ಬ್ಯೂಟಿ ಜೊತೆ ಬ್ರೈನ್ ಇರೋ ನಟಿ… ಮೊದಲ ಸಿನಿಮಾದಲ್ಲೇ ಇಡೀ ಸೌತ್ ಇಂಡಸ್ಟ್ರಿಗೆ ಶಾಕ್ ಕೊಟ್ಟ ಕಿಲಾಡಿ. ಆದ್ರೆ, ಬಿಗ್ ಹೀರೋಗಳ ಜೊತೆ ಬ್ಯಾಕ್-ಟು-ಬ್ಯಾಕ್ ಹಿಟ್ ಕೊಟ್ಟ ಮೇಲೂ ಈ ಬ್ಯೂಟಿಗೆ ಸಿಗಬೇಕಾದ ರಿಯಲ್ ಸ್ಟಾರ್‌ಡಮ್ ಎಲ್ಲೋ ಮಿಸ್ ಆಯ್ತಾ? ‘ಯೂ ಟರ್ನ್’ ಶ್ರದ್ಧಾ ಶ್ರೀನಾಥ್ ಕರಿಯರ್‌ನಲ್ಲಿ ನಡೀತಿರೋ ಆ ಸೈಲೆಂಟ್ ಗೇಮ್ ಏನು? ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಯೂಟರ್ನ್ ಶ್ರದ್ಧಾಗೆ ಬೇಕಿದೆ ಟರ್ನಿಂಗ್ ಪಾಯಿಂಟ್
- ಬ್ಯೂಟಿ ಜೊತೆ ಬ್ರೈನ್.. ಶ್ರದ್ಧಾ ಡಿಫರೆಂಟ್ ಗೇಮ್..!
- ಕಂಟೆಂಟ್ಗಾಗಿ ಗ್ಲಾಮರ್ಗೆ ನೋ ಎಂದ ಶ್ರದ್ಧಾ..!
- ಬಿಗ್ ಹೀರೋಗಳ ಜೊತೆ ನಟಿಸಿದ್ರೂ ಸ್ಟಾರ್‌ಡಮ್ ಮಿಸ್?
ಚಿತ್ರರಂಗಕ್ಕೆ ಎಂಟ್ರಿ ಕೊಡೋದು ದೊಡ್ಡ ವಿಷಯ ಅಲ್ಲ, ಆದ್ರೆ ಬಂದ ತಕ್ಷಣ ಇಡೀ ಇಂಡಸ್ಟ್ರಿ ತನ್ನತ್ತ ತಿರುಗಿ ನೋಡುವಂತೆ ಮಾಡೋದು ರಿಯಲ್ ತಾಕತ್ತು. ‘ಯೂ ಟರ್ನ್’ ಸಿನಿಮಾದಲ್ಲಿ ಶ್ರದ್ಧಾ ಮಾಡಿದ ಆ ಆಕ್ಟಿಂಗ್ ಗೆ ಪ್ರೇಕ್ಷಕರು ಫ್ಲಾಟ್ ಆಗಿದ್ರು. ಕೇವಲ ಒಂದೇ ಒಂದು ಸಿನಿಮಾದಲ್ಲಿ ಕನ್ನಡ, ತಮಿಳು, ತೆಲುಗು ಅಂತ ಮೂರೂ ಭಾಷೆಯ ದೊಡ್ಡ ದೊಡ್ಡ ನಿರ್ಮಾಪಕರು ಇವರ ಕಾಲ್‌ಶೀಟ್‌ಗಾಗಿ ಕ್ಯೂ ನಿಲ್ಲುವಂತೆ ಮಾಡಿದ್ರು.
ಬಂದ ತಕ್ಷಣ ಸಾಲು ಸಾಲು ಗ್ಲಾಮರಸ್ ಪಾತ್ರಗಳು ಹುಡುಕಿಕೊಂಡು ಬಂದರೂ, ಶ್ರದ್ಧಾ ಮಾತ್ರ “ನಂಗೆ ಕಂಟೆಂಟ್ ಮುಖ್ಯ” ಅಂತ ಹಠಕ್ಕೆ ಬಿದ್ದವರಂತೆ ಗಟ್ಟಿ ಪಾತ್ರಗಳನ್ನೇ ಎತ್ತಿಕೊಂಡ್ರು. ವಿಜಯ ಸೇತುಪತಿ, ನಾನಿ ತರಹದ ಸ್ಟಾರ್ಸ್‌ಗಳ ಜೊತೆ ನಟಿಸಿ ಸೈ ಎನಿಸಿಕೊಂಡ್ರು. ಆದ್ರೆ ಇಲ್ಲೇ ಗೇಮ್ ಚೇಂಜ್ ಆಯ್ತು. ಆಡಿಯನ್ಸ್‌ಗೆ ಗ್ಲಾಮರ್ ಮಸಾಲಾ ಬೇಕಿದ್ದಾಗ, ಶ್ರದ್ಧಾ ಬರೀ ನಟನೆಗಷ್ಟೇ ಒತ್ತು ಕೊಟ್ಟಿದ್ದು ಕಮರ್ಷಿಯಲ್ ಲೆಕ್ಕಾಚಾರದಲ್ಲಿ ಸ್ವಲ್ಪ ಹಿನ್ನಡೆ ತಂದಿಟ್ಟಿತು.
ನಂಗೆ ಬರೀ ನಟನೆ ಅಷ್ಟೇ ಅಲ್ಲ, ಹಾಟ್ ಅಂಡ್ ಹ್ಯಾಪನಿಂಗ್ ಲುಕ್‌ನಲ್ಲೂ ಧೂಳೆಬ್ಬಿಸೋಕೆ ಗೊತ್ತು ಅಂತ ಶ್ರದ್ಧಾ ತಮ್ಮ ಬೋಲ್ಡ್ ಲುಕ್ ಮೂಲಕವೇ ಪ್ರೂವ್ ಮಾಡಿದ್ರು. ಅವರ ಹೊಸ ಅವತಾರ ನೋಡಿ ಅಭಿಮಾನಿಗಳು ಕಂಗಾಲಾಗಿದ್ದು ಸುಳ್ಳಲ್ಲ. ಆದರೆ, ಅಷ್ಟರಲ್ಲಾಗಲೇ ಮಾರ್ಕೆಟ್‌ಗೆ ಹೊಸ ಗ್ಲಾಮರ್ ನಟಿಯರ ದಂಡೇ ಬಂದಿಳಿದಿತ್ತು. ಕಾಲಸ್ವರೂಪಕ್ಕೆ ತಕ್ಕಂತೆ ಇಮೇಜ್ ಬದಲಿಸಿದರೂ, ಆ ಬದಲಾವಣೆ ನೀಡಬೇಕಿದ್ದ ರಿಯಲ್ ಬಾಕ್ಸ್ ಆಫೀಸ್ ಕಿಕ್ ಮಾತ್ರ ಸ್ವಲ್ಪ ಲೇಟ್ ಆಯ್ತು.
ಕಳೆದ ವರ್ಷ ಡಾಕು ಮಹಾರಾಜ್, ಕಲಿಯುಗಂ 2064 ನಂತಹ ಡಿಫರೆಂಟ್ ಅಟೆಂಪ್ಟ್ಸ್ ಮೂಲಕ ಸೌಂಡ್ ಮಾಡಿದ್ರೂ, ಅಷ್ಟರ ಮಟ್ಟಿಗೆ ಸಕ್ಸಸ್ ಸಿಗ್ಲಿಲ್ಲ. ಪ್ರಸ್ತುತ ತಮಿಳಿನ ‘ಬ್ರೋ ಕೋಡ್’ ಅಂಗಳದಲ್ಲಿ ಕಾಣ ಸಿಗುತ್ತಿರೋ ಶ್ರದ್ಧಾ ಕೈಯಲ್ಲಿ ಆಫರ್‌ಗಳು ಕಮ್ಮಿ ಇರಬಹುದು, ಆದರೆ ಅವರ ಕ್ರೇಜ್ ಮತ್ತು ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಚಿತ್ರರಂಗದಲ್ಲಿ ಸೈಲೆಂಟ್ ಆಗಿರೋ ಪ್ರತಿಯೊಬ್ಬ ನಟಿಯ ಹಿಂದೆ ಒಂದು ದೊಡ್ಡ ಹಿಸ್ಟರಿ ಇರುತ್ತೆ.
ಕರಿಯರ್‌ನಲ್ಲಿ ಒಂದು ಹಂತದಲ್ಲಿ ಸ್ಲೋಡೌನ್ ಆಗೋದು ಪ್ರತಿಯೊಬ್ಬ ಸ್ಟಾರ್‌ಗೂ ಕಾಮನ್. ಆದ್ರೆ ಶ್ರದ್ಧಾ ಶ್ರೀನಾಥ್ ಅಂದರೆ ಬರೀ ಬ್ಯೂಟಿ ಅಲ್ಲ, ರಿಯಲ್ ಆಕ್ಟರ್. ಇಡೀ ಸೌತ್ ಇಂಡಸ್ಟ್ರಿ ಮತ್ತೆ ಇವರ ಕಡೆ ತಿರುಗಿ ನೋಡೋಕೆ ಬೇಕಿರೋದು ಜಸ್ಟ್ ಒಂದೇ ಒಂದು ಸಾಲಿಡ್ ಕಮರ್ಷಿಯಲ್ ಹಿಟ್. ಆ ಒಂದು ಪವರ್‌ಫುಲ್ ಬ್ರೇಕ್ ಸಿಕ್ಕರೆ ಸಾಕು, ಶ್ರದ್ಧಾ ಮತ್ತೆ ಸೌತ್ ಸಿನಿಮಾ ಸಾಮ್ರಾಜ್ಯದ ಟಾಪ್ ಲೀಗ್‌ನಲ್ಲಿ ಮೆರೆಯೋದಂತೂ ಪಕ್ಕಾ.
