ದಿಲ್‌ರಾಜು ಅಂದು ಹೇಳಿದಂತೆ ರಾಕಿಂಗ್ ಸ್ಟಾರ್ ಯಶ್ ಟ್ರೆಂಡ್ ಸೆಟ್ಟರ್. ರಾಜಮೌಳಿ ಈಗ ಇಂಡಿಯಾನಾ ಜೋನ್ಸ್ ಶೈಲಿಯ ಮೂವಿ ಮಾಡ್ತಿದ್ದಾರೆ. ಆದ್ರೆ ಅವ್ರಿಗೂ ಮೊದಲೇ ಅಂಥದ್ದೊಂದು ಜಾನರ್ ಸಿನಿಮಾ ಮಾಡೋಕೆ ಪ್ಲ್ಯಾನ್ ಮಾಡಿದ್ರು ನಮ್ಮ ಹೆಮ್ಮೆಯ ಕನ್ನಡಿಗ. ಆ ಬಗ್ಗೆ ತಮಿಳಿನ ಸ್ಟಾರ್ ಡೈರೆಕ್ಟರ್ ಒಬ್ರು ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- ಮೌಳಿಗೂ ಮುನ್ನ ಇಂಡಿಯಾನಾ ಜೋನ್ಸ್ ಶೈಲಿಗೆ ಯಶ್ ಹೆಜ್ಜೆ
- ಸರ್ದಾರ್ ಡೈರೆಕ್ಟರ್‌ಗೆ ರಾಕಿಭಾಯ್ ಡೇಟ್ಸ್.. ಮಿತ್ರನ್ ಮಿಸ್ಟರಿ
- ವಾರಣಾಸಿಗೂ ಮೊದಲೇ ರಾಕಿಂಗ್ ಸ್ಟಾರ್ನಿಂದ ಗ್ರೀನ್ ಸಿಗ್ನಲ್
- ಕಥೆ ಫೈನಲ್.. ಡೇಟ್ಸ್ ಕ್ಲ್ಯಾಶ್.. ಮಿತ್ರನ್ ಪ್ರಾಜೆಕ್ಟ್ ಪೆಂಡಿಂಗ್..!!
ನಮ್ಮ ರಾಕಿಂಗ್ ಸ್ಟಾರ್ ಯಶ್ ಅವ್ರ ಸಿನಿಮಾ ಪ್ಯಾಷನ್ ಹಾಗೂ ವಿಷನ್‌ನ ಯಅರೂ ಮ್ಯಾಚ್ ಮಾಡೋಕೆ ಆಗಲ್ಲ. ಅಂಥದ್ದೊಂದು ದೂರದೃಷ್ಠಿ ಇರೋ ಸಿನಿಮೋತ್ಸಾಹಿ ಅವರು ಅನ್ನೋದಕ್ಕೆ ಅವ್ರ ಏಳಿಗೆ, ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆಯೇ ಸಾಕ್ಷಿ. ಅಂದಹಾಗೆ ರಾಜಮೌಳಿ ಸದ್ಯ ವಾರಣಾಸಿ ಅನ್ನೋ ಗ್ಲೋಬಲ್ ಮೂವಿ ಮಾಡ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಲೀಡ್‌ನಲ್ಲಿ ನಟಿಸ್ತಿರೋ ಈ ಸಿನಿಮಾ ಹಾಲಿವುಡ್‌ನ ಇಂಡಿಯಾನಾ ಜೋನ್ಸ್ ಶೈಲಿಯಲ್ಲಿ ತಯಾರಾಗ್ತಿದೆ.
ಅಂದಹಾಗೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ ಇಂಡಿಯಾನಾ ಜೋನ್ಸ್ ಸ್ಟೈಲ್‌ನಲ್ಲಿ ವಾರಣಾಸಿ ಚಿತ್ರ ಮಾಡೋಕೆ ಮೊದಲೇ ನಮ್ಮ ಯಶ್ ಆ ಜಾನರ್ ಸಿನಿಮಾಗೆ ಗೆಜ್ಜೆ ಕಟ್ಟಿದ್ರು ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಹೌದು.. ಟಾಕ್ಸಿಕ್‌ಗೂ ಮೊದಲೇ ಹಾಲಿವುಡ್ ಶೈಲಿಯ ಆ ಸಿನಿಮಾದ ಕಥೆ ಕೂಡ ಕೇಳಿದ್ದ ಯಶ್, ಫುಲ್ ಇಂಪ್ರೆಸ್ ಆಗಿ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೂಡ ನೀಡಿದ್ದರಂತೆ. ಆದ್ರೆ ಟಾಕ್ಸಿಕ್ ಚಿತ್ರದ ಡೇಟ್ಸ್ ಕ್ಲ್ಯಾಶ್‌ನಿಂದಾಗಿ ಆ ಚಿತ್ರ ಸೆಟ್ಟೇರಲೇ ಇಲ್ಲ.
ಇದನ್ನ ನಾವಾಗಿ ನಾವು ಹೇಳ್ತಿರೋದಲ್ಲ. ಖುದ್ದು ಯಶ್‌ಗೆ ಕಥೆ ಹೇಳಿ ಒಪ್ಪಿಸಿದ್ದ ಕಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಮಿತ್ರನ್ ಹೀಗಂತ ಒಂದು ಕಡೆ ಮಾತನಾಡಿದ್ದಾರೆ. ಅಲ್ಲಿಗೆ ಯಶ್ ಹಾಲಿವುಡ್‌ನ ಎವರ್‌ಗ್ರೀನ್ ಮಾಸ್ಟರ್‌ಪೀಸ್ ಸೀರೀಸ್ ಸಿನಿಮಾಗಳಾದ ಇಂಡಿಯಾನಾ ಜೋನ್ಸ್ ಜಾನರ್ ಸಿನಿಮಾಗೆ ಮಾಸ್ಟರ್‌ಪ್ಲ್ಯಾನ್ ಮಾಡಿದ್ರು ಅನ್ನೋದು ಖಚಿತವಾಗಿದೆ. ಎಲ್ಲಾ ಇಂಡಿಯನ್ ಲೆವೆಲ್‌ನಲ್ಲಿ ಯೋಚಿಸ್ತಿದ್ರೆ, ಯಶ್ ಮಾತ್ರ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗೆ ಯೋಜನೆ ರೂಪಿಸಿದ್ರು. ಅದನ್ನ ಮಿತ್ರನ್ ಅವ್ರ ಬಾಯಿಂದಲೇ ಒಮ್ಮೆ ಕೇಳಿಬಿಡಿ.
ತಮಿಳು ನಿರ್ದೇಶಕ ಮಿತ್ರನ್ ನಟ ಕಾರ್ತಿಗೆ ಸರ್ದಾರ್ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಮೂವಿ ನೀಡಿದ್ರು. ಸರ್ದಾರ್-2 ಕೂಡ ರಿಲೀಸ್‌ಗೆ ರೆಡಿಯಿದ್ದು, ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಒಬ್ಬ ಅದ್ಭುತ ನಟ ಹಾಗೂ ಅತ್ಯದ್ಭುತ ಡೈರೆಕ್ಟರ್‌ಗಳು ಒಂದಾದ್ರೆ ವಂಡರ್‌ಗಳನ್ನ ಸೃಷ್ಠಿಸಬಹುದು. ಯಶ್-ಮಿತ್ರನ್ ಜೋಡಿ ಕೂಡ ಅಂಥದ್ದೊಂದು ಮ್ಯಾಜಿಕ್ ಮಾಡಲಿತ್ತು. ಆದ್ರೆ ಜಸ್ಟ್ ಮಿಸ್ ಆಗಿದೆ. ಬಹುಶಃ ಸರ್ದಾರ್-2 ಬಳಿಕ ಮಿತ್ರನ್ ಯಶ್ ಡೇಟ್ಸ್ ಪಡೆದು ಅದೇ ಕಥೆಯನ್ನ ಮಾಡಿದ್ರೂ ಅಚ್ಚರಿಯಿಲ್ಲ.
ಸದ್ಯ ರಾಮಾಯಣ ಸಿನಿಮಾಗಳ ಮೇಲೆ ಫೋಕಸ್ ಮಾಡ್ತಿರೋ ಯಶ್ ಆಯ್ಕೆ ಯಾರಾಗ್ತಾರೆ ಅನ್ನೋದು ಕ್ಯೂರಿಯಾಸಿಟಿ. ಕೆಲವರು ಕೆಜಿಎಫ್-3 ಅಂತಾರೆ. ಮತ್ತಷ್ಟು ಮಂದಿ ಅನಿಮಲ್ ಡೈರೆಕ್ಟರ್ ಆದಿತ್ಯಧಾರ್ ಅಂತಾರೆ ಇದೀಗ ಮಿತ್ರನ್ ಹೆಸರು ಕೂಡ ದಟ್ಟವಾಗಿ ಕೇಳಿಬರ್ತಿದೆ. ಆದ್ರೆ ಯಶ್ ನಡೆ ಯಾವ ಡೈರೆಕ್ಟರ್ ಕಡೆ ಅನ್ನೋದೇ ಸಸ್ಪೆನ್ಸ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
