ಸ್ಯಾಂಡಲ್‌ವುಡ್‌‌ಗೆ ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಎಂಟ್ರಿ

Untitled design 2025 05 12t124111.959

ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆಯುಷ್ ಅವರ ಮೊದಲ ಚಿತ್ರವನ್ನು ನಿರ್ದೇಶಕ ಪುರುಷೋತ್ತಮ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ ನಟಿ ತಾರಾ ಅವರ ಪತಿ ವೇಣುಗೋಪಾಲ್ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್ ಗೆ ಮಾಹಿತಿ ಸಿಕ್ಕಿದೆ.

ಆಯುಷ್ ಅವರ ಹುಟ್ಟುಹಬ್ಬದ ಹಿನ್ನೆಲೆ ಉಪೇಂದ್ರ ಅವರ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಆಯುಷ್ ಅವರ ಮೊದಲ ಚಿತ್ರಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಧಾರ್ಮಿಕ ಯಾತ್ರೆಯಲ್ಲಿ ಆಯುಷ್ ಜೊತೆಗೆ ಉಪೇಂದ್ರ, ಅವರ ಪತ್ನಿ ಪ್ರಿಯಾಂಕ, ಮತ್ತು ಕುಟುಂಬದ ಇತರ ಸದಸ್ಯರು ಭಾಗವಹಿಸಿದ್ದರು. ಇದೇ ವೇಳೆ ನಟಿ ತಾರಾ ಅವರ ಕುಟುಂಬವೂ ಉಪೇಂದ್ರ ಕುಟುಂಬಕ್ಕೆ ಸಾಥ್ ನೀಡಿದರು.

ಉಪೇಂದ್ರ ಅವರಂತೆ ಆಯುಷ್ ಕೂಡ ತಮ್ಮ ನಟನೆ ಮತ್ತು ಶೈಲಿಯಿಂದ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆಯಿದೆ. ವೇಣುಗೋಪಾಲ್ ಅವರ ಛಾಯಾಗ್ರಹಣ ಮತ್ತು ಪುರುಷೋತ್ತಮ್ ಅವರ ನಿರ್ದೇಶನದಲ್ಲಿ ಈ ಚಿತ್ರ ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿ ಮೂಡಿಬರಲಿದೆ ಎಂದು ಚಿತ್ರರಂಗದ ಮಾಹಿತಿಗಳು ತಿಳಿಸಿವೆ.

Exit mobile version