ಅದ್ಯಾಕೋ ನಮ್ಮ ಇಂಡಿಯನ್ ಡೈರೆಕ್ಟರ್ಸ್ ಎಲ್ಲಾ ಕ್ರೌರ್ಯದ ಹಿಂದೆ ಜೋತು ಬೀಳ್ತಿದ್ದಾರೆ. ಸಿಕ್ಕಾಪಟ್ಟೆ ವೈಲೆನ್ಸ್‌ನಿಂದ ಥಿಯೇಟರ್ ಸೈಲೆನ್ಸ್‌ನ ಬ್ರೇಕ್ ಮಾಡ್ತಿದ್ದಾರೆ. ನಿಜಕ್ಕೂ ಇವ್ರಿಗೆ ಸೆನ್ಸ್ ಇಲ್ವಾ ಗುರು ಅಂತ ಜನ ಮಾತಾಡಿಕೊಳ್ಳುವಂತೆ ಮಾಡ್ತಿದ್ದಾರೆ. ಅದಕ್ಕೆ ನಮ್ಮ ಕನ್ನಡದ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳ್ತಿರೋ ಬಾಲಿವುಡ್‌ನ ಬಾಘಿ-4 ಟೀಸರ್ ಪ್ರತ್ಯಕ್ಷ ಸಾಕ್ಷಿ.
- ಅಬ್ಬಬ್ಬಾ.. ಬಾಘಿ-4 ನೋಡೋಕೆ 2 ಗುಂಡಿಗೆ ಬೇಕು ಗುರು..!
- ಇವರೇನು ನಟರುಗಳಾ ಅಥ್ವಾ ನರರಾಕ್ಷಸರಾ..? ನೀವೇ ಹೇಳಿ
- ವೈಲೆನ್ಸ್ ಹಿಂದೆ ಬೀಳ್ತಿರೋದ್ಯಾಕೆ ಇಂಡಿಯನ್ ಡೈರೆಕ್ಟರ್ಸ್ ?
- ಹರ್ಷ ನಿರ್ದೇಶನದಲ್ಲಿ ಟೈಗರ್ ವರ್ಸಸ್ ಸಂಜಯ್ ದತ್ !
ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್.. ಬಟ್ ವೈಲೆನ್ಸ್ ಲೈಕ್ಸ್ ಮೀ. ಐ ಕಾಂಟ್ ಅವಾಯ್ಡ್. ಇದು ಕೆಜಿಎಫ್-2ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಧೀರ ಪಾತ್ರಧಾರಿ ಸಂಜಯ್ ದತ್‌ಗೆ ಹೇಳುವ ಹೈ ವೋಲ್ಟೇಜ್ ಡೈಲಾಗ್. ಆದ್ರೆ ಇದೀಗ ಅದೇ ಸಂಜಯ್ ದತ್ ನಟನೆಯ ಬಾಘಿ-4 ಟೀಸರ್ ರಿಲೀಸ್ ಆಗಿದೆ. ಅದರಲ್ಲಿ ಸಂಜು ಬಾಬಾ ಖಡಕ್ ಖಳನಾಯಕನಾಗಿ ರಕ್ತದೋಕುಳಿ ಹರಿಸ್ತಿದ್ದಾರೆ.
ಅರೇ.. ವಿಲನ್ ಆಗಿದ್ದುಕೊಂಡು ಅವರೇ ಅಷ್ಟು ರಕ್ತ ಹರಿಸಿದ್ರೆ ಇನ್ನು ಹೀರೋ ಆದ ಟೈಗರ್ ಶ್ರಾಫ್ ಎಷ್ಟು ರಕ್ತ ಹರಿಸಬೇಕು ನೀವೇ ಹೇಳಿ. ಅದಕ್ಕೆ ಅಂತ ಟೈಗರ್ ಶ್ರಾಫ್, ಜಂಗಲ್‌ನಲ್ಲಿರೋ ಟೈಗರ್ ರೀತಿ ಬೇಟೆ ಆಡುವ ದೃಶ್ಯಗಳು ಭಯಾನಕ ಹಾಗೂ ಭೀಭತ್ಸವಾಗಿವೆ. ನಾಯಕನಟಿ ಏನೂ ಕಮ್ಮಿ ಇಲ್ಲ. ಆಕೆ ಕೂಡ ರಕ್ತದ ಹೊಳೆ ಹರಿಸ್ತಾರೆ. ಯಾರ ಕೈಯಲ್ಲಿ ನೋಡಿದ್ರೂ ಕತ್ತಿ, ವೆಪನ್‌ಗಳೇ. ಮೈಯೆಲ್ಲಾ ರಕ್ತ. ಮನುಷ್ಯನ ದೇಹಗಳಿಗೆ ಇಲ್ಲಿ ಬೆಲೆಯೇ ಇಲ್ಲ.
ಸಾಜಿದ್ ನದಿಯದ್ವಾಲಾ ಕಥೆ ಬರೆದು ನಿರ್ಮಾಣ ಮಾಡಿರೋ ಈ ಸಿನಿಮಾನ ನಮ್ಮ ಕನ್ನಡದ ಭಜರಂಗಿ, ವಜ್ರಕಾಯ ಫೇಮ್ ಡೈರೆಕ್ಟರ್ ಎ ಹರ್ಷ ನಿರ್ದೇಶಿಸಿದ್ದಾರೆ. ಅದ್ಯಾಕೋ ಹರ್ಷ ಡೈರೆಕ್ಷನ್‌ನಲ್ಲಿ ಸಂದೀಪ್ ರೆಡ್ಡಿ ವಂಗಾ, ಮಾರ್ಕೋ ಡೈರೆಕ್ಟರ್ ಹಾಗೂ ಪ್ರಶಾಂತ್ ನೀಲ್ ಆವರಿಸಿಕೊಂಡು ಬಿಟ್ಟಿದ್ದಾರೆ. ಅವ್ರ ಕೆಜಿಎಫ್, ಅನಿಮಲ್, ಮಾರ್ಕೋ ಚಿತ್ರಗಳಿಗಿಂತ ಭಯಂಕರವಾಗಿದೆ ಬಾಘಿ-4 ಟೀಸರ್ ಝಲಕ್. ಇದು ಜಸ್ಟ್ ಟೀಸರ್. ನೋಡೋಕೆ ಎರಡು ಕಣ್ಣು ಸಾಲ್ತಿಲ್ಲ. ಅಂಥದ್ರಲ್ಲಿ ಸಿನಿಮಾ ಹೇಗಿರಲಿದೆ ಅನ್ನೋ ಭಯ ಕಾಡ್ತಿದೆ ಪ್ರೇಕ್ಷಕರಿಗೆ.
ಇದೇ ಸೆಪ್ಟೆಂಬರ್ 5ಕ್ಕೆ ಬಾಘಿ-4 ತೆರೆಗಪ್ಪಳಿಸುತ್ತಿದ್ದು, ಸಿನಿಮಾನ ಮಕ್ಕಳು, ಮುದುಕರು ಅಷ್ಟೇ ಅಲ್ಲ, ವೀಕ್ ಮೈಂಡ್ ಜನ ನೋಡೋಕೆ ಸಾಧ್ಯವೇ ಇಲ್ಲ ಅನ್ನುವಂತಿದೆ. ಸಂದೀಪ್ ರೆಡ್ಡಿ ವಂಗಾ ಅದ್ಯಾವಾಗಲೋ ಅನಿಮಲ್ ಪಾರ್ಕ್ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದ್ದಾರೆ. ಆದ್ರೆ ಈ ಬಾಘಿ-4 ಅನಿಮಲ್ ಪಾರ್ಕ್‌ನ ಮೀರಿಸೋ ವೈಲ್ಡ್ ಅನಿಮಲ್ ಪಾರ್ಕ್ ರೀತಿ ಇದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್