ಕನ್ನಡ ಚಿತ್ರರಂಗದ ಅಸಲಿ ಮಾಸ್ ಹೀರೋ, ಕರುನಾಡಿನ ‘ದುನಿಯಾ’ ವಿಜಯ್ ಈಗ ಗಡಿ ದಾಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ ಮೂಕುತಿ ಅಮ್ಮನ್ 2 ಸಿನಿಮಾದಲ್ಲಿ ವಿಲನ್ ಆಗಿ ಅಖಾಡಕ್ಕಿಳಿದಿರುವ ನಮ್ಮ ಬ್ಲ್ಯಾಕ್ ಕೋಬ್ರಾದ ಭರ್ಜರಿ ಎಂಟ್ರಿ ಈಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ…
- ಮೂಕುತಿ ಅಮ್ಮನ್ 2ನಲ್ಲಿ ದುನಿಯಾ ವಿಜಯ್ ಅಬ್ಬರ..!
- ನಯನತಾರಾ ಎದುರು ವಿಜಯ್ ಬೆಂಕಿ, ಬಿರುಗಾಳಿ.. ‘ಅಮ್ಮ’ ರಿಟರ್ನ್ಸ್..!
- ಲೇಡಿ ಸೂಪರ್‌ಸ್ಟಾರ್ ಸಿನಿಮಾದಲ್ಲಿ ದುನಿಯಾ ವಿಜಯ್ ತಾಕತ್ತು
- ದೇವಿ ವರ್ಸಸ್ ಅಸುರರ ಕಾಳಗದಲ್ಲಿ ವಿಜಯ್ ವಿಲನ್..!
ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ, ಡೈರೆಕ್ಟರ್ ಆಗಿ ಮೈಲಿಗಲ್ಲು ಸ್ಥಾಪಿಸಿರುವ ನಟ ದುನಿಯಾ ವಿಜಯ್, ಈಗ ಪರಭಾಷಾ ರಂಗದಲ್ಲೂ ತನ್ನ ಖದರ್ ತೋರಿಸುತ್ತಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಮ್, ಫೈಟಿಂಗ್ ಸ್ಟೈಲ್ ಹಾಗೂ ರಗಡ್ ಲುಕ್ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ವಿಜಯ್, ಈಗ ನೇರವಾಗಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಜೊತೆ ಪವರ್‌ಫುಲ್ ಕ್ಲಾಶ್‌ಗೆ ಸಿದ್ಧರಾಗಿದ್ದಾರೆ. ಆರ್.ಜೆ. ಬಾಲಾಜಿ ನಿರ್ದೇಶನದ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ವಿಜಯ್ ಅವರ ವಿಲನ್ ಪಾತ್ರ ಸಖತ್ ಹೈಲೈಟ್ ಆಗಲಿದೆ.
ಒಂದು ಕಡೆ ಶಕ್ತಿ ದೇವತೆ ‘ಮೂಕುತಿ ಅಮ್ಮನ್’ ರೂಪದಲ್ಲಿ ನಯನತಾರಾ ದ್ವಿಪಾತ್ರದಲ್ಲಿ ಅಬ್ಬರಿಸುತ್ತಿದ್ದರೆ, ಮತ್ತೊಂದು ಕಡೆ ಆ ದೇವಿಯ ದೈವಿಕ ಶಕ್ತಿಗೆ ಸವಾಲು ಹಾಕುವ ಅಸುರಿ ಶಕ್ತಿಯಾಗಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲೇ ಇವರ ಖಳನಾಯಕನ ಲುಕ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮುಗ್ಧರನ್ನು ರಕ್ಷಿಸಲು ಬಂದ ದೇವಿಯ ವಿರುದ್ಧ ಕತ್ತಿ ಮಸೆಯುವ ಪಾತ್ರದಲ್ಲಿ ವಿಜಯ್ ಅವರ ನಟನೆ ಚಿತ್ರದ ಮೇನ್ ಹೈಲೈಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕನ್ನಡದ ಗಡಿಯನ್ನು ಮೀರಿ ಪರಭಾಷಾ ಸಿನಿಮಾಗಳಲ್ಲೂ ವಿಲನ್ ಆಗಿ ವಿಜೃಂಭಿಸುತ್ತಿರುವ ವಿಜಯ್, ಈ ಹಿಂದೆ ತೆಲುಗಿನ ಬ್ಲಾಕ್‌ಬಸ್ಟರ್ ‘ವೀರಾ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈಗ ‘ಮೂಕುತಿ ಅಮ್ಮನ್ 2’ ನಂತಹ ಬಿಗ್ ಪ್ರಾಜೆಕ್ಟ್‌ನಲ್ಲಿ ನಟಿಸಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಷಯ. ನಾಯಕನಾಗಿ ಮೆರೆದ ನಟನೊಬ್ಬ, ವಿಲನ್ ಪಾತ್ರವನ್ನೂ ಅಷ್ಟೇ ಗತ್ತು ಹಾಗೂ ಮಾಸ್ ಆಗಿ ನಿರ್ವಹಿಸಬಲ್ಲ ಎಂಬುದಕ್ಕೆ ದುನಿಯಾ ವಿಜಯ್ ಮತ್ತೊಮ್ಮೆ ಜೀವಂತ ಉದಾಹರಣೆಯಾಗಿದ್ದಾರೆ.
ದೇವತೆ ಮತ್ತು ಅಸುರರ ನಡುವಿನ ಮಹಾಯುದ್ಧದ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ರೆಜಿನಾ ಕಸ್ಸಂದ್ರ ಕೂಡ ಖಳನಾಯಕಿಯಾಗಿ ಸಾಥ್ ನೀಡಿದ್ದಾರೆ. ಆರ್.ಜೆ. ಬಾಲಾಜಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ನವೆಂಬರ್ 6 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ, ನಮ್ಮ ಕನ್ನಡದ ಹೆಮ್ಮೆಯ ನಟ ದುನಿಯಾ ವಿಜಯ್ ತೆರೆಮೇಲೆ ಯಾವ ಮಟ್ಟಕ್ಕೆ ಆರ್ಭಟಿಸಲಿದ್ದಾರೆ ಎಂಬುದನ್ನು ನೋಡಲು ಇನ್ನು ಕೆಲವೇ ದಿನಗಳು ಬಾಕಿ ಇವೆ.
ಒಟ್ಟಿನಲ್ಲಿ ಹೀರೋ ಆಗಿ ಥಿಯೇಟರ್‌ನಲ್ಲಿ ವಿಷಲ್ ಹೊಡೆಸಿದ್ದ ನಮ್ಮ ದುನಿಯಾ ವಿಜಯ್, ಈಗ ವಿಲನ್ ಆಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ಸಿದ್ಧರಾಗಿದ್ದಾರೆ. ನವೆಂಬರ್ 6 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಅವರ ಮುಖಾಮುಖಿ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
