ರಾಕಿಂಗ್ ಸ್ಟಾರ್ ಯಶ್ ಸ್ವ್ಯಾಗ್‌ಗೆ ಫಿದಾ ಆಗದ ಬಾಲಿವುಡ್ ಸ್ಟಾರ್ ಇಲ್ಲ. ಆದ್ರೀಗ ರಾಮಾಯಣ ಚಿತ್ರದ ಡೆಲ್ಲಿ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಯಶ್ ಧರಿಸಿದ್ದ ದುಬಾರಿ ವಾಚ್‌ಗೆ ಇಡೀ ಬಿಟೌನ್ ಥಂಡಾ ಹೊಡೆದಿದೆ.
ಯಶ್ ಕೈಯಲ್ಲಿ ಅರ್ಧ ಕೋಟಿ ವಾಚ್.. ಬಿಟೌನ್ ಥಂಡಾ
ಡೆಲ್ಲಿ ರಾಮಾಯಣ ಇವೆಂಟ್‌ನಲ್ಲಿ ರಾಕಿಭಾಯ್ ರಾಕಿಂಗ್
48 ಲಕ್ಷ ರೋಲೆಕ್ಸ್ ವಾಚ್.. ದೇಶದಾದ್ಯಂತ ಕನ್ನಡಿಗನ ಗತ್ತು
ಸೆಲ್ಫ್ ಮೇಡ್ ಶಹಜಾದ ಬಂದ್ರೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ
ಒಂದು ಕಾಲದಲ್ಲಿ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್‌ನಲ್ಲೇ ಮಲಗಿ, ಪಕ್ಕದಲ್ಲಿರೋ ಕೆಂಪೇಗೌಡ ರಸ್ತೆಯ ಥಿಯೇಟರ್‌ಗಳ ಮುಂದೆ ಒಂದಲ್ಲ ಒಂದು ದಿನ ತನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ಕನಸು ಕಾಣಿದ್ರಂತೆ ಯಶ್. ಆದ್ರೀಗ ಅದೇ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಕಟೌಟ್. ಇನ್ ಫ್ಯಾಕ್ಟ್ ನಮ್ಮ ಕನ್ನಡದ ಅಧಿಕೃತ ಪ್ಯಾನ್ ಇಂಡಿಯಾ ರಾಯಭಾರಿ. ಟಾಕ್ಸಿಕ್ ಹಾಗೂ ರಾಮಾಯಣ ಎರಡೆರಡು ವರ್ಲ್ಡ್ ಕ್ಲಾಸ್ ಚಿತ್ರಗಳಿಂದ ವಿಶ್ವ ಸಿನಿದುನಿಯಾನ ಬೆರಗು ಗೊಳಿಸೋದಕ್ಕೆ ಬರ್ತಿದ್ದಾರೆ.
ಇತ್ತೀಚೆಗೆ ಡೆಲ್ಲಿಯಲ್ಲಿ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಡೆಯಿತು. ಅಲ್ಲಿ ಯಶ್ ಎಂಟ್ರಿ, ಕಾಸ್ಟ್ಯೂಮ್ ಹಾಗೂ ಅವರು ಧರಿಸಿದ್ದ ದುಬಾರಿ ವಾಚ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಯ್ತು. ಹೌದು.. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್‌ಗೆ ಸಿಗದ ಆ ಅಭೂತಪೂರ್ವ ಭವ್ಯ ಸ್ವಾಗತ ಯಶ್ ಅವ್ರಿಗೆ ಸಿಕ್ಕಿದ್ದು ವಿಶೇಷ. ಬ್ಲ್ಯಾಕ್ & ಬ್ಲ್ಯಾಕ್‌ನಲ್ಲಿ ಮಿಂಚಿದ ಹೆಮ್ಮೆಯ ಕನ್ನಡಿಗನ ಸರ್‌ಪ್ರೈಸ್ ಎಂಟ್ರಿಗೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಆಗಿದ್ದು ಇಂಟರೆಸ್ಟಿಂಗ್.
ವೇದಿಕೆಗೆ ಬಂದಂತಹ ಯಶ್ ಎಲ್ಲರಿಗೂ ನಮಸ್ಕಾರ ಅಂತ ಮೊದಲು ಮಾತೃಭಾಷೆ ಕನ್ನಡದಲ್ಲೇ ಮಾತು ಶುರು ಮಾಡಿದ್ದು ಮೆಚ್ಚುವ ವಿಷಯ. ನಂತ್ರ ಸಾವಿರಾರು ಮಂದಿ ನರೆದಿದ್ದ ಭಾರತ್ ಮಂಟಪದ ಅದೇ ವೇದಿಕೆಯಲ್ಲಿ ಯಶ್ ಕೈಗೆ ಹಾಕಿದ್ದ ರೋಲೆಕ್ಸ್ ಕಂಪನಿಯ ಕಾಸ್ಟ್ಲಿ ವಾಚ್ ಎಲ್ಲರ ಕಣ್ಣು ಕುಕ್ಕುವಂತಿತ್ತು. ಹೌದು.. ರೋಲೆಕ್ಸ್ ಡೈಟೋನಾ ಮಾಡೆಲ್‌ನ ಈ ವಾಚ್ ಬೆಲೆ ಬರೋಬ್ಬರಿ ಅರ್ಧ ಕೋಟಿ ಅಂದ್ರೆ ನೀವು ನಂಬಲೇಬೇಕು. 48 ಲಕ್ಷ ರೂಪಾಯಿ ಪ್ಲಸ್ ಜಿಎಸ್‌ಟಿ ಅಷ್ಟು ದುಬಾರಿ ಆಗಿರೋ ಇಂತಹ ವಾಚ್‌ನ ಅಲ್ಲಿದ್ದವಱರೂ ಧರಿಸಿರಲಿಲ್ಲ. ಕನ್ನಡಿಗನ ಸ್ವ್ಯಾಗ್ ಜೊತೆ ಆತನ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಬೂಟು, ವಾಚ್ ನೋಡಿ ಇಡೀ ಬಾಲಿವುಡ್ ಬೆರಗಾಗಿದೆ.
ಸೆಲ್ಫ್ ಮೇಡ್ ಶಹಜಾದ ಯಶ್ ಏನೇ ಮಾಡಿದ್ರೂ ಡಿಫರೆಂಟ್. ಅದೇ ಕಾರಣಕ್ಕೆ ಇದೀಗ ಮಕ್ಕಳಿಂದ ಮುದುಕರ ತನಕ ಎಲ್ಲರಿಗೂ ಇಷ್ಟವಾಗುವಂಗತಹ ಮಾಹಾಕಾವ್ಯ ರಾಮಾಯಣ ಸಿನಿಮಾ ಹಾಗೂ ಯೂತ್‌ಫುಲ್ ಎಂಟರ್‌ಟೈನರ್ ಟಾಕ್ಸಿಕ್.. ಹೀಗೆ ಎರಡೆರಡು ಚಿತ್ರಗಳ ಮೂಲಕ ಮಸ್ತ್ ಮನರಂಜನೆ ಕೊಡೋಕೆ ಸಜ್ಜಾಗಿದ್ದಾರೆ. ಇನ್ಮೇಲೆ ರಾಕಿಭಾಯ್ ಚಿತ್ರಪ್ರೇಮಿಗಳಿಗೆ ಸರ್‌ಪ್ರೈಸ್ ಮೇಲೆ ಸರ್‌ಪ್ರೈಸ್ ಕೊಡ್ತಾನೇ ಇರ್ತಾರೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.
