ಬರ್ತಿದೆ ಕೊಹ್ಲಿ ಬಯೋಪಿಕ್.. ಮೀರಿಸುತ್ತಾ M S ಧೋನಿ?

ಕ್ರಿಕೆಟ್ ದಂತಕಥೆ ಸಚಿನ್‌‌ನ ಮೀರಿದ ಚೇಸ್ ಮಾಸ್ಟರ್ ಕಥೆ

Untitled design 2025 05 03t174040.717

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌‌ನೇ ಮೀರುವಂತೆ ದಾಖಲೆಗಳನ್ನ ಬರೆದು, ರೆಕಾರ್ಡ್‌ ಕಾ ಬಾಪ್ ಅನಿಸಿಕೊಂಡ ರನ್ ಮಷೀನ್, ಚೇಸ್ ಮಾಸ್ಟರ್, ಕಿಂಗ್ ಕೊಹ್ಲಿ ಕುರಿತ ಜೀವನಗಾಥೆ ಬೆಳ್ಳಿತೆರೆ ಬೆಳಗುವ ಸೂಚನೆ ಸಿಕ್ಕಿದೆ. ಇಷ್ಟಕ್ಕೂ ವಿರಾಟ್ ಕೊಹ್ಲಿ ಬಯೋಪಿಕ್ ಮಾಡ್ತಿರೋ ಸ್ಟಾರ್ ಯಾರು..? ಸಿನಿಮಾ ಯಾವಾಗ ಸೆಟ್ಟೇರುತ್ತೆ..? ಈ ಬಗ್ಗೆ ಕೊಹ್ಗಿ ಏನು ಹೇಳಿದ್ರು ಅನ್ನೋ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

ಕ್ರಿಕೆಟ್ ನಮ್ಮ ನ್ಯಾಷನಲ್ ಗೇಮ್ ಅಲ್ಲ. ಆದ್ರೂ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌‌ ಗಾಡ್. ಅದೆಷ್ಟೋ ಮಂದಿಗೆ ಗಾಡ್‌ ಫಾದರ್. ಅವರು ಮಾಡಿದ ದಾಖಲೆಗಳನ್ನ ಸರಿಗಟ್ಟಬಲ್ಲಂತಹ ಮತ್ತೊಬ್ಬ ಕ್ರಿಕೆಟರ್ ಹುಟ್ಟಲಾರ ಅಂತಲೇ ಎಲ್ಲರೂ ಅಂತಿದ್ರು. ಆದ್ರೀಗ ಕ್ರಿಕೆಟ್ ದಂತಕಥೆಯ ದಾಖಲೆಗಳನ್ನೇ ಚೇಸ್ ಮಾಡಬಲ್ಲಂತಹ ಚೇಸ್ ಮಾಸ್ಟರ್ ಬಂದಾಯ್ತು. ಅವರೇ ಒನ್ ಅಂಡ್ ಓನ್ಲಿ ರನ್ ಮಷೀನ್, ಯೂತ್ ಐಕಾನ್, ಕ್ರೇಜ್ ಕಾ ಬಾಪ್ ಕಿಂಗ್ ಕೊಹ್ಲಿ.

ಯೆಸ್.. 36 ವರ್ಷದ ವಿರಾಟ್ ಕೊಹ್ಲಿ ಅತಿ ಸಣ್ಣ ವಯಸ್ಸಿನಲ್ಲೇ ವಿಶ್ವ ಕ್ರಿಕೆಟ್ ಲೋಕದ ಬಾಹುಬಲಿಯಾಗಿ ಬೆಳೆದರು. ಪ್ರಪಂಚದ ಮೂಲೆ ಮೂಲೆಯಲ್ಲಿ ಕ್ರಿಕೆಟ್ ಪ್ರೇಮಿಗಳನ್ನ ಸಂಪಾದಿಸಿದರು. ಅಷ್ಟೇ ಯಾಕೆ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ ಕೊಹ್ಲಿಗೆ ಡೈಹಾರ್ಡ್‌ ಫ್ಯಾನ್ಸ್ ಇದ್ದಾರೆ. ಲಕ್ಷಾಂತರ ಮಂದಿ ಕ್ರಿಕೆಟ್ ಆಟಗಾರರಿಗೆ, ಪ್ರೇಮಿಗಳಿಗೆ ಕೊಹ್ಲಿ ಸ್ಫೂರ್ತಿಯ ಸೆಲೆ.

2008ರ ಅಂಡರ್ 19 ವರ್ಲ್ಡ್‌ ಕಪ್, 2011ರ ಒಂಡೇ ವರ್ಲ್ಡ್‌ ಕಪ್, 2013ರ ಚಾಂಪಿಯನ್ಸ್ ಟ್ರೋಫಿ, 2024ರ ಟಿ20 ವರ್ಲ್ಡ್ ಕಪ್, 2025ರ ಚಾಂಪಿಯನ್ಸ್ ಟ್ರೋಫಿಗಳ ಗೆಲುವಿನ ರೂವಾರಿಯೂ ಹೌದು. ಗಲ್ಲಿ ಕ್ರಿಕೆಟ್‌‌ನಿಂದ ಹಿಡಿದು, ಡೊಮೆಸ್ಟಿಕ್, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಟಿ20, ಒಂಡೇ, ಟೆಸ್ಟ್ ಹೀಗೆ ಯಾವುದೇ ಫಾರ್ಮ್ಯಾಟ್, ವಿಶ್ವದ ಯಾವುದೇ ದೇಶದ ಗ್ರೌಂಡ್‌‌ನಲ್ಲಿ ಕಣಕ್ಕಿಳಿಸಿದ್ರೂ ನೀರು ಕುಡಿದಷ್ಟೇ ಸರಾಗವಾಗಿ ರನ್‌ಗಳನ್ನ ಪೇರಿಸಬಲ್ಲಂತಹ ದೈತ್ಯ ಪ್ರತಿಭೆ ಕೊಹ್ಲಿ.

ಕೊಹ್ಲಿಗೆ ಬೌಲಿಂಗ್ ಮಾಡೋಕೆ ಬೌಲರ್‌‌ಗಳೇ ನಡುಗುತ್ತಾರೆ. ಇವ್ರ ಸ್ಟ್ರೈಕ್ ರೇಟ್, ಫಿಟ್ನೆಸ್, ಆನ್ ಫೀಲ್ಡ್‌‌ನಲ್ಲಿ ಇವರ ಅಗ್ರೆಷನ್, ಕ್ಯಾಪ್ಟನ್ ಆಗಿದ್ದಾಗಿನ ರೆಕಾರ್ಡ್ಸ್, ಯಂಗ್‌ಸ್ಟರ್‌ಗಳನ್ನ ಉತ್ತೇಜಿಸೋ ಪರಿ, ಕಿರಿಕ್ ತೆಗೆದವರಿಗೆ ಉರಿಸೋದು ಎಲ್ಲವೂ ಅಲ್ಟಿಮೇಟ್. ಅದೇ ಕಾರಣದಿಂದ ಮೋಸ್ಟ್ ಎಂಟರ್‌ಟೈನಿಂಗ್ ಕ್ರಿಕೆಟರ್ ಆಗಿ ಭಾರತದ ಕೀರ್ತಿ ಪತಾಕೆಯನ್ನ ಹಾರಿಸುತ್ತಿದ್ದಾರೆ ವಿರಾಟ್ ಕೊಹ್ಲಿ.

ನಟಿ ಅನುಷ್ಕಾ ಶೆಟ್ಟಿಯನ್ನ ಪ್ರೀತಿಸಿ, ಮದ್ವೆಯಾದ ಕೊಹ್ಲಿ, ಮಗ, ಮಗಳು ಹಾಗೂ ಪತ್ನಿಗಾಗಿ ಸಮಯ ಕೊಡೋದು ಕೂಡ ಅದೆಷ್ಟೋ ಮಂದಿಗೆ ಪ್ರೇರಣೆ. 18 ವರ್ಷಗಳಿಂದ ಸತತವಾಗಿ ಆರ್‌ಸಿಬಿ ಒಂದೇ ಟೀಂಗೆ ಆಡ್ತಿರೋ ಐಪಿಎಲ್ ಆಟಗಾರನಾಗಿರೋ ಕೊಹ್ಲಿ, ಲಾಯಲ್ ಫ್ಯಾನ್ಸ್‌ಗಾಗಿ ರಾಯಲ್ ಚಾಲೆಂಜರ್ಸ್‌ನ ಬಿಡದೆ ಇಂದಿಗೂ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಂತಹ ಮೋಸ್ಟ್ ಇನ್ಸ್‌‌ಪಯರಿಂಗ್ ವ್ಯಕ್ತಿ ಹಾಗೂ ವ್ಯಕ್ತಿತ್ವದ ಕಥೆ ಬೆಳ್ಳಿಪರದೆ ಬೆಳಗಬೇಕು ಅನ್ನೋದು ಕೋಟ್ಯಂತರ ಮಂದಿಯ ಕನಸಾಗಿದೆ.

ಯೆಸ್.. ಕೊಹ್ಲಿ ಬಯೋಪಿಕ್ ಥಿಯೇಟರ್‌ಗೆ ಬರಬೇಕು ಅನ್ನೋದು ಅದೆಷ್ಟೋ ಮಂದಿಯ ಬಹು ವರ್ಷಗಳ ಕನಸಾಗಿತ್ತು. ಅದಕ್ಕೀಗ ಸಮಯ ಸನಿಹವಾಗುತ್ತಿದ್ದು, ತಮಿಳಿನ ಸ್ಟಾರ್ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಕೊಹ್ಲಿಯಾಗಿ ಬಣ್ಣ ಹಚ್ಚೋ ಮುನ್ಸೂಚನೆ ಸಿಕ್ಕಿದೆ. ಅದಕ್ಕೆ ಪೂರಕವಾಗಿ ಸಿಂಬು ಅವ್ರ ಹಾಡೊಂದನ್ನ ಕೊಹ್ಲಿ ಲೂಪ್‌‌ನಲ್ಲಿ ಕೇಳುವುದನ್ನ ಅವರೇ ಹೇಳಿಕೊಂಡಿದ್ದಾರೆ.

ಸದ್ಯ ಕಮಲ್ ಹಾಸನ್ ಜೊತೆ ಥಗ್ ಲೈಫ್ ಸಿನಿಮಾ ಮಾಡ್ತಿರೋ ಸಿಂಬು, ಕೊಹ್ಲಿಯನ್ನ ಹೋಲುತ್ತಾರೆ. ಹಾಗಾಗಿಯೇ ಸಿಂಬುನೇ ಕೊಹ್ಲಿ ಬಯೋಪಿಕ್‌‌ನಲ್ಲಿ ಬಣ್ಣ ಹಚ್ಚಿದ್ರೆ ಚೆನ್ನಾಗಿರಲಿದೆ ಅನ್ನೋದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ. ಪದ್ಮಶ್ರೀ, ಖೇಲ್ ರತ್ನ ಪ್ರಶಸ್ತಿ ವಿಜೇತರಾಗಿರೋ ವಿರಾಟ್ ಕೊಹ್ಲಿಯ ಜೀವನಗಾಥೆ ಸಿನಿಮಾ ಆಗೋದ್ರ ಮೂಲಕ ಮತ್ತಷ್ಟು ಮಂದಿಗೆ ಸ್ಫೂರ್ತಿ ಆದ್ರೆ ಅದಕ್ಕಿಂತ ಖುಷಿ ಮತ್ತೊಂದಿರಲಾರದು. ಜೊತೆಗೆ ಧೋನಿ ಬಯೋಪಿಕ್‌ನಂತೆ ಅಚ್ಚುಕಟ್ಟಾಗಿ ಮೂಡಿಬರಬೇಕು ಅನ್ನೋದು ಎಲ್ಲರ ಅಭಿಲಾಷೆಯಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version