ಡಿಬಾಸ್ ದರ್ಶನ್ ಜೈಲಿಂದ ಹೊರ ಬರೋದನ್ನೇ ಕಾಯ್ತಾ ಕೂತಿದ್ದ ನಿರ್ದೇಶಕ ತರುಣ್ ಸುಧೀರ್.. ಇದೀಗ ಒಂದು ಸ್ಟ್ರಾಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ. ದಾಸ ಅಲ್ಲೆ ಲಾಕ್ ಆದ ಹಿನ್ನೆಲೆ ಬೇರೆ ಹೀರೋ ಜೊತೆ ನ್ಯೂ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅದ್ಯಾವುದು..? ಯಾವ ಸ್ಟಾರ್..? ಯಾವ ಜಾನರ್ ಅನ್ನೋದ್ರ ಕುರಿತ ಎಕ್ಸ್‌ಕ್ಲೂಸಿವ್ ಸ್ಟೋರಿ ಇಲ್ಲಿದೆ…
- ದಾಸ ಜೈಲಲ್ಲೇ ಲಾಕ್.. ದೊಡ್ಮನೆ ಸ್ಟಾರ್‌ಗೆ ತರುಣ್ ಡೈರೆಕ್ಷನ್
- ಸದ್ಯಕ್ಕೆ ಸಾಧ್ಯವೇ ಇಲ್ಲ D59 ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರ..!
ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಹಾಗೂ ಸೆನ್ಸಿಬಲ್ ಡೈರೆಕ್ಟರ್‌ಗಳಲ್ಲಿ ತರುಣ್ ಸುಧೀರ್ ಅಗ್ರಸ್ಥಾನದಲ್ಲಿ ನಿಲ್ಲುವಂತಹ ಫಿಲ್ಮ್ ಮೇಕರ್. ಅವರ ಸಿನಿಮಾಗಳ ಸಕ್ಸಸ್ ರೇಟ್ ಹಂಡ್ರೆಡ್ ಪರ್ಸೆಂಟ್. ನೋಡುಗರ ನಾಡಿಮಿಡಿತ ಅರಿತು, ಅವರಿಗೆ ರುಚಿಸುವಂತಹ ಸಿನಿಮಾಗಳನ್ನೇ ತೆರೆಗೆ ತರ್ತಾರೆ ತರುಣ್. ಅದೇ ಕಾರಣದಿಂದ ಅವ್ರ ನಿರ್ದೇಶನದ ಹಾಗೂ ನಿರ್ಮಾಣದ ಎಲ್ಲಾ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್. ಅಷ್ಟೇ ಅಲ್ಲ.. ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಚಿತ್ರಗಳು ಕೂಡ ಸೂಪರ್ ಹಿಟ್ ಲಿಸ್ಟ್ ಸೇರಿವೆ.
ಚೌಕ ಸಿನಿಮಾದ ಬಳಿಕ ಡಿಬಾಸ್ ದರ್ಶನ್ ಜೊತೆ ರಾಬರ್ಟ್ ಹಾಗೂ ಕಾಟೇರ ಸಿನಿಮಾಗಳನ್ನ ಮಾಡಿದ್ರು ತರುಣ್. ಕಾಟೇರ ಬೆನ್ನಲ್ಲೇ ನಿರ್ಮಾಪಕಿ ಶೈಲಜಾ ನಾಗ್ ಜೊತೆಗೂಡಿ D59 ಪ್ರಾಜೆಕ್ಟ್ ಕೂಡ ಮಾಡೋದಾಗಿ ಅನೌನ್ಸ್ ಮಾಡಿದ್ರು. ಅಷ್ಟರಲ್ಲೇ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ರು ದಾಸ. ಜೈಲಿಂದ ದರ್ಶನ್ ಅಗೋ ಬರ್ತಾರೆ.. ಇಗೋ ಬರ್ತಾರೆ ಅಂತ ಕಾದು ಕಾದು ಸುಸ್ತಾದ ತರುಣ್, ಸದ್ಯಕ್ಕಂತೂ ವೀರ ಸಿಂಧೂರ ಲಕ್ಷ್ಮಣ ಚಿತ್ರ ಮಾಡೋದು ಸಾಧ್ಯವೇ ಇಲ್ಲ ಅನ್ನೋದನ್ನ ಅರಿತರು.
ಎಷ್ಟು ದಿನ ಅಂತ ಗೆಳೆಯನಿಗಾಗಿ ಕಾಯ್ತಾ ಕೂರೋಕೆ ಸಾಧ್ಯ ನೀವೇ ಹೇಳಿ. ಅದೇ ಕಾರಣದಿಂದ ಇದೀಗ ಹೊಚ್ಚ ಹೊಸ ಪ್ರಾಜೆಕ್ಟ್ ಮಾಡೋಕೆ ಮನಸ್ಸು ಮಾಡಿದ್ದಾರೆ. ಅದೂ ದೊಡ್ಮನೆ ಹೀರೋ ಜೊತೆ ಅನ್ನೋದು ಎಕ್ಸ್‌ಕ್ಲೂಸಿವ್ ಖಬರ್. ಅದ್ಯಾರು ಏನು ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿಯನ್ನ ನಿಮಗೆ ಹೇಳ್ತಾ ಹೋಗ್ತೀವಿ ಎಂಜಾಯ್.
- ಯುವ 3rd ವೆಂಚರ್‌ಗೆ ಅಖಾಡ ರೆಡಿ.. ಯಾವ ಜಾನರ್ ಚಿತ್ರ..?
- ಮಾಸ್ ವಿತ್ ಕಮರ್ಷಿಯಲ್ ಪ್ಯಾಕ್ ತರುಣ್ ಸುಧೀರ್ ನೆಕ್ಸ್ಟ್
ಯೆಸ್.. ದೊಡ್ಮನೆಯ ಮೂರನೇ ತಲೆಮಾರಿನ ಸ್ಟಾರ್ ಯುವರಾಜ್‌ಕುಮಾರ್‌ಗೆ ಸದ್ಯ ತರುಣ್ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಈಗಾಗ್ಲೇ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಯುವ ಹಾಗೂ ರೋಹಿತ್ ಪದಕಿಯ ಎಕ್ಕ ಚಿತ್ರಗಳ ಮೂಲಕ ತನ್ನ ನಟನಾ ಗತ್ತು, ಗಮ್ಮತ್ತು ಎಂಥದ್ದು ಅನ್ನೋದನ್ನ ಯುವರಾಜ್‌ಕುಮಾರ್ ತೋರಿಸಿದ್ದಾರೆ. ನಟನೆ ಅನ್ನೋದು ತನ್ನ ಬ್ಲಡ್‌ನಲ್ಲೇ ಅಡಗಿದೆ ಅನ್ನೋದ್ರ ಪ್ರತೀಕವಾಗಿ ಯೂತ್‌ಗೆ ಬಹಳ ಬೇಗ ಕನೆಕ್ಟ್ ಕೂಡ ಆದ್ರು ಯುವ.
ಇದೀಗ ಯುವ ಮೂರನೇ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ತರುಣ್ ಮುನ್ನುಡಿ ಬರೆಯುತ್ತಿರೋದು ಖುಷಿಯ ವಿಚಾರ. ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾಗೆ ತರುಣ್ ಬರೀ ಆ್ಯಕ್ಷನ್ ಕಟ್ ಅಷ್ಟೇ ಹೇಳ್ತಿಲ್ಲ. ತಮ್ಮದೇ ತರುಣ್ ಟಾಕೀಸ್ ಬ್ಯಾನರ್‌ನಡಿ ಬಂಡವಾಳ ಹೂಡಿಕೆ ಮಾಡಿ, ನಿರ್ಮಾಣ ಕೂಡ ಮಾಡ್ತಿದ್ದಾರೆ. ಅದಕ್ಕೆ ಭೀಮ ಚಿತ್ರದ ನಿರ್ಮಾಪಕ ಜಗದೀಶ್ ಫಿಲಂಸ್‌ನ ಜಗದೀಶ್ ಕೂಡ ಕೈ ಜೋಡಿಸ್ತಿರೋದು ಇಂಟರೆಸ್ಟಿಂಗ್.
ಎಲ್ಲಾ ವಯೋಮಾರ್ಗದ ಆಡಿಯೆನ್ಸ್‌ನ ಗಮನದಲ್ಲಿ ಇಟ್ಕೊಂಡು, ಯುವ ಮೂರನೇ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಡೈಲಾಗ್ಸ್ ಸಿದ್ಧಗೊಳಿಸ್ತಿದ್ದಾರಂತೆ ತರುಣ್ ಸುಧೀರ್. ಒಟ್ಟಾರೆ ಸಿನಿಮಾನ ಹಗಲಿರುಳು ಜೀವಿಸೋ ಅಂತಹ ತರುಣ್, ಈ ಬಾರಿ ಯುವ ಕರಿಯರ್‌ಗೆ ಬಿಗ್ ಬ್ಲಾಕ್ ಬಸ್ಟರ್ ನೀಡುವ ಧಾವಂತದಲ್ಲಿರೋದು ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
