೇಳಿದಾಗಲೂ ಕೇಳದ ಫ್ಯಾನ್ಸ್ ಹಾಗೂ ಸ್ಟೂಡೆಂಟ್ಸ್.. ಅದೇ ಅವರ ಅಚ್ಚುಮೆಚ್ಚಿನ ನಟ ಹೇಳಿದಾಗ ಕೇಳೇ ಕೇಳ್ತಾರೆ. ಅದೇ ಕಾರಣಕ್ಕೆ ಸ್ಟೀಮ್ ಬೋಟ್ ಕಥೆ ಮೂಲಕ ಆಡಿಕೊಳ್ಳೋರು, ನೆಗೆಟಿವ್ ಟಾಕ್ಸ್ ಮಾತಾಡೋರಿಗೆ ಕಿವಿ ಕೊಡಬೇಡಿ. ಮುನ್ನುಗ್ಗಿ ಅಷ್ಟೇ.. ಸಕ್ಸಸ್‌ ನಿಮ್ಮದಾಗಲಿದೆ. ನಾನು ಕೂಡ ಅದನ್ನೇ ಫಾಲೋ ಮಾಡಿದ್ದೀನಿ ಅಂತ ಹುರಿದುಂಬಿಸುವಂತೆ ಮಾತನಾಡಿದ್ರು.

  • ಟಾಕ್ಸಿಕ್ ಬಿಗ್ಗೆಸ್ಟ್ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ನೀಡುತ್ತೆ
  • ಇಂಡಿಯಾದ ಬೆಸ್ಟ್ ಟೆಕ್ನಿಷಿಯನ್ಸ್, ಆರ್ಟಿಸ್ಟ್‌‌ಗಳ ಸಂಗಮ

ಸಿನಿಮಾದ ಬಗ್ಗೆ ಮಾತನಾಡಿದ ಯಶ್.. ಇದೊಂದು ದಿ ಬೆಸ್ಟ್ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ನಿಮಗೆ ನೀಡುತ್ತೆ ಎಂದರು. ಅಷ್ಟೇ ಅಲ್ಲ.. ಇಂಡಿಯಾದ ಬೆಸ್ಟ್ ಟೆಕ್ನಿಷಿಯನ್ಸ್ ಹಾಗೂ ಕಲಾವಿದರೆಲ್ಲಾ ಒಟ್ಟಿಗೆ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಎಲ್ಲಾ ಒಟ್ಟಾಗಿ ಬನ್ನಿ. ನಾವೆಲ್ಲಾ ಇಂಡಿಯನ್ ಸಿನಿಮಾನ ಗ್ಲೋಬಲ್ ಆಡಿಯೆನ್ಸ್‌ಗೆ ಕೊಡ್ತಿದ್ದೀವಿ. ಎಲ್ಲಾ ಹೆಮ್ಮೆ ಪಡುವಂತೆ ಮಾಡೋಣ ಎಂದರು.

ಎರಡು ತಿಂಗಳಿಂದ ನಿದ್ದೆ ಬಿಟ್ಟು ಕೆಲಸ ಮಾಡ್ತಿರೋ ರವಿ ಬಸ್ರೂರು ಜೊತೆ ಕಿಯಾರಾ, ನಯನತಾರಾ, ಹುಮಾ ಖುರೇಷಿ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಹಾಗೂ ಟೆಕ್ನಿಷಿಯನ್ಸ್‌‌ ಬಗ್ಗೆ ಕೊಂಡಾಡಿದ್ರು. ಕನ್ನಡದ ಬ್ರಿಲಿಯೆಂಟ್ ಹೆಣ್ಣು ಮಗಳು ರುಕ್ಮಿಣಿ ವಸಂತ್ ಬಗ್ಗೆ ಪ್ರತ್ಯೇಕವಾಗಿ ಹೊಗಳಿದ್ರು.

  • ಪಾಥ್ ಬ್ರೇಕಿಂಗ್ ಮೂವಿ ಆಗುತ್ತೆ ಎಂದ ರಾಕಿಭಾಯ್

ಟಾಕ್ಸಿಕ್ ಅಂದ್ರೆ ಏನು ಅಂತಿದ್ದವ್ರಿಗೆ ಯಶ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ರು. ಅದೊಂದು ಆ್ಯಂಬಿಷಿಯಸ್, ಪಾಥ್ ಬ್ರೇಕಿಂಗ್ ಎಂದರು. ಜೊತೆಗೆ ಅದು ನೋಡುಗರ ಮೈಂಡ್‌ನ ಬ್ಲೋ ಮಾಡಲಿದೆ ಅಂತಲೂ ಹೇಳಿದ್ರು.

  • ಹೆಣ್ಮಕ್ಳಿಗೆ ರಾಕಿಂಗ್ ಸ್ಟಾರ್ ಧೈರ್ಯ.. ಆತ್ಮವಿಶ್ವಾಸದ ಬಾಣ..!

ಈ ಸಿನಿಮಾದ ಡೈರೆಕ್ಟರ್ ಕೂಡ ಒಬ್ಬ ಹೆಣ್ಣು ಮಗಳು. ನಮಗೆ ಸಾಧಿಸೋದು ಎಷ್ಟು ಕಷ್ಟವೋ.. ನಿಮಗೆ ಅದು ಡಬಲ್ ಕಷ್ಟ. ಅದು ನನಗೆ ಗೊತ್ತು. ಹೆಣ್ಣು ಮಗಳು ಕಣೋ.. ಏನ್ ಮಾಡ್ತಾಳೆ ಅನ್ನೋ ಮಾತುಗಳು ಸಮಾಜದಿಂದ ಕೇಳಿಸುತ್ತೆ. ಆದ್ರೆ ಅದಕ್ಕೆ ಕಿವಿ ಕೊಡದೆ ಮುನ್ನುಗ್ಗಿ ಅಂತ ಅಲ್ಲಿರೋ ಹೆಣ್ಣು ಮಕ್ಕಳ ಸಮುದಾಯದ ದಿಲ್ ದೋಚಿದ್ರು ಯಶ್.

  • ನನಗೆ ಹಣ ಬೇಡ.. ನನ್ನ ಕೆಲಸಕ್ಕೆ ಗೌರವ ಕೊಡಿ- ಯಶ್

ನಾನು ಹಣ ಮಾಡೋಕೆ ಇಲ್ಲಿಗೆ ಬಂದಿಲ್ಲ ಎಂದ ಯಶ್.. ನನಗೆ ನೀವು ಈಗಾಗ್ಲೇ ಸಾಕಷ್ಟು ಕೊಟ್ಟಿದ್ದೀರಿ. ನಾನು ಮಾಡೋ ಕೆಲಸ ಗೌರವಿಸಿ ಸಾಕು ಎಂದರು. ಅಷ್ಟೇ ಅಲ್ಲ.. ನೀವು ಕೊಡೋ ಪ್ರೀತಿಗೆ ಹತ್ತು ಪಟ್ಟು ಕೆಲಸ ಮಾಡೋ ಮೂಲಕ ಒಳ್ಳೊಳ್ಳೆ ಸಿನಿಮಾಗಳನ್ನ ಕೊಡುವ ಭರವಸೆ ಕೂಡ ನೀಡಿದ್ರು ನಮ್ಮ ಹೆಮ್ಮೆಯ ಕನ್ನಡಿಗ.

  • ರಾಕಿಭಾಯ್ ಫೇವರಿಟ್ ತೆಲುಗು ಮೂವೀಸ್ ಯಾವ್ಯಾವು?

ಬಾಹುಬಲಿ, ಪೋಕಿರಿ, OG, ಮಗಧೀರ, ಪುಷ್ಪ, ಕಿಕ್.. ಹೀಗೆ ಸಾಕಷ್ಟು ಸಿನಿಮಾಗಳು ನನಗೆ ಇಷ್ಟ. ನಾವು ಕರ್ನಾಟಕದಲ್ಲಿ ಎಲ್ಲಾ ತೆಲುಗು ಸ್ಟಾರ್ ಸಿನಿಮಾಗಳನ್ನ ನೋಡ್ತೀವಿ ಅಂತ ಯಶ್ ತೆಲುಗು ಸೂಪರ್ ಸ್ಟಾರ್‌‌ಗಳ ಫ್ಯಾನ್ಸ್ ಮನಸ್ಸು ಗೆದ್ದರು.

  • ಮೆಗಾ ಬ್ರದರ್ಸ್.. ಯಶ್ ಫೇವರಿಟ್ ತೆಲುಗು ಸಾಂಗ್ಸ್..!
  • ಚಿರಂಜೀವಿಗೆ ರಾಕಿಂಗ್ ಸ್ಟಾರ್ ಹುಟ್ಟು ಹಬ್ಬದ ಶುಭಾಶಯ

ಪವನ್ ಕಲ್ಯಾಣ್‌ರ ದೇಖೋ ದೇಖೋ ಗಬ್ಬರ್ ಸಿಂಗ್ ಸಾಂಗ್ ಫೇವರಿಟ್ ಎಂದ ಯಶ್, ನಂತ್ರ ಮೆಗಾಸ್ಟಾರ್ ಚಿರಂಜೀವಿ ಅವ್ರಿಗೆ ಬರ್ತ್ ಡೇ ವಿಶ್ ಮಾಡ್ತಾ.. ಅವರ ಆಕಲೇಸ್ತೆ ಅನ್ನಂ ಪೆಡ್ತಾ ಸಾಂಗ್ ಕೂಡ ಇಷ್ಟ ಅಂತ ಕಂಪ್ಲೀಟ್ ಟಾಲಿವುಡ್ ಅಟೆನ್ಷನ್‌ನ ಗ್ರ್ಯಾಬ್ ಮಾಡಿಬಿಟ್ಟರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಗುಟ್ಕಾ (9)

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಅಭಿಮಾನಿಗಳಿಂದ ಶ್ರೀಶೈಲದಲ್ಲಿ ವಿಶೇಷ ಪೂಜೆ

by ಕವಿತಾ
August 24, 2026 - 7:13 pm
0

ಗುಟ್ಕಾ (8)

“NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ

by ಕವಿತಾ
August 24, 2026 - 7:01 pm
0

ಗುಟ್ಕಾ (7)

ಭಾರೀ ಗಾಳಿಗೆ ರಸ್ತೆ ಮಧ್ಯೆಯೇ ಉರುಳಿ ಬಿದ್ದ ಸ್ವಾಗತ ಕಮಾನು: ತಪ್ಪಿದ ಭಾರೀ ಅನಾಹುತ

by ಕವಿತಾ
August 24, 2026 - 6:53 pm
0

ಗುಟ್ಕಾ (6)

ಕಾವೇರಿ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆ: ತಮಿಳುನಾಡಿಗೆ 9,000 ಕ್ಯೂಸೆಕ್ ನೀರು ಬಿಡಲು ಸೂಚನೆ!

by ಕವಿತಾ
August 24, 2026 - 6:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಗುಟ್ಕಾ (8)
    “NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ
    August 24, 2026 | 0
  • ಗುಟ್ಕಾ (4)
    ಕಷ್ಟ ಪಟ್ಟು ಮೇಲೆ ಬಂದು ಬ್ರ್ಯಾಂಡ್ ಆದ ಒಂಟಿ ಹೆಣ್ಣು..!
    August 24, 2026 | 0
  • ಗುಟ್ಕಾ (3)
    ಟಾಕ್ಸಿಕ್ ಡೈರೆಕ್ಟರ್ ಗೀತು ಯಾರು? ಹಿನ್ನೆಲೆ ಏನು ಗೊತ್ತಾ..?
    August 24, 2026 | 0
  • Untitled design 2026 08 24T114335.465
    ರೇಣುಕಾಸ್ವಾಮಿ ಕೇಸ್: ಇಂದು ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಕೋರ್ಟ್ ಆದೇಶ
    August 24, 2026 | 0
  • ‘ಟಾಕ್ಸಿಕ್’ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅನಾಹುತ ಆಯೋಜಕರ ವಿರುದ್ಧ FIR
    ‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅನಾಹುತ: ಆಯೋಜಕರ ವಿರುದ್ಧ FIR
    August 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version