ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರ ಜೀವನದಲ್ಲಿ ನಡೆದಿರುವ ಅಹಿತಕರ ಘಟನೆಯೊಂದು ಬಹಿರಂಗವಾಗಿದೆ. ಬಾಲ್ಯದಲ್ಲಿ ತಾನು ಅನುಭವಿಸಿದ ಲೈಂಗಿಕ ಕಿರುಕುಳದ ಕುರಿತು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಗಳು ಅವರ ಮನಸ್ಸಿನಲ್ಲಿ ಬಿರುಕು ಮೂಡಿಸಿದ್ದರೂ, ಇವತ್ತು ಅವರು ತಮ್ಮ ಅನುಭವವನ್ನು ಧೈರ್ಯದಿಂದ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ವರಲಕ್ಷ್ಮಿ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಒಂದು ನೃತ್ಯ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಬಾಲ್ಯದಲ್ಲಿದ್ದಾಹ ನನ್ನ ಪೋಷಕರು ಕೆಲಸದ ಒತ್ತಡದಿಂದಲೇ ಬ್ಯುಸಿಯಾಗಿದ್ದರು, ಆದ್ದರಿಂದಲೇ ನನ್ನನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು.. ಆದರೆ, ಈ ವೇಳೆ ಆರು ಜನ ಸಂಬಂಧಿಕರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ವರಲಕ್ಷ್ಮಿ ಶರತ್‌ಕುಮಾರ್ ಅವರು ತನ್ನ ನೋವಿನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳನ್ನು ಮನಸ್ಸಿನಲ್ಲಿ ತಡೆಯುವ ಬದಲು, ಇತರರಿಗೆ ಪ್ರೇರಣೆ ನೀಡಲು ತಾವು ತೀರ್ಮಾನಿಸಿದ್ದೇನೆಂದು ಅವರು ಹೇಳಿದ್ದಾರೆ.
ವರಲಕ್ಷ್ಮಿ ಶರತ್‌ಕುಮಾರ್ ಈ ಘಟನೆಗಳನ್ನು ಹಂಚಿಕೊಳ್ಳುವ ಮೂಲಕ, ಪೋಷಕರಿಗೆ ತಮ್ಮ ಮಕ್ಕಳಿಗೆ ‘ಒಳ್ಳೆಯ ಸ್ಪರ್ಶ’ ಮತ್ತು ‘ಕೆಟ್ಟ ಸ್ಪರ್ಶ’ದ ನಡುವಿನ ವ್ಯತ್ಯಾಸವನ್ನು ಬೋಧಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಮಕ್ಕಳಿಗೆ ತಮ್ಮದೇ ಆದ ಹಕ್ಕುಗಳನ್ನು ಬೋಧಿಸಿ, ಅವರಿಗೆ ಸುರಕ್ಷಿತ ವಾತಾವರಣವನ್ನು ನೀಡುವುದು ಅವಶ್ಯಕ ಎಂದು ಒತ್ತಿ ಹೇಳಿದ್ದಾರೆ.
#MeToo ಆಂದೋಲನದ ನಂತರ, ಅನೇಕ ನಟಿಯರು ತಮ್ಮ ಅನುಭವಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಕಾಸ್ಟಿಂಗ್ ಕೌಚ್ ಮತ್ತು ಲೈಂಗಿಕ ಕಿರುಕುಳವು ಮಾತ್ರವಲ್ಲ, ಮನೆಯೊಳಗಿದ್ದವರಿಂದಲೂ ಬಾಲಕಿರು ಇದಕ್ಕೆ ಬಲಿಯಾಗುತ್ತಾರೆಯೇ ಎಂಬುದು ಗಂಭೀರ ವಿಚಾರವಾಗಿದೆ. ವರಲಕ್ಷ್ಮಿ ಅವರಂತಹ ವ್ಯಕ್ತಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುವುದರಿಂದ ಇತರರು ಸಹ ಧೈರ್ಯ ಪಡೆಯುತ್ತಾರೆ ಮತ್ತು ಮಕ್ಕಳಿಗೆ ಉತ್ತಮ ರಕ್ಷಣೆ ನೀಡಲು ಪೋಷಕರು ಎಚ್ಚರಿಕೆ ವಹಿಸುತ್ತಾರೆ.
ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ‘ಮಾಣಿಕ್ಯ’ ಸಿನಿಮಾದಲ್ಲಿ ನಟ ಸುದೀಪ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದು, ‘ರನ್ನ’, ‘ವಿಸ್ಮಯ’, ‘ರಣಂ’ ಸಿನಿಮಾಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ರೂಪಾ ಪಾತ್ರದಲ್ಲಿ ನಟಿಸಿರುವ ಅವರು, ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ವರಲಕ್ಷ್ಮಿ ಶರತ್‌ಕುಮಾರ್ ಅವರ ಧೈರ್ಯ ಮತ್ತು ಅವರ ಸ್ಪಷ್ಟ ವಿಚಾರಧಾರೆ ಇತರರಿಗೆ ಪ್ರೇರಣೆ ನೀಡಲು ಕಾರಣವಾಗಿದೆ. ಇಂತಹ ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ, ಇತರರು ಸಹ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಂತೆ ಮಾಡಲು ಅವರು ಮಾಡಿದ ಪ್ರಯತ್ನ ಶ್ಲಾಘನೀಯವಾಗಿದೆ.