ತಮಿಳುನಾಡು ರಾಜಕೀಯದ ಅಖಾಡದಲ್ಲಿ ಈಗ ಮತ್ತೊಂದು ಹೈ-ವೋಲ್ಟೇಜ್ ಪೊಲಿಟಿಕಲ್ ಬಾಂಬ್ ಸಿಡಿದಿದೆ. ದಳಪತಿ ವಿಜಯ್ ಅವರ TVK ಎಂಟ್ರಿ ಕೊಟ್ಟ ಮೇಲಂತೂ ಚೆನ್ನೈನಲ್ಲಿ ಬರಿ ಪೊಲಿಟಿಕಲ್ ಮಾತುಗಳೇ. ಇದರ ಬೆನ್ನಲ್ಲೇ ಈಗ ಕೊಲವೆರಿ ಧನುಷ್ ಕೂಡ ಸೈಲೆಂಟ್ ಆಗಿ 2031ರ ತಮಿಳುನಾಡು ಅಸೆಂಬ್ಲಿ ಎಲೆಕ್ಷನ್‌ಗೆ ಗ್ರ್ಯಾಂಡ್ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರಂತೆ. ರಜನಿಕಾಂತ್ ಅವರ ಕಂಪ್ಲೀಟ್ ಗೈಡೆನ್ಸ್ ಮತ್ತು ಬ್ಯಾಕಿಂಗ್‌ನೊಂದಿಗೆ ‘ತಮಿಳಗ Ezhuchi ಕಳಗಂ’ ಪಕ್ಷ ಕಟ್ಟಲು ಧನುಷ್ ರೆಡಿಯಾಗ್ತಿದ್ದಾರೆ ಅನ್ನೋ ಅಸಲಿ ಸುದ್ದಿ ಇಲ್ಲಿದೆ ನೋಡಿ.
- ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?
- ಪಾಲಿಟಿಕ್ಸ್ ಗೆ ಧನುಷ್..? TEK ಪಕ್ಷ ರಿಜಿಸ್ಟ್ರೇಷನ್ ಎಷ್ಟು ಸತ್ಯ..?!
- 2031ರ ತಮಿಳುನಾಡು ಅಸೆಂಬ್ಲಿ ಚುನಾವಣೆಗೆ ಸೈಲೆಂಟ್ ಪ್ಲ್ಯಾನ್?
- ರಜನಿಕಾಂತ್ ಮಾರ್ಗದರ್ಶನದಲ್ಲಿ ಧನುಷ್ ರಾಜಕೀಯ ಪಯಣ..?
ಎಂಜಿಆರ್, ಜಯಲಲಿತಾ, ವಿಜಯಕಾಂತ್ ಕಾಲದಿಂದ ಹಿಡಿದು ನೆನ್ನೆ ಮೊನ್ನೆ ‘ತಮಿಳಗ ವೆಟ್ರಿ ಕಳಗಂ’ ಕಟ್ಟಿದ ದಳಪತಿ ವಿಜಯ್‌ವರೆಗೆ, ಕಾಲಿವುಡ್‌ಗೂ ತಮಿಳುನಾಡು ಆಡಳಿತಕ್ಕೂ ಬಿಡಿಸಲಾರದ ಅನುಬಂಧ. ವಿಜಯ್ ತಮ್ಮ ಸಿನಿ ಗ್ಲಾಮರ್ ಅನ್ನು ಮಾಸ್ ವೋಟ್ ಬ್ಯಾಂಕ್ ಆಗಿ ಕನ್ವರ್ಟ್ ಮಾಡಿ ಸಕ್ಸಸ್ ಹಾದಿಯಲ್ಲಿ ಸಾಗುತ್ತಿರೋದು, ಈಗ ನಟ ಧನುಷ್ ಕಣ್ಣನ್ನೂ ಕೆಂಪಗಾಗಿಸಿದೆ. 2031ರ ಚುನಾವಣೆಯನ್ನು ಟಾರ್ಗೆಟ್ ಮಾಡಿ ಧನುಷ್ ಸೈಲೆಂಟ್ ಆಗಿ ಪೊಲಿಟಿಕಲ್ ಎಂಟ್ರಿಗೆ ಕೌಂಟ್‌ಡೌನ್ ಶುರು ಮಾಡಿದ್ದಾರೆಂಬ ವರದಿಗಳು ತಮಿಳು ಮೀಡಿಯಾಗಳಲ್ಲಿ ಬೆಂಕಿ ಎಬ್ಬಿಸಿವೆ. ಮೇಲ್ನೋಟಕ್ಕೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ, ಧನುಷ್ ತಳಮಟ್ಟದಲ್ಲಿ ಸೈಲೆಂಟ್ ಆಗಿ ಗ್ರೌಂಡ್‌ವರ್ಕ್ ಮಾಡ್ತಿರೋದು ಈಗ ಸಿನಿವಲಯದಲ್ಲಿ ಹಾಟ್ ಟಾಪಿಕ್.
ಈ ಇಡೀ ಪೊಲಿಟಿಕಲ್ ಗೇಮ್‌ಪ್ಲಾನ್‌ನ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಸ್ವತಃ ನಟ ಧನುಷ್ ಅವರ ಮಾಜಿ ಮಾವ, ಸೂಪರ್‌ಸ್ಟಾರ್ ರಜನಿಕಾಂತ್ ಎನ್ನಲಾಗ್ತಿದೆ. ಹಿಂದೆ ರಾಜಕೀಯಕ್ಕೆ ಬರೋದಾಗಿ ಅನೌನ್ಸ್ ಮಾಡಿ ಆಮೇಲೆ ಹೆಲ್ತ್ ಇಶ್ಯೂಸ್‌ನಿಂದ ಹಿಂದೆ ಸರಿದಿದ್ದ ರಜನಿ, ಈಗ ಧನುಷ್ ಬೆನ್ನಿಗೆ ನಿಂತು ತಮ್ಮ ಕೋಟ್ಯಂತರ ಅಭಿಮಾನಿಗಳ ಬಳಗ ಹಾಗೂ ರಹಸ್ಯ ಪೊಲಿಟಿಕಲ್ ನೆಟ್‌ವರ್ಕ್ ಅನ್ನು ಧನುಷ್ ಕೈಗೆ ನೀಡಲಿದ್ದಾರೆ ಎಂಬ ಟಾಕ್ ಬಲವಾಗಿದೆ. ಇತ್ತೀಚೆಗೆ ಧನುಷ್-ರಜನಿ ಭೇಟಿಯಾದ ಫೋಟೋಗಳು ವೈರಲ್ ಆಗಿದ್ದು, ರಜನಿಯ ಆಶೀರ್ವಾದದೊಂದಿಗೆ ತಮಿಳುನಾಡು ರಾಜಕೀಯಕ್ಕೆ ಹೊಸ ಅಲೆ ತರಲು ಧನುಷ್ ಸಜ್ಜಾಗಿದ್ದಾರೆ ಅನ್ನೋ ಸೈಲೆಂಟ್ ಸುಳಿವು ಸಿಕ್ಕಂತಾಗಿದೆ.
ವಿಷಯ ಬರಿ ಗಾಸಿಪ್‌ಗಷ್ಟೇ ಸೀಮಿತವಾಗಿಲ್ಲ, ‘ತಮಿಳಗ Ezhuchi ಕಳಗಂ’ ಅನ್ನೋ ಹೆಸರನ್ನ ಈಗಾಗಲೇ ಎಲೆಕ್ಷನ್ ಕಮಿಷನ್‌ನಲ್ಲಿ ನೋಂದಾಯಿಸಲು ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಧನುಷ್ ಅಭಿಮಾನಿ ಸಂಘಟನೆಗಳನ್ನು ಪುನಾರಚಿಸಿ ಮೆಂಬರ್‌ಶಿಪ್ ಡ್ರೈವ್ ಬಿರುಸುಗೊಳಿಸಲಾಗಿದೆ. ವಿಜಯ್, ಧನುಷ್ ಅಷ್ಟೇ ಅಲ್ಲದೇ ಸೂರ್ಯ, ಶಿವಕಾರ್ತಿಕೇಯನ್ ಕೂಡ ಸಾಲಿನಲ್ಲಿ ನಿಂತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದ್ದರೂ, ರಜನಿ ಬೆಂಬಲದ ಬಲವಿರೋ ಧನುಷ್ ಹೆಜ್ಜೆ ಹೆಚ್ಚು ಕುತೂಹಲ ಮೂಡಿಸಿದೆ. ಧನುಷ್ ಅಥವಾ ರಜನಿ ಕಡೆಯಿಂದ ಅಧಿಕೃತ ಪ್ರಕಟಣೆ ಬರೋವರೆಗೂ ಇದು ಸಸ್ಪೆನ್ಸ್ ಆದರೂ, ದ್ರಾವಿಡ ನಾಡಿನ ಸಿಂಹಾಸನದ ಮೇಲೆ ‘ಕೊಲವೆರಿ’ ಸ್ಟಾರ್ ಕಣ್ಣಿಟ್ಟಿರೋದಂತೂ ಈಗ ಓಪನ್ ಸೀಕ್ರೆಟ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
