ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

ಯೂತ್‌ಫುಲ್ ಪಾತ್ರಗಳಿಂದ ಮೈಥಾಲಜಿ ಜಗತ್ತಿಗೆ ಮಮಿತಾ ಜಂಪ್?

Untitled design 2026 10 09T180239.693

ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೈವಿಕ ಸಂಚಲನ ಸೃಷ್ಟಿಸಿದ್ದ ನಮೃ ಶೈಲಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಈಗ ಮತ್ತೊಂದು ಮೈಥಾಲಜಿ ಮಹಾಕಾವ್ಯಕ್ಕೆ ಸಜ್ಜಾಗಿದ್ದಾರೆ. ಜೈ ಹನುಮಾನ್ ಅಖಾಡಕ್ಕೆ ಈಗ ಸೌತ್ ಇಂಡಿಯಾದ ಕ್ರೇಜಿಯೆಸ್ಟ್ ಬೆಡಗಿ ಎಂಟ್ರಿ ಕೊಡ್ತಿದ್ದಾರೆ ಅನ್ನೋ ಹಾಟ್ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಮಮಿತಾ ಬೈಜು, ರಿಷಬ್ ಶೆಟ್ಟಿಗೆ ಜೋಡಿಯಾಗ್ತಿರೋದು ನಿಜಾನಾ?ಅಷ್ಟಕ್ಕೂ ಈ ಹೀರೋಯಿನ್ ನ ಅದೃಷ್ಟದೇವತೆ ಅಂತ ಕರೀತಿರೋದು ಯಾಕೆ..? ಹೇಳ್ತೀವಿ ಈ ಸ್ಟೋರಿ ನೋಡಿ..

ಫಿಲ್ಮ್‌ನಗರ್‌ಗಳಲ್ಲಿ ಒಂದೇ ಚರ್ಚೆ ಬಿಸಿಯಾಗಿ ನಡೆಯುತ್ತಿದೆ. ‘ಕಾಂತಾರ’ದ ರೌದ್ರಾವತಾರದಿಂದ ಇಡೀ ಇಂಡಿಯಾವನ್ನೇ ಶೇಕ್ ಮಾಡಿದ್ದ ರಿಷಬ್ ಶೆಟ್ಟಿ ಮುಂಬರುವ ಬಿಗ್ ಪ್ರಾಜೆಕ್ಟ್ ‘ಜೈ ಹನುಮಾನ್’ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಈಗ ಸುದ್ದಿ ಅದಲ್ಲ, ಮಲಯಾಳಂ ಮೂಲದ ಕ್ಯೂಟ್ ಬ್ಯೂಟಿ, ‘ಪ್ರೇಮಲು’ ಸಿನಿಮಾದ ಓವರ್‌ನೈಟ್ ಕ್ರೇಜ್ ಮಮಿತಾ ಬೈಜು ಈ ಸಿನಿಮಾಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ ಅನ್ನೋದು ಫಿಲ್ಮ್ ನಗರ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಸುದ್ದಿ ಕೇಳಿ ರಿಷಬ್ ಮತ್ತು ಮಮಿತಾ ಅಭಿಮಾನಿಗಳ ಕಾತರ ಮುಗಿಲು ಮುಟ್ಟಿದೆ.

‘ಪ್ರೇಮಲು’ ಚಿತ್ರದಲ್ಲಿ ತಮ್ಮ ಮುದ್ದಾದ ಅಭಿನಯ ಮತ್ತು ಕಿಲ್ಲರ್ ಎಕ್ಸ್‌ಪ್ರೆಷನ್‌ಗಳಿಂದ ಸೌತ್ ಇಂಡಿಯಾದ ಕೋಟ್ಯಂತರ ಹಾರ್ಟ್‌ಗಳನ್ನು ಕದ್ದ ಮಮಿತಾ ಬೈಜು, ಆ ಬಳಿಕ ತಮಿಳು ಹಾಗೂ ತೆಲುಗು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದ ಈ ಮಲಯಾಳಂ ಚೆಲುವೆಗೆ, ಈಗ ಮೈಥಾಲಜಿ ಫ್ಯಾಂಟಸಿ ಜಗತ್ತಿನ ಬಾಗಿಲು ತೆರೆದಂತಾಗಿದೆ. ಇಲ್ಲಿಯವರೆಗೆ ಲವ್‌ಸ್ಟೋರಿ, ಯೂತ್‌ಫುಲ್ ಸಿನಿಮಾಗಳಲ್ಲೇ ಮುದ್ದಾಗಿ ಕಾಣಿಸಿಕೊಳ್ತಿದ್ದ ಮಮಿತಾಗೆ ಇದು ಕೆರಿಯರ್‌ನಲ್ಲೇ ಬಿಗ್ಗೆಸ್ಟ್ ಲಕ್ ಅಂತಾನೇ ಹೇಳಬಹುದು.

‘ಪ್ರೇಮಲು’ ಸೂಪರ್ ಹಿಟ್ ಆದ ಮೇಲೆ, ಧನುಷ್ ಅಭಿನಯದ ‘ಕುಬೇರ’, ‘ಡ್ಯೂಡ್’, ವಿಶ್ವನಾಥ್ ಅಂಡ್ ಸನ್ಸ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಭರ್ಜರಿ ಸಕ್ಸಸ್ ಮಮಿತಾ ಅವರ ಲಕ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಅವರು ಕಾಲಟ್ಟಿದ ಸಾಲು ಸಾಲು ಪ್ರಾಜೆಕ್ಟ್‌ಗಳು ಬ್ಲಾಕ್‌ಬಸ್ಟರ್ ಆಗುತ್ತಿರುವುದರಿಂದಲೇ,  ಫಿಲ್ಮ್‌ನಗರ್‌ ದಲ್ಲಿ ಪ್ರತಿಯೊಬ್ಬ ನಿರ್ಮಾಪಕ-ನಿರ್ದೇಶಕರು ಮಮಿತಾ ಬೈಜು ಅವರನ್ನು ಸೌತ್ ಇಂಡಸ್ಟ್ರಿಯ “ಗೋಲ್ಡನ್ ಲೆಗ್” ಮತ್ತು “ಲಕ್ಕಿ ಹೀರೋಯಿನ್” ಅಂತ ಕೊಂಡಾಡುತ್ತಿದ್ದಾರೆ.

ಇನ್ನೊಂದೆಡೆ, ನಿರ್ದೇಶಕ ಪ್ರಶಾಂತ್ ವರ್ಮಾ ಸೃಷ್ಟಿಸಿದ ‘ಹನು-ಮಾನ್’ ಸಿನಿಮಾ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್‌ನಲ್ಲಿ ಎಷ್ಟು ದೊಡ್ಡ ಬುಝ್ ಕ್ರಿಯೇಟ್ ಮಾಡಿತ್ತು ಅನ್ನೋದು ಗೊತ್ತೇ ಇದೆ. ಕಮ್ಮಿ ಬಜೆಟ್‌ನಲ್ಲಿ ಬಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಆ ಸೂಪರ್‌ಹೀರೋ ಸಾಗಾದ ಮುಂದುವರಿದ ಭಾಗವೇ ಈ ‘ಜೈ ಹನುಮಾನ್’. ಈ ವಿಶುವಲ್ ವಂಡರ್‌ನಲ್ಲಿ ಭಾರತೀಯ ಚಿತ್ರರಂಗದ ಹೆಮ್ಮೆಯ ನಟ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ ಅನ್ನೋ ಸುದ್ದಿಯೇ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಕಾಂತಾರದ ಬಳಿಕ ರಿಷಬ್ ಈ ಪಾತ್ರಕ್ಕೆ ಪರ್ಫೆಕ್ಟ್ ಮ್ಯಾಚ್ ಅಂತ ಫ್ಯಾನ್ಸ್ ಕೊಂಡಾಡ್ತಿದ್ದಾರೆ.

ಆದ್ರೆ, ಈ ಬೃಹತ್ ಮೈಥಾಲಜಿ ಲೋಕಕ್ಕೆ ಮಮಿತಾ ಬೈಜು ಎಂಟ್ರಿ ಕೊಡ್ತಿರೋದು ಪ್ರೇಕ್ಷಕರ ಕುತೂಹಲವನ್ನು ಡಬಲ್ ಮಾಡಿದೆ. ಲವರ್ ಗರ್ಲ್ ಆಗಿ ಮಿಂಚಿದ್ದ ಮಮಿತಾಗೆ ‘ಜೈ ಹನುಮಾನ್’‌ನಲ್ಲಿ ಅತ್ಯಂತ ವಿಭಿನ್ನ ಮತ್ತು ಬಲವಾದ ಪಾತ್ರ ಸಿಗಲಿದೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದ್ರೆ, ಗ್ಲಾಮರಸ್ ರೋಲ್ ಬಿಟ್ಟು ಪಕ್ಕಾ ಸಾಂಪ್ರದಾಯಿಕ ಹಾಗೂ ಶಕ್ತಿಶಾಲಿ ಪಾತ್ರದಲ್ಲಿ ಮಮಿತಾರನ್ನು ನೋಡೋದು ಫ್ಯಾನ್ಸ್‌ಗೆ ಡಬಲ್ ಧಮಾಕಾ. ಆದರೆ ಸದ್ಯಕ್ಕೆ ಈ ಸುದ್ದಿ ಸಿನಿವಲಯದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡುತ್ತಿರುವ ಹಾಟ್ ಗಾಸಿಪ್ ಅಷ್ಟೇ. ಮಮಿತಾ ಬೈಜು ನಿಜವಾಗಿಯೂ ಈ ಸಿನಿಮಾದಲ್ಲಿ ರಿಷಬ್‌ಗೆ ಜೋಡಿಯಾಗ್ತಿದ್ದಾರಾ ಅಥವಾ ಕಥೆಯಲ್ಲಿ ಬೇರೆನೇ ಟ್ವಿಸ್ಟ್ ಇದೆಯಾ ಅನ್ನೋದು ಇನ್ನು ಸಸ್ಪೆನ್ಸ್. ಸ್ವತಃ ನಿರ್ದೇಶಕ ಪ್ರಶಾಂತ್ ವರ್ಮಾ ಅಥವಾ ರಿಷಬ್ ಶೆಟ್ಟಿ ಟೀಮ್‌ನಿಂದ ಅಧಿಕೃತ ಅನೌನ್ಸ್‌ಮೆಂಟ್ ಬರೋವರೆಗೂ ಅಭಿಮಾನಿಗಳು ಈ ಕ್ರೇಜಿ ಕಾಂಬಿನೇಷನ್ ತೆರೆಮೇಲೆ ತರುವ ಮ್ಯಾಜಿಕ್‌ಗಾಗಿ ಕಾಯಲೇಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version