ರಾಕಿಭಾಯ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚ್ತಿದ್ದಾರೆ. ಅದಕ್ಕೆ ಕಾರಣ ಮುದ್ದಾದ ಮಕ್ಕಳು. ಇಷ್ಟಕ್ಕೂ ಇವರಿಬ್ಬರೂ ಮಕ್ಕಳ ಜೊತೆ ಮಾಡಿದ್ದೇನು ಅನ್ನೋದ್ರ ಜೊತೆಗೆ ಪತ್ನಿ ಜೊತೆ ಡಾಲಿ ಜಾಲಿ ಸಫಾರಿಯ ಕಲರ್‌ಫುಲ್ ದೃಶ್ಯಚಿತ್ತಾರ ಇಲ್ಲಿದೆ.
- ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ
- ಫಾದರ್ಸ್ ಡೇ ವಿಶೇಷ ರಾಕಿ ಪಲ್ಟಿ.. ಶೆಟ್ಟಿ ಸೂಪ್ ಕಥೆ
- ಪತ್ನಿ ಡಾ. ಧನ್ಯತಾ ಜೊತೆ ಡಾಲಿ ಜಾಲಿ ಸಫಾರಿ
- ಕಬಿನಿಯಲ್ಲಿ ಪ್ರಾಣಿ, ಪಕ್ಷಿಗಳನ್ನು ಕ್ಲಿಕ್ಕಿಸಿ ಸಂಭ್ರಮ
ಯಶ್ ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದ್ರೂ ಸಹ, ಒಳ್ಳೆಯ ಫ್ಯಾಮಿಲಿಮ್ಯಾನ್ ಕೂಡ ಹೌದು. ಯೆಸ್.. ಫ್ಯಾಮಿಲಿಗೆ ಸಾಕಷ್ಟು ಸಮಯ ಕೊಡುವ ರಾಕಿಭಾಯ್, ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಔಟಿಂಗ್, ಫ್ಯಾಮಿಲಿ ಫಂಕ್ಷನ್ಸ್, ಹಬ್ಬ ಹರಿದಿನಗಳನ್ನು ಸೆಲೆಬ್ರೇಟ್ ಮಾಡ್ತಾರೆ. ಸದ್ಯ ಫಾದರ್ಸ್ ಡೇ ವಿಶೇಷ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಮಗುವಂತೆ ಆಟವಾಡಿ, ಪಲ್ಟಿ ಎಲ್ಲಾ ಜೋರಾಗಿ ಹಾಕಿದ್ದಾರೆ.
ಸದ್ಯ ಯಶ್ ತನ್ನ ಮಕ್ಕಳ ಜೊತೆ ಪಲ್ಟಿ ಹಾಕೋ ವಿಡಿಯೋನ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಇನ್ನು ರಣ್‌ಬೀರ್ ಕಪೂರ್ ಜೊತೆ ರಾಮಾಯಣ ಸಿನಿಮಾನ ನಿರ್ಮಾಣ ಮಾಡ್ತಿರೋ ಯಶ್, ತನ್ನ ಟಾಕ್ಸಿಕ್ ಚಿತ್ರದ ಜೊತೆ ಜೊತೆಗೆ ಅದರ ಶೂಟಿಂಗ್‌ನಲ್ಲೂ ಭಾಗಿಯಾಗ್ತಿದ್ದಾರೆ. ರಾವಣನಾಗಿ ಅಬ್ಬರಿಸಲಿರೋ ಯಶ್, ಕೆಜಿಎಫ್ ಬಳಿಕ ಮಗದೊಮ್ಮೆ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲಿದ್ದಾರೆ.
ಇನ್ನು ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕೂಡ ಇದ್ರಿಂದ ಹೊರತಾಗಿಲ್ಲ. ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಹಾಗೂ ಮಕ್ಕಳಿಗಾಗಿ ಸಿನಿಮಾದಷ್ಟೇ ಸಮಯ ಮೀಸಲಿಡ್ತಾರೆ. ಎಲ್ಲೇ ಹೋದರೂ ಸಹ ಮಕ್ಕಳು ಜೊತೆಗೆ ಇದ್ದೇ ಇರ್ತಾರೆ. ಕಾಂತಾರ ಸಿನಿಮಾ ಬಳಿಕ ಮಕ್ಕಳ ಸಮೇತ ಕುಂದಾಪುರದ ಕೆರಾಡಿಗೆ ಶಿಫ್ಟ್ ಆಗಿರೋ ಶೆಟ್ರು, ತಾನು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯನ್ನ ದತ್ತು ಪಡೆದು, ಅಲ್ಲೇ ಮಕ್ಕಳಿಗೂ ಸಹ ಶಿಕ್ಷಣ ಕೊಡಿಸ್ತಿರೋದು ಇಂಟರೆಸ್ಟಿಂಗ್.
ಕಾಂತಾರ-1 ಶೂಟಿಂಗ್ ವೇಳೆ ಸಾಕಷ್ಟು ವಿಘ್ನಗಳು ಸಂಭವಿಸುತ್ತಿದ್ದು, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶೆಟ್ರು, ಮಕ್ಕಳ ಜೊತೆ ಫಾದರ್‌ಹುಡ್‌ನ ಎಂಜಾಯ್ ಮಾಡ್ತಿದ್ದಾರೆ. ವಿಶ್ವ ಅಪ್ಪಂದಿರ ದಿನದ ವಿಶೇಷ ಮಕ್ಕಳಿಗೆ ಸೂಪ್ ಕುಡಿಸೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಅಂದಹಾಗೆ ಕಾಂತಾರ-1 ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದು, ಅಕ್ಟೋಬರ್ 2ಕ್ಕೆ ವರ್ಲ್ಡ್‌ವೈಡ್ ಬೆಳ್ಳಿಪರದೆ ಬೆಳಗಲಿದೆ.
ಮದುವೆ ಬಳಿಕ ಡಾಲಿ ಧನಂಜಯ ಕೂಡ ಸಿನಿಮಾಗಳಿಗೆ ಸಣ್ಣದೊಂದು ಬ್ರೇಕ್ ನೀಡಿದಂತಿದೆ. ಹಾಗಾಗಿಯೇ ಪತ್ನಿ ಡಾ. ಧನ್ಯತಾ ಜೊತೆಗೂಡಿ ಸಿಕ್ಕಾಪಟ್ಟೆ ಸುತ್ತಾಟ ನಡೆಸ್ತಿದ್ದಾರೆ. ಇತ್ತೀಚೆಗೆ ಕಬಿನಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಡಾಲಿ, ಫುಲ್ ಜಾಲಿ ಮಾಡಿದ್ದಾರೆ. ತಮಗಿಷ್ಟದ ಪ್ರಾಣಿ, ಪಕ್ಷಿಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸಿದ್ದಾರೆ.
ಅಂದಹಾಗೆ ಡಾಲಿಗೂ ಇತ್ತೀಚೆಗೆ ತನ್ನ ನಿರ್ಮಾಣದಲ್ಲಿ ತಯಾರಾದ ವಿದ್ಯಾಪತಿ ಸಿನಿಮಾ ನಿರೀಕ್ಷಿತ ಸಕ್ಸಸ್ ಕಾಣಲಿಲ್ಲ. ಇದ್ರಿಂದ ಬೇಸರದಲ್ಲಿದ್ದ ಡಾಲಿ, ಪತ್ನಿ ಜೊತೆ ರೌಂಡ್ಸ್ ಮಾಡ್ತಿರೋದು ಇಂಟರೆಸ್ಟಿಂಗ್. ಒಟ್ಟಾರೆ ಸ್ಟಾರ್‌ಗಳು ಈ ರೀತಿ ಸಿನಿಮೇತರ ಚಟುವಟಿಕೆಗಳಲ್ಲಿರೋದನ್ನ ನೋಡೋದೇ ಚೆಂದ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್