ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ಆಗಲ್ಲ. ಯಾಕಂದ್ರೆ ಎಲೆಕ್ಷನ್ಸ್ ಬಳಿಕ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಜೋಡಿಸ್ತಿದ್ದಾರೆ ಟಿವಿಕೆ ಸಂಸ್ಥಾಪಕ. ಅದಕ್ಕೆ ಕಾರಣ ನಮ್ಮ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ. ದಳಪತಿ-ಮಾನ್‌ಸ್ಟರ್ ನೀಲ್ ಸಮಾಗಮದ ಹೈ ವೋಲ್ಟೇಜ್ ಸ್ಟೋರಿ ನಿಮಗಾಗಿ ಕಾಯ್ತಿದೆ ನೋಡಿ.
ತಮಿಳು ಸೂಪರ್ ಸ್ಟಾರ್ ವಿಜಯ್ 69ನೇ ಸಿನಿಮಾ ಜನನಾಯಗನ್ ರಿಲೀಸ್‌ಗೂ ಮೊದಲೇ ಪೈರಸಿ ಆಗುವ ಮೂಲಕ ಹೆಚ್‌ಡಿ ಪ್ರಿಂಟ್ ಲೀಕ್ ಆಗಿ ಬಿಟ್ಟಿದೆ. ಟಿವಿಕೆ ಪಕ್ಷ ಕಟ್ಟಿ, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರೋ ದಳಪತಿ ವಿಜಯ್, ಸಿಎಂ ಆಗಿ ಜನ ಸೇವೆ ಮಾಡುವ ಕನಸು ಕಂಡಿದ್ದಾರೆ. ಇದೇ ವೇಳೆ ಸಿನಿಮಾಗೆ ಗುಡ್ ಬೈ ಹೇಳಿ, ರಾಜಕಾರಣದಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನಲಾಗಿತ್ತು.
ದಳಪತಿಗೆ ನೀಲ್ ಆ್ಯಕ್ಷನ್ ಕಟ್..ಕಾಲಿವುಡ್‌ಗೆ ಮಾನ್‌ಸ್ಟರ್
ಎಲೆಕ್ಷನ್ ಬಳಿಕ ಹೈ ವೋಲ್ಟೇಜ್ ಸಿನಿಮಾಗಾಗಿ ವಿಜಯ್ ಬಣ್ಣ
ಅಲ್ಲಿಗೆ ಜನ ನಾಯಗನ್ ಸಿನಿಮಾ ವಿಜಯ್ ಬಣ್ಣ ಹಚ್ಚಿದ ಕಟ್ಟ ಕಡೆಯ ಸಿನಿಮಾ ಆಗಲಿದೆ ಅಂತ ಫ್ಯಾನ್ಸ್ ಜೊತೆ ಡೈರೆಕ್ಟರ್‌ಗು ಹಾಗೂ ಪ್ರೊಡ್ಯೂಸರ್‌ಗಳು ಕೂಡ ಫೀಲ್ ಆಗಿದ್ರು. ಆದ್ರೀಗ ವಿಜಯ್ ಗುಡ್ ನ್ಯೂಸ್ ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಎಲೆಕ್ಷನ್ಸ್ ಬಳಿಕ ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚುತ್ತಾರಂತೆ. ಅದೂ ನಮ್ಮ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಅನ್ನೋದು ಇಂಟರೆಸ್ಟಿಂಗ್.
KVN ಲಾಸ್ ತುಂಬಿಕೊಡೋಕೆ ದಳಪತಿ ಮಾಸ್ಟರ್‌ಪ್ಲ್ಯಾನ್..!
ರಿಲೀಸ್‌ಗೂ ಮೊದಲೇ ಜನ ನಾಯಗನ್ HD ಸಿನಿಮಾ ಪೈರಸಿ
ಕೆಜಿಎಫ್, ಸಲಾರ್ ಸಿನಿಮಾಗಳ ಖ್ಯಾತಿಯ ನೀಲ್ ಸದ್ಯ ಭಾರತದ ಸೆನ್ಸೇಷನಲ್ ಡೈರೆಕ್ಟರ್‌ಗಳಲ್ಲಿ ಒಬ್ಬರು. ಇದೀಗ ಜೂನಿಯರ್ ಎನ್‌ಟಿಆರ್ ಜೊತೆ ಡ್ರ್ಯಾಗನ್ ಅನ್ನೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಅದಾದ ಬಳಿಕ ಸಲಾರ್-2ಗೂ ಮುನ್ನ ವಿಜಯ್‌ಗೆ ನಿರ್ದೇಶನ ಮಾಡ್ತಾರೆ ಎನ್ನಲಾಗ್ತಿದೆ. ಕನ್ನಡದ ಪ್ರತಿಷ್ಠಿತ ಕೆವಿಎನ್ ನಿರ್ಮಾಣ ಸಂಸ್ಥೆಗೆ ಸಿಕ್ಕಾಪಟ್ಟೆ ಲಾಸ್ ಆಗಿದ್ದು, ಆ ಲಾಸ್‌ನ ತುಂಬಿಕೊಡೋ ಉದ್ದೇಶದಿಂದ ವಿಜಯ್ ಮತ್ತೆ ಡೇಟ್ಸ್ ನೀಡಿದ್ದಾರೆ ಅನ್ನೋದು ಟಾಕ್ ಆಫ್ ದಿ ಟೌನ್ ಆಗಿದೆ.
300 ರಿಂದ 500 ಕೋಟಿ ದುಬಾರಿ ಬಜೆಟ್‌ನಲ್ಲಿ ಜನ ನಾಯಗನ್ ಚಿತ್ರ ತಯಾರಾಗಿದ್ದು, ತೆಲುಗಿನ ಭಗವಂತ್ ಕೇಸರಿ ರಿಮೇಕ್ ಅನ್ನೋದು ಒಂದು ಕಡೆ ಆದ್ರೆ, ಪೈರಸಿ ಕಾಪಿ ಸೋರಿಕೆ ಆಗಿರೋದು ಮತ್ತೊಂದು ವಿಘ್ನ. ಹೀಗಾಗಿ ಸಿನಿಮಾದ ಬ್ಯುಸಿನೆಸ್‌ಗೆ ಬಹುದೊಡ್ಡ ಹೊಡೆತ ಬೀಳಲಿದೆ. ಅದೇ ಕಾರಣಕ್ಕೆ ವಿಜಯ್, ನಿರ್ಮಾಣ ಸಂಸ್ಥೆ ಜೊತೆಗೂಡಿ ಮಾನ್‌ಸ್ಟರ್ ಡೈರೆಕ್ಟರ್ ನೀಲ್‌ರೊಂದಿಗೆ ಮಾಸ್ಟರ್‌ಪ್ಲ್ಯಾನ್ ಮಾಡ್ತಿದೆ. ನೀಲ್ ಕೂಡ ವಿಜಯ್‌ಗೆ ಫ್ಯಾನ್ ಆಗಿದ್ದು, ಇದು ಬಿಗ್ಗೆಸ್ಟ್ ವೆಂಚರ್ ಆಫ್ ದಿ ಡಿಕೆಡ್ ಆಗುವುದರಲ್ಲಿ ಅನುಮಾನವೇ ಇಲ್ಲ.
