ಹಾರರ್ ಜಾನರ್‌ಗೆ ಕೈ ಹಾಕಿದ ಮಾಸ್ ಮಾನ್‌ಸ್ಟರ್ ಪ್ರಶಾಂತ್ ನೀಲ್

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಹಾರರ್ ಚಿತ್ರ 418

Untitled design 2026 07 20T193056.216

ಕೆಜಿಎಫ್, ಸಲಾರ್ ಬಳಿಕ ಡ್ರ್ಯಾಗನ್ ಸಿನಿಮಾನೇ ಕೊನೆ. ಅದಾದ ಬಳಿಕ ನಾನು ಆ್ಯಕ್ಷನ್ ಜಾನರ್‌ ಬದಲಿಸುತ್ತಿದ್ದೇನೆ ಅನ್ನೋ ಮಾತನ್ನ ಅಧಿಕೃತವಾಗಿ ಹೇಳಿದ್ರು ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್. ಇದೀಗ ನುಡಿದಂತೆ ನಡೆದಿರೋ ನೀಲ್, ಹಾರರ್ ಜಾನರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಯಾವ ಸಿನಿಮಾ..? ಅದ್ರ ಇಂಟರೆಸ್ಟಿಂಗ್ ವಿಷಯ ಏನು ಅನ್ನೋದಕ್ಕೆ ಈ ಸ್ಪೆಷಲ್ ಸ್ಟೋರಿ ನೋಡಿ..

ಪ್ರಶಾಂತ್ ನೀಲ್.. ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವ ಆರಂಭಿಸಿದ ನಿರ್ದೇಶಕ. ಅಲ್ಲದೆ, ಮೇಕಿಂಗ್‌ನಲ್ಲಿ ಹೊಸ ಪ್ರಯೋಗಗಳನ್ನ ಮಾಡಿ, ನಂತ್ರ ಕೆಜಿಎಫ್, ಸಲಾರ್ ಚಿತ್ರಗಳಿಂದ ಸ್ಯಾಂಡಲ್‌ವುಡ್‌ಗೆ ಹೊಸ ಆಯಾಮ ಕೊಟ್ಟವರು ನೀಲ್. ಸದ್ಯ ಜೂನಿಯರ್ ಎನ್‌ಟಿಆರ್ ಜೊತೆ ಡ್ರ್ಯಾಗನ್ ಚಿತ್ರ ಮಾಡ್ತಿರೋ ಡೈರೆಕ್ಟರ್ ಪ್ರಶಾಂತ್ ನೀಲ್, ನುಡಿದಂತೆ ನಡೆದಿದ್ದಾರೆ.

ಕೆಜಿಎಫ್, ಸಲಾರ್ ಹಾಗೂ ಡ್ರ್ಯಾಗನ್ ಬಳಿಕ ಆ್ಯಕ್ಷನ್ ವೆಂಚರ್‌‌ಗಳಿಗೆ ಫುಲ್‌‌ಸ್ಟಾಪ್ ಇಡೋದಾಗಿ ಹೇಳಿದ್ರು ನೀಲ್. ಅಲ್ಲದೆ ಬೇರೆ ಜಾನರ್ ಚಿತ್ರಗಳನ್ನ ಮಾಡೋದಾಗಿ ಹೇಳಿದ್ರು. ಅದ್ರಂತೆ ಸದ್ಯ ಹಾರರ್ ಜಾನರ್‌ಗೆ ಕೈ ಹಾಕಿದ್ದಾರೆ. ಸಿನಿಮಾದ ಹೆಸರು 418. ಹಾಗಂತ ಈ ಸಿನಿಮಾನ ಅವರೇನೂ ನಿರ್ದೇಶನ ಮಾಡಿಲ್ಲ. ಹೌದು.. ತಮ್ಮದೇ ಗರಡಿಯಲ್ಲಿ ಪಳಗಿದ್ದಂತಹ ಕೋ-ಡೈರೆಕ್ಟರ್ ಕೀರ್ತನ್ ನಾಡಗೌಡ ಆ್ಯಕ್ಷನ್ ಕಟ್ ಹೇಳಿರೋ ಚೊಚ್ಚಲ ಚಿತ್ರ 418. ಅದನ್ನ ಸ್ವತಃ ನೀಲ್ ಅವ್ರೇ ಪ್ರೆಸೆಂಟ್ ಮಾಡ್ತಿರೋದು ವಿಶೇಷ.

ಸಿನಿಮಾದ ಟೈಟಲ್ ಜೊತೆ ಫಸ್ಟ್‌ಲುಕ್ ಕೂಡ ರಿವೀಲ್ ಮಾಡಿರೋ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್, ರಿಲೀಸ್ ಡೇಟ್ ಸಹ ಅನೌನ್ಸ್ ಮಾಡಿದೆ. ಇದೇ ಜುಲೈ 31ರಂದು ವರ್ಲ್ಡ್‌‌ವೈಡ್ ತೆರೆಗಪ್ಪಳಿಸಲಿದೆ. ಫಸ್ಟ್‌‌ಲುಕ್ ನೋಡಿ ಥ್ರಿಲ್ ಆಗಿರೋ ಚಿತ್ರಪ್ರೇಮಿಗಳು, ನೀಲ್ ಪ್ರೆಸೆಂಟ್ ಮಾಡ್ತಿರೋ ಚಿತ್ರವಾದ್ದರಿಂದ ಸಹಜವಾಗಿಯೇ ಚಿತ್ರದ ಮೇಲೆ ಅತೀವ ನಿರೀಕ್ಷೆ, ಭರವಸೆ ಇಟ್ಟಿದ್ದಾರೆ. ಒಟ್ಟಾರೆ ಪ್ರಶಾಂತ್ ನೀಲ್ ನಿರ್ದೇಶನದ ಜೊತೆ ಜೊತೆಗೆ ಮೆಲ್ಲಗೆ ಬೇರೆ ಬೇರೆ ಆಯಾಮಗಳಲ್ಲಿ ತೊಡಗಿಸಿಕೊಳ್ತಿರೋದು ಅಚ್ಚರಿ ತಂದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version