ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ಸಿನಿಮಾ “ಟಾಕ್ಸಿಕ್” ಚಿತ್ರೀಕರಣದ ಸೆಟ್‌ನಿಂದ ಲೀಕ್ ಆದ ವೀಡಿಯೊ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೀಡಿಯೊದಲ್ಲಿ ಯಶ್ ಬಾಲ್ಕನಿಯೊಂದರಲ್ಲಿ ಶರ್ಟ್ ಇಲ್ಲದೆ, ಸಿಕ್ಸ್ ಪ್ಯಾಕ್ ಬಾಡಿಯೊಂದಿಗೆ, ನೀಲಿ ಜೀನ್ಸ್ ಧರಿಸಿ ಸಿಗರೇಟ್ ಸೇದುತ್ತಿರುವುದು ಕಾಣುತ್ತದೆ. ಗಡ್ಡದ ಲುಕ್, ಕಡು ರಾಘವ ಧಾಟಿಯ ಹಾವಭಾವಗಳು, ಎಲ್ಲವೂ ಸೇರಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಟಾಕ್ಸಿಕ್ ಸಿನಿಮಾವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದು, ಯಶ್ ಸ್ವತಃ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರವು ಡ್ರಗ್ಸ್ ಮಾಫಿಯಾ ಸುತ್ತಾ ಕಥೆ ನಡೆಯುವಂತಿದ್ದು, ಅದರಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಕಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಯಶ್ ಅವರ ಹಿಂದಿನ ಚಿತ್ರ “ಕೆಜಿಎಫ್” ಭಾಗ 1 ಮತ್ತು 2 ಯಶಸ್ಸಿನ ನಂತರ, ಅಭಿಮಾನಿಗಳು ಈ ಚಿತ್ರದಿಂದ ಮತ್ತೊಂದು ದಾಖಲೆ ನಿರೀಕ್ಷಿಸುತ್ತಿದ್ದಾರೆ. 2026ರ ಮಾರ್ಚ್ 19ರಂದು ಸಿನಿಮಾ ಬಿಡುಗಡೆಗೊಳ್ಳಲಿದ್ದು, ಅದಕ್ಕೂ ಮುನ್ನವೇ ಪ್ರಚಾರ ಚಟುವಟಿಕೆಗಳು ಆರಂಭವಾಗುವ ನಿರೀಕ್ಷೆಯಿದೆ.