ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಹಾಗೇನೆ, ಅವರು ಮಾಡೋದೆಲ್ಲಾ ಡಿಫರೆಂಟ್, ಪ್ಲ್ಯಾನ್ ಮಾಡೋದೆಲ್ಲಾ ನೆಕ್ಸ್ಟ್ ಲೆವೆಲ್. ಕೆಜಿಎಫ್ ಆಯ್ತು, ಈಗ ‘ಟಾಕ್ಸಿಕ್’ ಸರದಿ. ಆದರೆ ಇಲ್ಲಿ ಕೇವಲ ಬಿಗ್ ಸ್ಕ್ರೀನ್ ಮೇಲೆ ಮಾತ್ರವಲ್ಲ, ಈಗ ನಿಮ್ಮ ಮೊಬೈಲ್ ಗೇಮ್‌ಗಳಲ್ಲೂ ರಾಯ ಬರ್ತಿದ್ದಾನೆ. ಹಾಲಿವುಡ್ ಮಂದಿಗೂ ಸವಾಲು ಹಾಕಿರೋ ಯಶ್, ಈಗ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ ಜೊತೆ ಕೈಜೋಡಿಸಿ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ್ದಾರೆ. ಅಷ್ಟಕ್ಕೂ ಗೇಮಿಂಗ್ ಅಖಾಡದಲ್ಲಿ ಟಾಕ್ಸಿಕ್ ರಾಯ ಮಾಡ್ತಿರೋ ಮ್ಯಾಜಿಕ್ ಏನು? ಅಂತ ತಿಳ್ಕೊಬೇಕಾ ಈ ಸ್ಟೋರಿ ನೋಡಿ.
- ಬ್ಯಾಟಲ್‌ಗ್ರೌಂಡ್ಸ್‌ನಲ್ಲಿ ರಾಯನ ಆಕ್ಷನ್, ಯಶ್ ಅಭಿಮಾನಿಗಳಿಗೆ ಹಬ್ಬ
- ಗೇಮಿಂಗ್ ಲೋಕಕ್ಕೆ ಟಾಕ್ಸಿಕ್ ಎಂಟ್ರಿ, 4.4 ಅಪ್ಡೇಟ್ ನಲ್ಲಿ ರಾಯ
- ಸಿನಿಮಾ ಪ್ರಮೋಷನ್‌ನಲ್ಲಿ ಯಶ್ ಟಾಕ್ಸಿಕ್ ಹೊಸ ಹಿಸ್ಟರಿ..!
- ಹಾಲಿವುಡ್ ಮಂದಿಗೆ ಶಾಕ್, 9 ನಿಮಿಷದ ಫುಟೇಜ್ಗೆ ಫಾರಿನ್ ಫ್ಯಾನ್ಸ್ ಫಿದಾ
ಸಿನಿಮಾ ಪ್ರಮೋಷನ್ ಅಂದ್ರೆ ಕೇವಲ ಪೋಸ್ಟರ್, ಟ್ರೈಲರ್ ಅಂದುಕೊಂಡಿದ್ದ ಕಾಲ ಹೋಯ್ತು. ಈಗೇನಿದ್ದರೂ ಯಶ್ ಸ್ಟೈಲ್ ಅಲ್ಟ್ರಾ ಮಾಡರ್ನ್ ವರ್ಕ್ ಆಗುತ್ತೆ. ಭಾರತದ ಅತ್ಯಂತ ಜನಪ್ರಿಯ ಆನ್‌ಲೈನ್ ಗೇಮ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಜೊತೆ ‘ಟಾಕ್ಸಿಕ್’ ಚಿತ್ರತಂಡ ಬಿಗ್ ಡೀಲ್ ಮಾಡಿಕೊಂಡಿದೆ ಎಂಬ ಸುದ್ದಿ ಈಗ ಗ್ಲೋಬಲ್ ಮಟ್ಟದವರೆಗೆ ಬೆಂಕಿ ಹಚ್ಚಿದೆ. ಗೇಮ್ ಪ್ರಿಯರ ಅಖಾಡಕ್ಕೆ ರಾಯನ ಎಂಟ್ರಿ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಡಿಜಿಟಲ್ ಸುನಾಮಿ ಎದ್ದಿದೆ. ಇದು ಕೇವಲ ಪ್ರಮೋಷನ್ ಅಲ್ಲ, ಯಶ್ ಬ್ರ್ಯಾಂಡ್‌ನ ಅಸಲಿ ಪವರ್.
BGMI ತನ್ನ ಮುಂದಿನ 4.4 ವರ್ಷನ್ ಅಪ್‌ಡೇಟ್‌ನಲ್ಲಿ ‘ಟಾಕ್ಸಿಕ್’ ಸಿನಿಮಾದ ರಾಯನ ಇನ್‌ಟೆನ್ಸ್ ಆಕ್ಷನ್ ಮತ್ತು ಸ್ಟೈಲ್ ಅನ್ನು ಅಳವಡಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಅಂದರೆ, ನೀವು ಗೇಮ್ ಆಡುವಾಗ ರಾಯನ ಆ ಕಿಲ್ಲರ್ ಲುಕ್, ಸಿಗಾರ್ ಸೇದೋ ಸ್ಟೈಲ್ ಮತ್ತು ಆ ಹ್ಯಾಟ್ ಧರಿಸಿದ ಅವತಾರವನ್ನು ಕಾಣಬಹುದು. ನಿಮ್ಮ ಫೇವರಿಟ್ ಗೇಮ್‌ನಲ್ಲಿ ರಾಕಿಂಗ್ ಸ್ಟಾರ್ ಅವರನ್ನೇ ಕಂಟ್ರೋಲ್ ಮಾಡೋ ಅವಕಾಶ ಸಿಗಬಹುದು ಎಂಬ ಟಾಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಶತ್ರುಗಳನ್ನು ಬೇಟೆಯಾಡಲು ರಾಯ ಇನ್ನು ನಿಮ್ಮ ಮೊಬೈಲ್ ಪರದೆಯ ಮೇಲಿರುತ್ತಾನೆ.
ಇನ್ನು ಟಾಕ್ಸಿಕ್ ಸಿನಿಮಾ ಯಾಕೆ ಪದೇ ಪದೇ ಮುಂದೂಡಲ್ಪಡುತ್ತಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಯಶ್ ಮನಸ್ಸು ಮಾಡಿರೋದು ಕೇವಲ ಇಂಡಿಯಾದಲ್ಲಿ ಅಲ್ಲ, ಇಡೀ ವಿಶ್ವದ ಪ್ರತಿ ಗಲ್ಲಿಯಲ್ಲೂ ರಾಯನ ಸದ್ದು ಕೇಳಿಸಬೇಕು ಅಂತ. ಹಾಲಿವುಡ್ ವಿತರಣಾ ಸಂಸ್ಥೆಗಳ ಜೊತೆ ದೊಡ್ಡ ಮಟ್ಟದ ಮಾತುಕತೆ ನಡೆಯುತ್ತಿದೆ. ಜೂನ್ 4ಕ್ಕೆ ಬರಬೇಕಿದ್ದ ಸಿನಿಮಾ ಈಗ ಆಗಸ್ಟ್ ಅಥವಾ ರಕ್ಷಾ ಬಂಧನದ ಹಬ್ಬದ ದಿನದಂದು ಅಬ್ಬರಿಸುವ ಲಕ್ಷಣಗಳಿವೆ. ತಡವಾದರೂ ಪರವಾಗಿಲ್ಲ, ಜಾಗತಿಕ ಮಟ್ಟದಲ್ಲಿ ಕನ್ನಡದ ಪತಾಕೆ ಹಾರಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ನಮ್ಮ ಯಶ್.
ಇತ್ತೀಚೆಗೆ ನಡೆದ ‘ಸಿನಿಮಾಕಾನ್’ ವೇದಿಕೆಯಲ್ಲಿ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ 9 ನಿಮಿಷದ ಫುಟೇಜ್ ತೋರಿಸಿ ಬಂದಿದ್ದಾರಂತೆ. ಆ ಹೈ-ಆಕ್ಷನ್ ದೃಶ್ಯಗಳನ್ನು ಕಂಡು ಹಾಲಿವುಡ್ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಸಿನಿಮಾ ಮುಂದೆ ಹೋಗಿದ್ದರೂ, ಈಗ ಸಿಕ್ಕಿರೋ ಈ ಅಂತರಾಷ್ಟ್ರೀಯ ಎಕ್ಸ್‌ಪೋಷರ್ ಸಿನಿಮಾಗೆ ಮೈಲೇಜ್ ತಂದುಕೊಟ್ಟಿದೆ. ನಯನತಾರಾ ನಟಿಸುತ್ತಿರುವ ಈ ಚಿತ್ರದ ಆಕ್ಷನ್ ದೃಶ್ಯಗಳು ಹಾಲಿವುಡ್ ಸಿನಿಮಾಗಳಿಗೂ ಟಕ್ಕರ್ ಕೊಡುವಂತಿದೆಯಂತೆ.
ಸದ್ಯಕ್ಕೆ ‘ಟಾಕ್ಸಿಕ್’ ಚಿತ್ರತಂಡ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಗೇಮಿಂಗ್ ಪ್ರೊಮೋಷನ್ ಮತ್ತು ಹಾಲಿವುಡ್ ಡೀಲ್‌ಗಳು ಅಂತಿಮ ಹಂತಕ್ಕೆ ಬಂದಿವೆ. ಆಗಸ್ಟ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ. ಕೆಜಿಎಫ್-2 ಬಂದು ನಾಲ್ಕು ವರ್ಷವಾದರೂ ಯಶ್ ಅವರ ಕ್ರೇಜ್ ಕಮ್ಮಿಯಾಗಿಲ್ಲ, ಬದಲಾಗಿ ಈ ಬಿಜಿಎಂಐ ಲಿಂಕ್ ಅಪ್ ಸುದ್ದಿ ಬಂದಾಗಿನಿಂದ ಗೇಮರ್ಸ್ ಕೂಡ ರಾಯನ ಫ್ಯಾನ್ಸ್ ಆಗಿ ಬದಲಾಗುತ್ತಿದ್ದಾರೆ. ಒಟ್ಟಿನಲ್ಲಿ ಯಶ್ ಈ ಬಾರಿ ಕೇವಲ ಥಿಯೇಟರ್ ಅಲ್ಲ, ಗೇಮಿಂಗ್ ಲೋಕಕ್ಕೂ ಎಂಟ್ರಿ ಕೊಡ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
