ತಮಿಳು ಕಥೆ..ಕನ್ನಡದ ಕನೆಕ್ಷನ್..OTTಯಲ್ಲಿ ಬತ್ಥಾ..!

ಕನ್ನಡಿಗರ ಮುಂದೆ ವಿಜಯ್ ಸೇತುಪತಿಯ ಹೊಸ ಪ್ರಯೋಗ

Untitled Design 2026 11 01T170656.600

ಬತ್ಥಾ ಬ್ಯಾಂಗ್ ಬ್ಯಾಂಗ್.. ಎಲ್ಲೆಡೆ ಮಕ್ಕಳಿಂದ ದೊಡ್ಡವರವರೆಗೂ ಈಗ ವಿಜಯ್ ಸೇತುಪತಿ ‘ಬತ್ಥಾ’ ಸಿನಿಮಾದದ್ದೇ ಸೌಂಡ್. ಯೆಸ್, ಕಾಮಿಡಿ ಹಾಗೂ ಹೈ-ವೋಲ್ಟೇಜ್ ಡ್ರಾಮಾದ ಮೂಲಕ ಒಟಿಟಿ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಈ ತಮಿಳು ಸಿನಿಮಾ ಈಗ ಕನ್ನಡಿಗರ ಮನಸೂರೆಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ಡಬ್ಬಿಂಗ್ ವರ್ಷನ್ ಜೊತೆಗೆ ರಿಲೀಸ್ ಆಗಿ ಧೂಳೆಬ್ಬಿಸುತ್ತಿರುವ ಈ ಮಸ್ತ್ ಎಂಟರ್ಟೈನರ್ ಚಿತ್ರದ ಅಸಲಿ ಮ್ಯಾಜಿಕ್ ಏನು ಗೊತ್ತಾ? ಇಲ್ಲಿದೆ ನೋಡಿ ಇದರ ಇಂಟ್ರೆಸ್ಟಿಂಗ್‌ ಸ್ಟೋರಿ…

ಬಾಲಾಜಿ ಧರಣೀಧರನ್ ನಿರ್ದೇಶನದಲ್ಲಿ ಹಾಗೂ ಖ್ಯಾತ ನಿರ್ದೇಶಕ ಅಟ್ಲಿ ಸಹ-ನಿರ್ಮಾಣದಲ್ಲಿ ಮೂಡಿಬಂದಿರುವ ‘ಬತ್ಥಾ’ ಸಿನಿಮಾ ಕೇವಲ ಒಂದು ಕಾಮಿಡಿ ಚಿತ್ರವಲ್ಲ, ಅದ್ಭುತ ಭಾವನೆಗಳ ರಸದೌತಣ. 1986ರ ಮದ್ರಾಸ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ, ಮಕಲ್ ಸೆಲ್ವನ್ ವಿಜಯ್ ಸೇತುಪತಿ ಒಬ್ಬ ಕ್ರೂರ ಗ್ಯಾಂಗ್‌ಸ್ಟರ್ ಆಗಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ಆ ಗ್ಯಾಂಗ್‌ಸ್ಟರ್ ಆಕಸ್ಮಿಕವಾಗಿ ಶಾಲೆಯೊಂದರ ಶೌಚಾಲಯದಲ್ಲಿ ಲಾಕ್ ಆಗಿಬಿಟ್ಟರೆ ಹೇಗಿರುತ್ತದೆ? ಈ ಸಿಚುಯೇಷನಲ್ ಕಾಮಿಡಿಯೇ ಚಿತ್ರದ ಅತಿ ದೊಡ್ಡ ಪ್ಲಸ್ ಪಾಯಿಂಟ್.

ಶಾಲೆಯ ಶೌಚಾಲಯದಲ್ಲಿ ಲಾಕ್ ಆದ ಕುರ್ರ ಗ್ಯಾಂಗ್‌ಸ್ಟರ್ ವಿಜಯ್ ಸೇತುಪತಿ ಹಾಗೂ ಆತನನ್ನು ಅಲ್ಲಿ ಸಿಲುಕುವಂತೆ ಮಾಡಿದ ಸಣ್ಣ ಹುಡುಗನ ನಡುವಿನ ಅಪರೂಪದ ಬಾಂದವ್ಯ ಪ್ರೇಕ್ಷಕರನ್ನು ಹೊಟ್ಟೆವ್ರುವಂತೆ ನಗಿಸುತ್ತದೆ ಜೊತೆಗೆ ಕಣ್ಣೀರು ತರಿಸುತ್ತದೆ. ವಿಜಯ್ ಸೇತುಪತಿ ಅವರ ಕಾಮಿಡಿ ಟೈಮಿಂಗ್ ಮತ್ತು ಮಾಸ್ ಹಾವಭಾವಗಳಿಗೆ ಲಿಜೋಮೋಲ್ ಜೋಸ್ ಹಾಗೂ ಬಾಲನಟ ಸಾಯಿ ಪೃಥ್ವಿರಾಜ್ ಸಾಥ್ ನೀಡಿದ್ದು, ತೆರೆಮೇಲೆ ಈ ಜೋಡಿಯ ಕೆಮಿಸ್ಟ್ರಿ ಅಕ್ಷರಶಃ ಅದ್ಭುತವಾಗಿ ಮೂಡಿಬಂದಿದೆ.

ತಮಿಳು ಮಾತ್ರವಲ್ಲದೆ ಪ್ರಸ್ತುತ ನೆಟ್‌ಫ್ಲಿಕ್ಸ್  ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯೊಂದಿಗೆ ಲಭ್ಯವಿರುವ ‘ಬತ್ಥಾ’ ಸಿನಿಮಾ ಕರುನಾಡಿನಲ್ಲೂ ಸಕ್ಕತ್ ಹಂಗಾಮ ಸೃಷ್ಟಿಸಿದೆ. ವೀಕೆಂಡ್‌ಗೆ ಮನೇಲಿ ಕೂತು ಎಂಜಾಯ್ ಮಾಡಲು ಪಕ್ಕಾ ಮಸಾಲೆ ಎಂಟರ್‌ಟೈನರ್ ಹುಡುಕ್ತಾ ಇದ್ದೀರಾ..? ಹಾಗಿದ್ರೆ ತಡೇಕೆ, ವಿಜಯ್ ಸೇತುಪತಿಯ ಈ ಜಾದೂ ಭರಿತ ಕಾಮಿಡಿ-ಡ್ರಾಮಾವನ್ನು ತಪ್ಪದೇ ವೀಕ್ಷಿಸಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version