ಕೀರ್ತಿ ಪಾಟೀಲ್, ಫೈಲ್ ಬ್ಯೂರೋ, ಗ್ಯಾರಂಟಿ ನ್ಯೂಸ್
ರಾಕಿಂಗ್ ಸ್ಟಾರ್ ಯಶ್ ಇದೊಂದು ಹೆಸರಲ್ಲ ಇದೊಂದು ಸಾಧನೆಯ ಶಿಖರ ಅಂತ ಅವರ ಅಭಿಮಾನಿಗಳು ಹೆಮ್ಮೆ ಪಡ್ತಿದ್ದಾರೆ. ಹೀಗಿರುವಾಗ ಈ ವರ್ಷ ಯಶ್ ಫ್ಯಾನ್ಸ್ ಗೆ ಸಿಗೋ ಗಿಫ್ಟ್ ಏನು..? ಪ್ಯಾನ್ ಇಂಡಿಯಾದ ಪವರ್ ಫುಲ್ ಸ್ಟಾರ್ ಫ್ಯಾನ್ಸ್ ಮೀಟ್ ಮಾಡ್ತಾರಾ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಧನೆಯ ಶಿಖರದಲ್ಲಿರುವಾಗ್ಲೇ ಅವರ ಅಭಿಮಾನಿಗಳು ಸಂಭ್ರಮಿಸೋಕೆ ಸಜ್ಜಾಗೋ ದಿನವೂ ಬರ್ತಿದೆ. ಆ ದಿನವೇ ಜನವರಿ 8 ..ಯೆಸ್ ಮಾಸ್ಟರ್ ಪೀಸ್ ಬರ್ತ್ ಡೇ ಗೆ ಕೌಂಟ್ ಡೌನ್ ಶುರುವಾಗಿದ್ದು ನಾಲ್ಕು ದಿನ ಬಾಕಿ ಇರುವಾಗ್ಲೆ ಯಶ್ ಫ್ಯಾನ್ಸ್ ಭರ್ಜಿರಿಯಾಗಿ ಟಾಕ್ಸಿಕ್ ಅಪ್ ಡೇಟ್ ಜೊತೆ ಸಂಭ್ರಮಿಸೋಕೆ ರೆಡಿಯಾಗಿದ್ದಾರೆ.
ಆದಷ್ಟು ಬೇಗ ಭೇಟಿ ಆಗ್ತೀನಿ ಎಂದಿದ್ದ ಯಶ್..!
ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಕಾದಿದೆ ಬಿಗ್ ಸರ್‌ಪ್ರೈಸ್
ಆರಂಭದಲ್ಲಿ ರಂಗಭೂಮಿ ಕಲಾವಿದನಾಗಿ ಬಂದ ಯಶ್ ತಾನು ಎಷ್ಟು ಎತ್ತರಕ್ಕೆ ಏರಬೇಕು ಅಂತ ಅಂದುಕೊಂಡಿದ್ರೂ ಅದಕ್ಕಿಂತ ದೊಡ್ಡ ಮಟ್ಟಕ್ಕೆ ಬೆಳೆದ ಯಶ್ ಈಗ ಭಾರತೀಯ ಚಿತ್ರರಂಗವೇ ಬೆರಗಾಗೋ ರೀತಿ ಬಣ್ಣದ ಬದುಕಿನಲ್ಲಿ ಚಾಪು ಮೂಡಿಸಿದ್ದಾರೆ. ಅಂದಹಾಗೆ ಯಶ್ ಕಜಿಎಪ್ ಸಿನಿಮಾ ರಿಲೀಸ್ ವೇಳೆ ಅಂದ್ರೆ ಐದು ವರ್ಷದ ಹಿಂದೆ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಭರ್ಜರಿ ಬರ್ತ್ ಡೇ ಮಾಡಿಕೊಂಡಿದ್ರು. ಆ ವೇಳೆ ಅವರ ಅಭಿಮಾನಿಗಳು ಬರೋಬ್ಬರಿ 216 ಅಡಿ ಕಟೌಟ್ ನಿಲ್ಲಿಸಿ ತಮ್ಮ ಸ್ಟಾರ್ ನಟನನ್ನ ಅಭಿಮಾನಿಗಳು ಆರಾಧಿಸಿದ್ರು. ಆಗ ಅಭಿಮಾನಿಗಳಿಗೆ ಸಿಕ್ಕ ಯಶ್ ಮತ್ತೆ ಬಹಿರಂಗವಾಗಿ ಫ್ಯಾನ್ಸ್ ನ ಮೀಟ್ ಆಗ್ಲೇಯಿಲ್ಲ
ಅದಾದ ನಂತರ ರಾಜಾಹುಲಿ ಬರ್ತ್ ಡೇ ದಿನ ಗದಗ್ ಜಿಲ್ಲೆಯ ಸೂರಣಗಿಯಲ್ಲಿ ಯಶ್ ಅಭಿಮಾನಿಗಳು ಬ್ಯಾನರ್ ಕಟ್ಟೋಕೆ ಹೋಗಿ ಮರಣ ಹೊಂದಿದ್ರು. ಈ ಘಟನೆ ಅಕ್ಷರಸಹ ಯಶ್ ಗೆ ಶಾಕ್ ನೀಡಿತ್ತು. ಅಭಿಮಾನಿಗಳ ಅತಿರೇಕಕ್ಕೆ ಯಶ್ ಕೂಡ ಬೇಸರ ಹೊರ ಹಾಕಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸೋಕೆ ನಿರಾಕರಿಸಿದ್ರು.
ರಾಕಿಂಗ್ ಬರ್ತ್ಡೇ ದಿನ ಫ್ಯಾನ್ಸ್ ಗೆ ದರ್ಶನ ನೀಡ್ತಾರಾ ಯಶ್..?
ಐದು ವರ್ಷಗಳ ನಂತರ ಟಾಕ್ಸಿಕ್ ಕಿಕ್ ಜೊತೆ ರಾಕಿ ಲುಕ್
ಕಳೆದ ಬಾರಿಯೂ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಯಶ್ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. ನನ್ನ ಹುಟ್ಟುಹಬ್ಬ ಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ, ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ ಎಂದಿದ್ದರು. ಹೀಗಾಗಿ ಕಾರಣಾಂತರದಿಂದ ಅದ್ದೂರಿ ಬರ್ತ್ ಡೇ ಗೆ ಬ್ರೇಕ್ ಹಾಕಿದ್ದ ಯಶ್ ಈ ಭಾರಿ ತಮ್ಮ 39ನೇ ಹುಟ್ಟುಹಬ್ಬಕ್ಕೆ ಮತ್ತೆ ಅಭಿಮಾನಿಗಳಿಗೆ ದರ್ಶನ ಕೊಡೋ ಪ್ಲಾನ್ ನಲ್ಲಿದ್ದಾರಂತೆ. ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಜನವರಿ 8 ರಂದು ಫ್ಯಾನ್ಸ್ ಬೇಟಿ ಮಾಡೋ ಸಾಧ್ಯತೆ ಇದೆ. ಮಾರ್ಚ್ ನಲ್ಲಿ ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಅಭಿಮಾನಿಗಳಿಗೆ ದರ್ಶನ ನೀಡೋ ಸಾಧ್ಯತೆ ಇದೆ.
ಈಗಾಗಲೇ ಟಾಕ್ಸಿಕ್ ಸಿನಿಮಾದ ಘಟಾನುಗಟಿ ನಾಯಕಿಯರ ಪೋಸ್ಟರ್ಗಳನ್ನು ಬಿಡುಗಡೆ ಆಗಿದೆ. ಗಂಗ ಪಾತ್ರದಲ್ಲಿ ನಯನತಾರಾ, ‘ನದಿಯಾ’ಯಾಗಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಆಗಿ ಹುಮಾ ಖುರೇಷಿ ಮತ್ತು ರೆಬೆಕಾ ಆಗಿ ತಾರಾ ಸುತಾರಿಯಾ ಅಭಿನಯಿಸಿದ್ದಾರೆ. ಸದ್ಯ ಕಳೆದ ವರ್ಷ ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಯಶ್ ಅವರ ಹುಟ್ಟುಹಬ್ಬದಂದೇ ಬಿಡುಗಡೆ ಆಗಿತ್ತು. ಇದೀಗ ಮತ್ತೊಮ್ಮೆ ಯಶ್ ಹುಟ್ಟುಹಬ್ಬದಂದೇ ಸಿನಿಮಾದ ಟೀಸರ್ ಅಥವಾ ಟ್ರೈಲರ್ ಬಿಡುಗಡೆ ಆಗುವ ಸಾಧ್ಯತೆ ಇದೆ.





