ಹಾಲಿವುಡ್ ಸ್ಟಂಟ್ ಮಾಸ್ಟರ್.. ರಾಕಿಂಗ್ ಸ್ಟಾರ್ ರಾಕ್ಸ್ !

ಮ್ಯಾಡ್ ಮ್ಯಾಕ್ಸ್ ಗಾಯ್ ನೋರಿಸ್ ಜೊತೆ ರಾಕಿಭಾಯ್

Befunky collage 2025 05 29t144122.684

ಕನಸು ಎಲ್ಲರೂ ಕಾಣ್ತಾರೆ. ಆದ್ರೆ ಕಾಣುವ ಕನಸು ಸದಾ ದೊಡ್ಡದಾಗಿರಬೇಕು ಅಂತ ಹೇಳ್ತಿದ್ರು ರಾಕಿಂಗ್ ಸ್ಟಾರ್. ಅದ್ರಂತೆ ಕನಸುಗಳ ಬೆನ್ನತ್ತುವ ಮಾನ್‌ಸ್ಟರ್ ಕೂಡ ಹೌದು ಅನ್ನೋದನ್ನ ಪ್ರೂವ್ ಮಾಡಿದವ್ರು ಯಶ್. ಸದ್ಯ ರಾಮಾಯಣ ಶೂಟಿಂಗ್ ಸೆಟ್‌‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರೋ ರಾಕಿಭಾಯ್, ರಾವಣನಾಗಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಅದೂ ಹಾಲಿವುಡ್‌‌ನ ಟಾಪ್ ಟೆಕ್ನಿಷಿಯನ್ಸ್ ಜೊತೆ ಅನ್ನೋದು ಇಂಟರೆಸ್ಟಿಂಗ್.

ಅಣ್ತಮ್ಮಾ ಇಲ್ಲಿ ಯಾರು ಯಾರನ್ನೂ ಹೀರೋ ಮಾಡಲ್ಲ. ನಮಗೆ ನಾವೇ ಆಗ್ಬೇಕು ಅಂತ ಸಿನಿಮಾ ಡೈಲಾಗ್ ಹೊಡೆದಿದ್ರು ಯಶ್. ಅದು ಸಿನಿಮಾದ ಡೈಲಾಗೇ ಆದ್ರೂ ಅಕ್ಷರಶಃ ನಿಜವೂ ಹೌದು. ಅದಕ್ಕೆ ತಕ್ಕನಾಗಿ ಯಶ್ ಕೂಡ ಯಾವುದೇ ಗಾಡ್‌ಫಾದರ್ ಇಲ್ಲದೆ ಒಂಥರಾ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಪಾಲಿಗೆ ಗಾಡ್ ಆದರು.

ADVERTISEMENT
ADVERTISEMENT

ಅಂದುಕೊಂಡದ್ದನ್ನು ಮಾಡಿ ತೋರಿಸೋ ಜಾಯಮಾನದವರು ಯಶ್. ಹಂತ ಹಂತವಾಗಿ ಚಿತ್ರರಂಗದಲ್ಲಿ ಒಬ್ಬ ಸಾಮಾನ್ಯ ಸೀರಿಯಲ್ ಸ್ಟಾರ್ ಬೆಳೆದ ಪರಿ ನಿಜಕ್ಕೂ ಹುಬ್ಬೇರಿಸುವಂತಿದೆ. ಸದ್ಯ ನ್ಯಾಷನಲ್ ಸ್ಟಾರ್ ಆಗಿ, ಯೂತ್ ಐಕಾನ್ ಆಗಿ ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಕನ್ನಡಿಗರು ನಿರೀಕ್ಷೆ ಮಾಡಿದ್ದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದಾರೆ ರಾಕಿಂಗ್ ಸ್ಟಾರ್.

ಕೆಜಿಎಫ್ ಸಿನಿಮಾ ಐತಿಹಾಸಿಕ ದಾಖಲೆ ಬರೆದ ಬಳಿಕ ಟಾಕ್ಸಿಕ್ ಸಿನಿಮಾ ಶುರು ಮಾಡಿದ್ರು ಯಶ್. ಅದರ ಜೊತೆ ಜೊತೆಗೆ ಬಾಲಿವುಡ್‌ ಪ್ರೊಡಕ್ಷನ್ ಹೌಸ್‌ ಜೊತೆ ತಮ್ಮದೇ ನಿರ್ಮಾಣ ಸಂಸ್ಥೆ ಮಾನ್‌ಸ್ಟರ್ ಕ್ರಿಯೇಷನ್ಸ್ ಕೈ ಜೋಡಿಸುವ ಮೂಲಕ ಮೆಗಾ ಪ್ಯಾನ್ ಇಂಡಿಯಾ ಮೂವಿ ರಾಮಾಯಣ ಸಿನಿಮಾ ಶುಭಾರಂಭ ಮಾಡಿದ್ರು. ದಂಗಲ್ ಖ್ಯಾತಿಯ ಡೈರೆಕ್ಟರ್ ನಿತೀಶ್ ತಿವಾರಿ ನಿರ್ದೇಶನದಲ್ಲಿ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ರಾಮ-ಸೀತೆ-ರಾವಣನಾಗಿ ಬಣ್ಣ ಹಚ್ಚಿದ್ದಾರೆ.

ರಾಮಾಯಣ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದ್ದು, 2026ರ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗ ರಿಲೀಸ್ ಆಗ್ತಿದೆ. ಇನ್ನು ಲಂಕೇಶ್ವರ ಪಾತ್ರಕ್ಕಾಗಿ ಇತ್ತೀಚೆಗೆ ರಾಮಾಯಣ ಸೆಟ್‌‌ಗೆ ರಾಕಿಭಾಯ್ ಯಶ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಮಧ್ಯೆಪ್ರದೇಶದ ಉಜ್ಜಯಿನಿಯಲ್ಲಿರೋ ವಿಶ್ವ ವಿಖ್ಯಾತ ಮಹಾಕಾಳೇಶ್ವರನ ಆಲಯಕ್ಕೆ ತೆರಳಿ ಶಿವನ ದರ್ಶನ ಪಡೆದು, ಸೆಟ್‌ಗೆ ಎಂಟ್ರಿ ಕೊಟ್ಟಿದ್ರು ರಾಕಿಭಾಯ್.

ಇದೀಗ ರಾಮಾಯಣ ಸೆಟ್‌‌ನಲ್ಲಿ ಹಾಲಿವುಡ್‌‌ನ ಖ್ಯಾತ ಸ್ಟಂಟ್ ಮಾಸ್ಟರ್ ಗಾಯ್ ನೋರಿಸ್ ಜೊತೆಗಿರೋ ಯಶ್ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ನಿರ್ದೇಶಕ ನಿತೀಶ್ ತಿವಾರಿ ಜೊತೆ ಯಶ್ ರಾವಣನಾಗಿ ಕ್ಯಾಮೆರಾ ಫೇಸ್ ಮಾಡೋಕೆ ಮುನ್ನ ಗಾಯ್ ನೋರಿಸ್ ಜೊತೆ ಹೈ ವೋಲ್ಟೇಜ್ ಆ್ಯಕ್ಷನ್ ಬ್ಲಾಕ್ಸ್‌‌ ಹೇಗಿರಲಿವೆ ಅನ್ನೋದ್ರ ಬಗ್ಗೆ ಮಾಹಿತಿ ಪಡೆಯುತ್ತಿರೋ ಸ್ಟಿಲ್ಸ್ ಇವಾಗಿವೆ. ಅಂದಹಾಗೆ ಗಾಯ್ ನೋರಿಸ್ ಹಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ಸ್ ಮ್ಯಾಡ್ ಮ್ಯಾಕ್ಸ್, ಸೂಸೈಡ್ ಸ್ಕ್ವ್ಯಾಡ್ ಸಿನಿಮಾಗಳಿಗೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.

ಯಶ್ ಸ್ವ್ಯಾಗ್‌ಗೆ ತಕ್ಕನಾಗಿ ಗಾಯ್ ನೋರಿಸ್ ಸ್ಟಂಟ್ಸ್ ಡಿಸೈನ್ ಮಾಡ್ತಿದ್ದು, ಈ ಹಿಂದೆ ಯಾವ ಸಿನಿಮಾ, ಸೀರಿಯಲ್ ಹಾಗೂ ಸೀರೀಸ್‌‌ನಲ್ಲಿ ಕಾಣಸಿಗದಂತಹ ರಾವಣನ ಯುದ್ಧದ ಸನ್ನಿವೇಶಗಳನ್ನು ಹುಟ್ಟಿಹಾಕಲಿದ್ದಾರಂತೆ. ಅದೇನೇ ಇರಲಿ, ಯಶ್ ಚಿತ್ರದಲ್ಲಿ ಹೀಗೆ ಹಾಲಿವುಡ್‌‌ನ ಮೋಸ್ಟ್ ಡಿಮ್ಯಾಂಡಿಂಗ್ ತಂತ್ರಜ್ಞರು ಕೆಲಸ ಮಾಡ್ತಿರೋದು ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗಿದೆ.

Exit mobile version