ಸುದೀಪ್ ಸ್ಟೈಲ್‌ಗೆ ತಕ್ಕನಾದ ಸ್ಪೋರ್ಟ್ಸ್‌‌ EV ಕಾರ್..!

ಸ್ಟೈಲ್, ಸ್ಪೀಡ್ & ಸುಸ್ಥಿರತೆ ಕಿಚ್ಚನ ಹೊಚ್ಚ ಹೊಸ ರೈಡ್‌

ಬಾದ್‌ಷಾ ಕಿಚ್ಚ ಸುದೀಪ್‌ ಗ್ಯಾರೇಜ್‌ಗೆ ರಾಯಲ್ ಕಾರ್ ಒಂದು ಎಂಟ್ರಿ ಕೊಟ್ಟಿದೆ. ಇಡೀ ಇಂಡಸ್ಟ್ರಿಗೆ ಗೊತ್ತಿರೋ ಹಾಗೆ ಕಿಚ್ಚನಿಗೆ ಕಾರುಗಳ ಮೇಲೆ ಸಖತ್ ಕ್ರೇಜ್‌ ಇದೆ. ಆದ್ರೆ ಈ ಬಾರಿ ಅಭಿನಯ ಚಕ್ರವರ್ತಿ ಎಲ್ಲರೂ ಅಚ್ಚರಿ ಪಡುವಂತಹ ಒಂದು ಸರ್‌‌ಪ್ರೈಸ್ ಕಾರ್ ಖರೀದಿಸಿದ್ದಾರೆ. ಸುದೀಪ್ ಲೈಫ್‌ಸ್ಟೈಲ್‌ಗೆ ಮ್ಯಾಚ್ ಆಗುವಂತೆ ಬಂದಿರೋ ಆ ಹೊಸ ಕಾರ್ ಯಾವುದು..? ಅದರ ವಿಶೇಷತೆ ಏನು..? ಕಾರ್ ಕಲೆಕ್ಷನ್ ಹೇಗಿದೆ ಅನ್ನೋದ್ರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ..

ಸಿನಿಮಾಗಳ ಶೂಟಿಂಗ್ ಹಾಗೂ ಬಿಗ್ ಬಾಸ್ ಶೋನ ಭರ್ಜರಿ ತಯಾರಿಯ ನಡುವೆಯೂ ಕಿಚ್ಚನ ಈ ಹೊಸ ರೈಡ್ ಎಲ್ಲರ ಗಮನ ಸೆಳೆದಿದೆ. ಈ ಬಾರಿ ಎಂದಿನ ತಮ್ಮ ರಾಯಲ್ ಶೈಲಿಗಿಂತ ಭಿನ್ನವಾಗಿ ಯೋಚಿಸಿರುವ ಸುದೀಪ್, ಪರಿಸರ ಸ್ನೇಹಿಯಾಗಿರುವ ಗ್ರೀನ್ ಮೊಬಿಲಿಟಿಗೆ ಜೈ ಎಂದಿದ್ದಾರೆ. ಸುದೀಪ್ ಅವರ ಮನೆಗೆ ಅದ್ದೂರಿಯಾಗಿ ಡೆಲಿವರಿ ಆಗಿರುವ ಈ ಮಹೀಂದ್ರಾ ಬಿಇ 6 ಕಾರು ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ, ರಸ್ತೆಯಲ್ಲಿ ಸಾಗುವಾಗ ಎಲ್ಲರೂ ತಿರುಗಿ ನೋಡುವಂತಹ ಅಲ್ಟ್ರಾ-ಮಾಡರ್ನ್ ಹಾಗೂ ಸ್ಪೋರ್ಟಿ ಲುಕ್ ಹೊಂದಿದೆ. ವಿವಿಧ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಕಾರು, ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನ ಹಾಗೂ ಅತ್ಯಧಿಕ ಮೈಲೇಜ್ ಫೀಚರ್‌ಗಳೊಂದಿಗೆ ಧೂಳೆಬ್ಬಿಸಲು ಸಜ್ಜಾಗಿದೆ.

ಅಂದಹಾಗೆ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ರಾಜ ಗಾಂಭೀರ್ಯದ ಕಾರುಗಳ ದೊಡ್ಡ ದಂಡೇ ಇದೆ.ಕಿಚ್ಚನ ಬಳಿ  ಸುಮಾರು 2.11 ಕೋಟಿ ರೂಪಾಯಿ ಎಕ್ಸ್ ಶೋ ರೂಂ ಬೆಲೆ ಹೊಂದಿರುವ ಅತ್ಯಂತ ಐಷಾರಾಮಿ ರೇಂಜ್ ರೋವರ್ ವೋಗ್ಯ ಕಾರಿದೆ. ಇದರ ಜೊತೆಗೆ ಅಡ್ವೆಂಚರಸ್ ಲುಕ್ ನೀಡುವ 63.94 ಲಕ್ಷ ಮೌಲ್ಯದ ಜೀಪ್ ರಾಂಗ್ಲರ್ ಹಾಗೂ ಅದೇ ಕಂಪನಿಯ ಕಪ್ಪು ಬಣ್ಣದ ರಗಡ್ ಜೀಪ್ ಕಂಪಾಸ್  21.73 ದ ಕಾರುಗಳೂ ಇವೆ. ಸಿಲ್ವರ್ ಬಣ್ಣದ ರಾಯಲ್ ಜಾಗ್ವಾರ್ ಎಕ್ಸ್ ಜೆಎಲ್ ಸೆಡಾನ್ ಇದು1 ಕೋಟಿ ಬೆಲೆ. ಮತ್ತು ರೆಡ್ ಹಾಟ್ ವೋಲ್ವೋ ಎಕ್ಸಸಿ-90 ಮಾಡೆಲ್‌ನ 81 ಲಕ್ಷದ ಕಾರು ಸುದೀಪ್ ಅವರ ಗ್ಯಾರೇಜ್‌ನಲ್ಲಿದೆ.

ಇನ್ನು ಕಿಚ್ಚನ ಕಾರ್ ಕಲೆಕ್ಷನ್‌ನಲ್ಲಿ ಅತ್ಯಂತ ಸ್ಪೆಷಲ್ ಅಂದರೆ ಅದು BMW-M5 2020ರಲ್ಲಿ ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಅವರು ಖುದ್ದಾಗಿ ಸುದೀಪ್ ಅವರ ಮನೆಗೆ ತೆರಳಿ, ಬರೋಬ್ಬರಿ 1.5 ಕೋಟಿ ಮೌಲ್ಯದ ಈ ಪರ್ಫಾಮೆನ್ಸ್ ಕಾರನ್ನು ಪ್ರೀತಿಯಿಂದ ಗಿಫ್ಟ್ ಆಗಿ ನೀಡಿದ್ದರು. ಕಾರುಗಳಷ್ಟೇ ಅಲ್ಲದೆ, ಕಿಚ್ಚನಿಗೆ ಟೂ-ವೀಲರ್ಸ್ ಕ್ರೇಜ್ ಕೂಡ ಇದೆ. ಅವರ ಬಳಿ ಮೂರು ದುಬಾರಿ ಬಿಎಂಡಬ್ಲ್ಯೂ ಬೈಕ್‌ಗಳಿದ್ದು, ಫಿಟ್‌ನೆಸ್‌ಗಾಗಿ ಒಂದು ಸೂಪರ್ ಸೈಕಲ್ ಕೂಡ ಹೊಂದಿದ್ದಾರೆ.

ನಟನೆಯಷ್ಟೇ ಅಲ್ಲದೆ ನಿರ್ದೇಶನ, ಗಾಯನ, ಕ್ರಿಕೆಟ್, ನಿರ್ಮಾಣ ಹಾಗೂ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿರುವ ಮಲ್ಟಿ-ಟ್ಯಾಲೆಂಟೆಡ್ ಕಿಚ್ಚ ಸುದೀಪ್, ಸದ್ಯ ತಮ್ಮ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಚಿತ್ರ ಬಿಲ್ಲ ರಂಗ ಭಾಷ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಒಂದು ಕ್ಯೂಟ್ ರೋಮ್ಯಾಂಟಿಕ್ ರೋಮ್ ಕಾಮ್ ಸಿನಿಮಾವೂ ಅವರ ಕೈಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕಿರುತೆರೆಯ ನಂಬರ್ ಒನ್ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್‌ನ ನಿರೂಪಣೆಯ ಮೂಲಕವೂ ಕಿಚ್ಚ ಟಿವಿ ಪರದೆಯ ಮೇಲೆ ಅಬ್ಬರಿಸಲಿದ್ದಾರೆ. ಹೊಸ ಇವಿ ಕಾರಿನ ಎಂಟ್ರಿ ಕಿಚ್ಚನ ಈ ಹೊಸ ಜರ್ನಿಗೆ ಇನ್ನಷ್ಟು ಸ್ಪೀಡ್ ನೀಡೋದ್ರಲ್ಲಿ ಡೌಟೇ ಇಲ್ಲ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version