ಆರ್ಥಿಕವಾಗಷ್ಟೇ ಅಲ್ಲದೆ, ಮಾನಸಿಕವಾಗಿಯೂ ನೊಂದು, ಬೆಂದಿರೋ ತಮಿಳು ನಟ ವಿಶಾಲ್ ಬಾಳಲ್ಲಿ ಹೊಸ ಮನ್ವಂತರ ಶುರುವಾಗ್ತಿದೆ. ಹೌದು.. ಕೊನೆಗೂ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳೋಕೆ ಸಜ್ಜಾಗಿದ್ದಾರೆ ವಿಶಾಲ್. ಹಾಗಾದ್ರೆ ಕಾಲಿವುಡ್ ಸ್ಟಾರ್ ಕೈ ಹಿಡಿಯುತ್ತಿರೋ ಬ್ಯೂಟಿ ಯಾರು ಅಂತೀರಾ..? ಜಸ್ಟ್ ವಾಚ್.
- ಕಬಾಲಿ ಧನ್ಶಿಕಾ ಕೈ ಹಿಡಿಯಲಿರೋ ವಿಶಾಲ್ ನ್ಯೂ ಇನ್ನಿಂಗ್ಸ್
- 15 ವರ್ಷದ ಸ್ನೇಹ.. ಇತ್ತೀಚೆಗೆ ಡೇಟಿಂಗ್.. ಆ- 29ಕ್ಕೆ ಮದ್ವೆ
- ರಜನಿ ಜೊತೆ ಕಬಾಲಿಯಲ್ಲಿ ಮಿಂಚು.. ಕನ್ನಡಿಗರಿಗೂ ಪರಿಚಿತ
- ಮದುವೆ ವಿಚಾರ ಸ್ವತಃ ತಾವೇ ಬಾಯಿಬಿಟ್ಟ ಚೆಲುವೆ ಧನ್ಶಿಕಾ..!
ವಿಶಾಲ್ ಮತ್ತು ನಾನು ಇದೇ ಆಗಸ್ಟ್ 29ರಂದು ಮದುವೆಯಾಗಲು ಯೋಚಿಸಿದ್ದೇವೆ. ನನಗೆ ವಿಶಾಲ್ 15 ವರ್ಷಗಳಿಂದ ಪರಿಚಿತರು. ಈ ಹಿಂದೆ ನಾವು ಭೇಟಿ ಆದಾಗಲೆಲ್ಲಾ ಅವರು ನನ್ನೊಟ್ಟಿಗೆ ತುಂಬಾ ಗೌರವದಿಂದ ನಡೆದುಕೊಳ್ತಿದ್ರು. ನಾನು ತುಂಬಾ ತೊಂದರೆಯಲ್ಲಿದ್ದಾಗ, ನಮ್ಮ ಮನೆಗೆ ಭೇಟಿ ನೀಡಿ ಧೈರ್ಯ ತುಂಬುತ್ತಿದ್ದರು.
ಯಾವುದೇ ಕಲಾವಿದ ಇಲ್ಲಿಯವರೆಗೆ ನನ್ನ ಮನೆಗೆ ಭೇಟಿ ನೀಡಿಲ್ಲ. ಅವರ ಸಿಹಿ ಮಾತು, ಅವರ ಹಾವ ಭಾವ ಸಂತೋಷಕರವಾಗಿತ್ತು. ಹೀಗಂತ ಸ್ವತಃ ನಟಿ ಧನ್ಶಿಕಾನೇ ವಿಶಾಲ್ ಜೊತೆಗಿನ ಮದುವೆ ಬಗ್ಗೆ ಬಹಿರಂಗಪಡಿಸಿದ್ದಾರೆ.
ಯೆಸ್.. ತಮಿಳು ನಟ ವಿಶಾಲ್ ಇತ್ತೀಚೆಗೆ ಮಾನಸಿಕ ಹಾಗೂ ಆರ್ಥಿಕವಾಗಿ ಪ್ರಪಾತಕ್ಕೆ ಬಿದ್ದಿದ್ದರು. ಒಂದಲ್ಲ, ಎರಡೆರಡು ಬಾರಿ ವೇದಿಕೆಗಳಲ್ಲಿ ಕುಸಿದು ಬಿದ್ದು, ಅಸ್ವಸ್ಥರಾಗಿದ್ದರು. ಗರ್ಲ್ ಫ್ರೆಂಡ್ ಕೈ ಕೊಟ್ಟಿದ್ರು, ಈ ಹಿಂದೆ ಎಂಗೇಜ್
ಆದ ಹುಡುಗಿ ಸಹ ಮದ್ವೆ ಕ್ಯಾನ್ಸಲ್ ಮಾಡಿಕೊಂಡಿದ್ರು. ಆದ್ರೆ ನಟಿ ಧನ್ಶಿಕಾ ಮಾತ್ರ ವಿಶಾಲ್ ಕೈ ಹಿಡಿಯೋಕೆ ಮನಸ್ಸು ಮಾಡಿದ್ದಾರೆ. 37 ವರ್ಷದ ಧನ್ಶಿಕಾ ಕೂಡ ತಮಿಳಿನ ಖ್ಯಾತ ನಟಿ.
ತಲೈವಾ ರಜನೀಕಾಂತ್‌ರ ಕಬಾಲಿ ಸಿನಿಮಾ, ಕನ್ನಡದ ಉದ್ಘರ್ಷ ಸಿನಿಮಾಗಳು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ವಿಶಾಲ್‌ರಲ್ಲಿದ್ದ ಒಳ್ಳೆಯ ಗುಣಕ್ಕೆ ಸೋತಿರೋ ಈ ನಟೀಮಣಿ, ಆತನೊಟ್ಟಿಗೆ ಡೇಟಿಂಗ್ ಮಾಡ್ತಿರೋದು ಇತ್ತೀಚೆಗೆ ಬಹಿರಂಗವಾಗಿತ್ತು.
ಯೋಗಿ ದಾ ಸಿನಿಮಾದ ಪ್ರಚಾರಕಾರ್ಯದಲ್ಲಿ ಮಾಧ್ಯಮಗಳು ಪ್ರಶ್ನಿಸೋಕೆ ಮೊದಲೇ ತಾವೇ ಬಾಯಿಬಿಟ್ಟು, ವಿಶಾಲ್ ಜೊತೆಗಿನ ಮದ್ವೆಯನ್ನ ಅಫಿಶಿಯಲಿ ಅನೌನ್ಸ್ ಮಾಡಿದ್ದಾರೆ. ಇದ್ರಿಂದ ವಿಶಾಲ್ ಕುಟುಂಬಸ್ಥರ ಜೊತೆ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದಾರೆ.