ಅಟೆನ್ಷನ್ ಪ್ಲೀಸ್..! 45 ಭಾಷೆಯಲ್ಲಿ ಯಶ್ ರಾಮಾಯಣ..!

ರಾವಣ ಪಾತ್ರವೇ ಇರಬಹುದು..ಆದ್ರೆ ಅವ್ರೇ ಚಿತ್ರದ ಹೀರೋ

Web (9)

ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್‌ರ ರಾಮಾಯಣ ಚಿತ್ರದ ಬಗ್ಗೆ ಇಲ್ಲಿಯವರೆಗೂ ಯಾರೂ ಎಲ್ಲೂ ಮಾತನಾಡಿಲ್ಲ. ರಾಕಿಭಾಯ್ ಕೂಡ ಅದ್ರ ಬಗ್ಗೆ ಸೀಕ್ರೆಟ್ ಮೇಂಟೇನ್ ಮಾಡ್ತಿದ್ದಾರೆ. ಆದ್ರೆ ಅವರ ಗೆಳೆಯರೊಬ್ಬರು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಸಾಕಷ್ಟು ಅಂಶಗಳನ್ನು ರಿವೀಲ್ ಮಾಡಿದ್ದಾರೆ.

ಯಶ್ ಮಾಸ್ಟರ್‌ಪೀಸ್ ಅಷ್ಟೇ ಅಲ್ಲ ಮಾಸ್ಟರ್ ಮೈಂಡ್ ಕೂಡ  ಹಾಗಾಗಿಯೇ ಕೆಜಿಎಫ್ ಬಳಿಕ ಅವ್ರ ಆಲೋಚನಾ ಲಹರಿ ಬದಲಾಗಿದೆ. ಫಿಲ್ಮ್ ಮೇಕಿಂಗ್, ಮಾರ್ಕೆಟಿಂಗ್ ಧಾಟಿ ಊಹೆಗೂ ನಿಲುಕದಂತಾಗಿದೆ. ನ್ಯಾಷನಲ್ ಜೊತೆ ಇಂಟರ್‌‌ನ್ಯಾಷನಲ್ ಟೆಕ್ನಿಷಿಯನ್ಸ್‌ನ ಇಟ್ಕೊಂಡು ಹಾಲಿವುಡ್ ಚಿತ್ರಗಳಿಗೆ ಕಾಂಪೀಟ್ ಮಾಡುವಂತಹ ಚಿತ್ರಗಳನ್ನ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳು ಕಣ್ಮುಂದೆ ಇರೋ ನಿದರ್ಶನಗಳಾಗಿವೆ.

ಅಂದಹಾಗೆ ಇತ್ತೀಚೆಗೆ ರಾಮಾಯಣ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಿತ್ತು ಚಿತ್ರತಂಡ. ಅದರಲ್ಲಿ ರಾಮ ಪಾತ್ರಧಾರಿ ರಣ್‌ಬೀರ್ ಕಪೂರ್ ಹಾಗೂ ರಾವಣ ಯಶ್‌ರ ಲುಕ್ಸ್ ಅಷ್ಟೇ ಸೆಕೆಂಡ್‌‌ಗಳಲ್ಲಿ ರಿವೀಲ್ ಆಗಿತ್ತು. ಆದ್ರೆ ಅದರ ಮೇಕಿಂಗ್, ಕ್ಲ್ಯಾರಿಟಿ, ವಿಶ್ಯುವಲ್ ಎಫೆಕ್ಟ್ಸ್ ನಿಜಕ್ಕೂ ಅತ್ಯದ್ಭುತ. ಜಸ್ಟ್ ಫಸ್ಟ್ ಲುಕ್ ಈ ರೇಂಜ್‌ಗಿದೆ ಅಂದಾಗ ಸಿನಿಮಾದ ಕ್ವಾಲಿಟಿ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋದನ್ನ ನೀವೇ ಊಹಿಸಿ. ಯಶ್ ಇಲ್ಲಿಯವರೆಗೂ ರಾಮಾಯಣ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದ್ರೆ ಅವ್ರ ಆಪ್ತ ಸ್ನೇಹಿತ ನಿರ್ಮಾಪಕ ಕೆ ಮಂಜು ಮಾತನಾಡಿದ್ದಾರೆ.

ಮುಂಬೈಗೆ ತೆರಳಿದ್ದ ಕೆ ಮಂಜು ಯಶ್‌ರನ್ನ ಭೇಟಿಯಾಗಿದ್ದಾರೆ. ಆಗ ಸುಮಾರು 45 ನಿಮಿಷಗಳ ರಾಮಾಯಣ ಚಿತ್ರದ ಫೋಟೇಜ್ ತೋರಿಸಿರೋ ರಾಕಿಭಾಯ್, ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಯಶ್‌ರದ್ದು ರಾವಣ ಪಾತ್ರವೇ ಇರಬಹುದು. ಆದ್ರೆ ಚಿತ್ರಕ್ಕೆ ಅವರೇ ಹೀರೋ ಎಂದಿದ್ದಾರೆ ಕೆ ಮಂಜು. ದೇವರನ್ನ ನೋಡಬಹುದು, ಆದ್ರೆ ಮುಟ್ಟೋಕೆ ಆಗಲ್ಲ. ಸದ್ಯ ಯಶ್‌ ಮಾರುಕಟ್ಟೆ ಅದೇ ರೀತಿಯಿದೆ. 500 ಕೋಟಿ ಬಜೆಟ್‌‌ನಲ್ಲಿ ಟಾಕ್ಸಿಕ್ ಸೆಟ್‌ ಹಾಕಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ, ಸುಮಾರು 45 ಭಾಷೆಗಳಲ್ಲಿ ರಾಮಾಯಣ ತಯಾರಾಗಲಿದೆ ಅಂತ ಸಾಕಷ್ಟು ವಿಷಯಗಳ ಬಗ್ಗೆ ಗ್ಯಾರಂಟಿ ನ್ಯೂಸ್‌‌ಗೆ ಎಕ್ಸ್‌ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಒಟ್ಟಾರೆ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ದೆಸೆ ತೋರಿಸಿರೋ ಯಶ್, ಇದೀಗ ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ಆಗಲು ಹೊರಟಂತಿದೆ. ಕೆಜಿಎಫ್ ಚಿತ್ರದಲ್ಲಿ ಮುಂಬೈಗೆ ಭಾಯ್ ಆಗಿದ್ರು. ಇದೀಗ ನಿಜ ಜೀವನದಲ್ಲೂ ಭಾರತೀಯ ಚಿತ್ರರಂಗದ ಮುಂಬೈ ಭಾಯಿಜಾನ್ ಆಗಿ ಮಿಂಚು ಹರಿಸ್ತಿದ್ದಾರೆ. ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಆ ನಿಟ್ಟಿನಲ್ಲಿ ಯಶ್ ಮುನ್ನುಗ್ಗುತ್ತಲೇ ಇದ್ದಾರೆ.

 

Exit mobile version