ಬಾಲಿವುಡ್ ಹೃತಿಕ್, ಟಾಲಿವುಡ್ ಎನ್‌ಟಿಆರ್ ನಡುವೆ ಆನ್‌ಸ್ಕ್ರೀನ್ ಹೈ ವೋಲ್ಟೇಜ್ ವಾರ್‌ಗೆ ಡೇಟ್ ಫಿಕ್ಸ್ ಆಗಿದೆ. ಆದ್ರೆ ನಿಜ ಜೀವನದಲ್ಲೂ ಇವರ ನಡುವೆ ರಿಯಲ್ ವಾರ್ ಶುರುವಾಗಿದೆಯಂತೆ. ಅದು ನಿಜಾನಾ..?
2019ರ ಬಾಲಿವುಡ್ ಬ್ಲಾಕ್ ಬಸ್ಟರ್ ವಾರ್ ಸಿನಿಮಾದ ಸೀಕ್ವೆಲ್ ವಾರ್-2 ಥಿಯೇಟರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಇದೇ ಆಗಸ್ಟ್ 14ಕ್ಕೆ ವರ್ಲ್ಡ್‌ವೈಡ್ ಇಂಡಿಯಾದ ಇಬ್ಬರು ಬೆಸ್ಟ್ ರಾ ಏಜೆಂಟ್ಸ್ ನೀನಾ ನಾನಾ ಅಂತ ಕಾದಾಡೋಕೆ ಸಜ್ಜಾಗ್ತಿದ್ದಾರೆ. ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಟಗ್ ಆಫ್ ವಾರ್ ನೋಡೋಕೆ ಕಿಕ್ ಕೊಡಲಿದೆ. ಅದಕ್ಕೆ ಟೀಸರ್ ಸಾಕ್ಷಿಯಾಗಿದೆ.
ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್ ಆಗಿರೋ ಈ ಸಿನಿಮಾದಲ್ಲಷ್ಟೇ ಹೃತಿಕ್-ಎನ್‌ಟಿಆರ್ ರೈವಲ್ರಿ ಮುಂದುವರೆಯಲ್ಲ. ನಿಜ ಜೀವನದಲ್ಲೂ ಅದು ಮರುಕಳಿಸುತ್ತಿದೆ. ಇಬ್ಬರೂ ಒಟ್ಟೊಟ್ಟಿಗೆ ಚಿತ್ರದ ಪ್ರಮೋಷನ್ಸ್ ಮಾಡದಿರಲು ನಿರ್ಧರಿಸಿದ್ದಾರಂತೆ. ಹೌದು.. ಪ್ರತ್ಯೇಕವಾಗಿ ಆಡಿಯೆನ್ಸ್‌ನ ಸೆಳೆಯೋಕೆ ಇವರುಗಳು ಪ್ರಮೋಷನ್ಸ್ ಮಾಡ್ತಾರಂತೆ. ಹಾಗಾದ್ರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲ್ವಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಕಾಡ್ತಿದೆ.
ಇದರ ಮಧ್ಯೆ ವಾರ್-2 ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡ್ತಿದೆ. ಜೂನಿಯರ್ ಎನ್‌ಟಿಆರ್‌ಗೆ ತ್ರಿಬಲ್ ಆರ್ ಸಿನಿಮಾದಿಂದ ಗ್ಲೋಬಲ್ ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಹೃತಿಕ್ ಕೂಡ ಇದರ ಭಾಗವಾಗಿರೋದಕ್ಕೆ ಆಂಧ್ರದಲ್ಲಿ ತೆಲಂಗಾಣ ಸೇರಿಸಿ ಬರೋಬ್ಬರಿ 80 ಕೋಟಿ ಬ್ಯುಸಿನೆಸ್ ಮಾಡಿದೆಯಂತೆ ವಾರ್-2. ಅಂದಹಾಗೆ ಕೆಜಿಎಫ್-2 ಸಿನಿಮಾ 78 ಕೋಟಿ ಬ್ಯುಸಿನೆಸ್‌ನಿಂದ ಮೊದಲ ಸ್ಥಾನದಲ್ಲಿತ್ತು. ಆದ್ರೀಗ ಅದನ್ನ ಬ್ರೇಕ್ ಮಾಡಿ ನೂತನ ದಾಖಲೆ ಬರೆದಿದೆ ಹೃತಿಕ್-ಎನ್‌ಟಿಆರ್ ವಾರ್-2.