ಮಾನ್‌ಸ್ಟರ್ ರಾಕಿಭಾಯ್ ಯಶ್ ಹಾಗೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಪ್ರಶಾಂತ್ ನೀಲ್ ತುಂಬಾ ದಿನಗಳ ನಂತ್ರ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅದೂ ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಗೌಡ ಮದ್ವೆ ಸಮಾರಂಭದಲ್ಲಿ ಅನ್ನೋದು ಇಂಟರೆಸ್ಟಿಂಗ್. ಭೇಟಿಯಾಗಿದ್ದು ಕಲ್ಯಾಣ ಮಂಟಪದಲ್ಲೇ ಆದ್ರೂ, ಅಲ್ಲಿ ಚರ್ಚೆ ಆಗಿದ್ದೇ ಬೇರೆ ಅನ್ನೋ ಗುಸು ಗುಸು ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಇಷ್ಟಕ್ಕೂ ಏನು ಆ ಗಾಸಿಪ್..? ಕೆಜಿಎಫ್-3 ಯಾವಾಗ..?
ನಟ ಯಶ್ ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಕೆಲಸಗಳಲ್ಲಿ ಮುಳುಗಿದ್ದಾರೆ. ಬೆಂಗಳೂರಿನಲ್ಲಿ ಇರುವುದಕ್ಕಿಂತ ದೇಶ ವಿದೇಶಗಳಿಗೆ ಸುತ್ತಾಡುತ್ತಿರುತ್ತಾರೆ. ಶೂಟಿಂಗ್, ಮೀಟಿಂಗ್ ಅಂತ ಸಖತ್ ಬ್ಯುಸಿಯಾಗಿರ್ತಾರೆ. ಆದರೂ ಹಬ್ಬ, ಕುಟುಂಬ ಹಾಗೂ ಆಪ್ತರ ಕಾರ್ಯಕ್ರಮ ಅಂದಾಗ ಬಿಡುವು ಮಾಡಿಕೊಂಡು ಹಾಜರಾಗುತ್ತಾರೆ. ಅದರಂತೆಯೇ ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡು ನವಜೋಡಿಗೆ ಶುಭಾಶಯ ಕೋರಿದ್ದಾರೆ.

ಕೆಜಿಎಫ್ ಭುವನ್ ಗೌಡ ಮದುವೆಗೆ ಯಶ್ ಹಾಜರ್
ಮಾಸ್ ಲುಕ್‌ನಲ್ಲಿ ಮ್ಯಾರೇಜ್ಗೆ ಎಂಟ್ರಿ ಕೊಟ್ಟ ಯಶ್
ಅದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಹಸಿರು ಬಣ್ಣದ ಉದ್ದನೆಯ ಕುರ್ತಾ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು, ರಗಡ್ ಲುಕ್‌ನಲ್ಲಿ ಯಶ್ ಆಗಮಿಸಿದ್ದರು. ನಿಖಿತಾ ಎಂಬುವವರ ಜೊತೆ ಯಶ್ ನೆಚ್ಚಿನ ಸಿನಿಮಾಟೋಗ್ರಾಫರ್ ಭುವನ್ ಗೌಡ ಮದುವೆ ಅಕ್ಟೋಬರ್ 24ರಂದು ನೆರವೇರಿತು. ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀಲೀಲಾ, ನಟಿ ಶಾನ್ವಿ ಶ್ರೀವಾತ್ಸವ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಈ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ.

ಟಾಕ್ಸಿಕ್‌ಗಾಗಿ ಸ್ಲಿಮ್ & ಫಿಟ್ ಆದ ರಾಕಿಂಗ್ ಸ್ಟಾರ್..!
ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಪ್ರಶಾಂತ್ ನೀಲ್..!
KGF ಟೀಂ ರೀ-ಯುನೈಟ್.. ಕೆಜಿಎಫ್-3 ಯಾವಾಗ..?
ಸ್ಟಿಲ್ ಫೋಟೋಗ್ರಾಫರ್ ಆಗಿ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳ ಫೋಟೋಶೂಟ್ ಮಾಡುತ್ತಿದ್ದವರು ಭುವನ್ ಗೌಡ. ಉಗ್ರಂ ಚಿತ್ರದ ಸಮಯದಲ್ಲಿ ಪ್ರಶಾಂತ್ ನೀಲ್ ಅವರಿಗೆ ಪರಿಚಿತರಾಗಿದ್ದರು. ತಮ್ಮ ಅದ್ಭುತ ಫ್ರೇಮ್‌ಗಳಿಂದ ನೀಲ್ ಮನಸ್ಸು ಗೆದ್ದ ಭುವನ್, ಬಳಿಕ ಹಿಂತಿರುಗಿ ನೋಡಲಿಲ್ಲ. ಲೊಡ್ಡೆ, ರಥಾವರ ಹಾಗೂ ಪುಷ್ಪಕ ವಿಮಾನ ಚಿತ್ರಗಳಲ್ಲಿ ತಮ್ಮ ಕ್ಯಾಮೆರಾ ಕೈಚಳಕ ಪ್ರದರ್ಶಿಸಿದ್ದರು. ಯಶ್ ಕಾಂಬಿನೇಷನ್‌ನಲ್ಲಿ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಆರಂಭಿಸಿದಾಗ, ಮತ್ತೆ ಛಾಯಾಗ್ರಹಕರಾಗಿ ನೆನಪಾಗಿದ್ದು ಭುವನ್ ಗೌಡ. ಅಲ್ಲಿಂದ ನೀಲ್ ಸಿನಿಮಾಗಳ ಕ್ಯಾಮೆರಾ ಕಣ್ಣಾದ್ರು ಭುವನ್. ಕೆಜಿಎಫ್-2, ಸಲಾರ್ ಆಯ್ತು. ಈಗ ಡ್ರ್ಯಾಗನ್ ನಂತ್ರ ಸಲಾರ್-2ಗೂ ಇವರೇ ಫ್ರೇಮ್ ಇಡ್ತಿದ್ದಾರೆ.
 ಹಾಗೆ ನೋಡಿದ್ರೆ ಕೆಜಿಎಫ್ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಯಶ್ ಹಾಗೂ ಪ್ರಶಾಂತ್ ನೀಲ್ ಹೇಗೆ ಕಾರಣ ಆದ್ರೋ, ಅದೇ ರೀತಿ ಸಿನಿಮಾಟೋಗ್ರಾಫರ್ ಭುವನ್ ಗೌಡ ಅವರ ಪಾತ್ರವೂ ಕೂಡ ಅಷ್ಟೇ ಇದೆ. ಕೆಜಿಎಫ್ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ ಅಂದ್ರೆ, ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ ಅಂದ್ರೆ ಅದಕ್ಕೆ ಇದೇ ಭುವನ್ ಗೌಡ ಕಾರಣ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿ ಯಶ್ ಹಾಗೂ ಪ್ರಶಾಂತ್ ನೀಲ್ ಭುವನ್ ಗೌಡ ಅವರ ಮದುವೆಗೆ ಭೇಟಿ ಕೊಟ್ಟು ಶುಭ ಹಾರೈಸಿದ್ದಾರೆ. ಈ ವೇಳೆ ಪ್ರಶಾಂತ್ ನೀಲ್ ಹೇರ್ ಸ್ಟೈಲ್ ಫುಲ್ ಚೇಂಜ್ ಆಗಿದ್ದು ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

 ಇನ್ನೂ ಬಹಳ ತಿಂಗಳ ನಂತ್ರ ಭೇಟಿಯಾದ ಪ್ರಶಾಂತ್ ನೀಲ್ ಹಾಗೂ ಯಶ್, ಇಡೀ ಕೆಜಿಎಫ್ ಟೀಂ ರೀ ಯುನೈಟ್ ಆಗುವಂತಾಗಿದೆ. ಕೆಜಿಎಫ್-3 ಬಗ್ಗೆ ಕೂಡ ಸಾಕಷ್ಟು ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. KGF ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾಗಳು ವಿಶ್ವದಾದ್ಯಂತ ಹುಟ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಕಲೆಕ್ಷನ್ ವಿಚಾರದಲ್ಲೂ ಕೆಜಿಎಫ್ ಸಿನಿಮಾ ಸಾವಿರ ಕೋಟಿ ರೂಪಾಯಿ ಗಡಿ ದಾಟಿದ್ದು ಗೊತ್ತೇಯಿದೆ. ಆಫ್ಟರ್ ಕೆಜಿಎಫ್ ಯಶ್ ಹಾಗೂ ಪ್ರಶಾಂತ್ ನೀಲ್ ಅವರು ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಯಶ್ ಸದ್ಯ ಟಾಕ್ಸಿಕ್  ಹಾಗೂ ರಾಮಾಯಣದಲ್ಲಿ ಬ್ಯುಸಿಯಿದ್ರೆ, ಪ್ರಶಾಂತ್ ನೀಲ್ ಪಕ್ಕದ ಟಾಲಿವುಡ್ ಸ್ಟಾರ್ ಎನ್ಟಿಆರ್ ಜೊತೆಗೆ ಡ್ರ್ಯಾಗನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ನಂತ್ರವೇ ಕೆಜಿಎಫ್-3. ಈ ಸಂಭ್ರಮಕ್ಕೆ ಇನ್ನೂ 10 ವರ್ಷಗಳು ಬೇಕು ಅಂತಿವೆ ಮೂಲಗಳು.