ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಹೇಳಿದಂತೆ ನುಡಿದ ಉಪೇಂದ್ರ ಶಾರ್ಪ್ ಬೆಳಗ್ಗೆ 10 ಗಂಟೆಗೆ ಸೀಕ್ರೆಟ್ ಲಿಂಕ್ ಪೋಸ್ಟ್ ಮಾಡಿ ದೊಡ್ಡ ಅಚ್ಚರಿ ಮೂಡಿಸಿದ್ದಾರೆ. ಇದು ಸಿನಿಮಾ ಅನೌನ್ಸ್‌ಮೆಂಟ್ ಅಲ್ಲ ಕಣ್ರೀ..? ಹಾಗಾದ್ರೆ ಏನು..? ಉಪ್ಪಿ ಹಾಕಿದ ಆ ಲಿಂಕ್ ಹಿಂದೆ ಏನು ಮೆಸೇಜ್ ಇದೆ ಅನ್ನೋದನ್ನ ತಿಳ್ಕೊಳ್ಳೋಕೆ ಈ ಸ್ಟೋರಿ ನೋಡಿ.
- ಸೀಕ್ರೆಟ್ ಲಿಂಕ್ ಬಂದೆ ಬಿಡ್ತು ಬಾಂಬ್ ಸಿಡಿಸಿದ ಉಪ್ಪಿ
- ಲಿಂಕ್ ಓಪನ್ ಮಾಡಿದ್ರೆ ಸಿಕ್ಕಿದ್ದು ಖಾಲಿ ಸಿಲಿಂಡರ್
- ಕ್ರಿಯೇಟಿವ್ ಸ್ಟೈಲ್‌ನಲ್ಲಿ ಸತ್ಯ ಹೇಳಿದ ರಿಯಲ್ ಸ್ಟಾರ್
- ಸಿನಿ, ಸಮಾಜ, ರಾಜಕೀಯ ಉಪ್ಪಿ ಮೂರು ಟ್ರ್ಯಾಕ್
ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕೇಳಿದ್ರೆ ಸಾಕು ಅಲ್ಲಿ ಒಂದು ವಿಭಿನ್ನ ಚಿಂತನೆ, ಕ್ರಿಯೇಟಿವ್ ಐಡಿಯಾ, ಶಾಕ್ ಎಲೆಮೆಂಟ್ ಖಂಡಿತಾ ಇರುತ್ತೆ. ನಟನಾಗಿ, ನಿರ್ದೇಶಕರಾಗಿ ಮಾತ್ರ ಅಲ್ಲ ಸಮಾಜದ ವಿಚಾರಗಳನ್ನೂ ತಮ್ಮದೇ ಸ್ಟೈಲ್‌ನಲ್ಲಿ ಹೇಳೋ ಕಲಾವಿದ ಉಪ್ಪಿ. ಅವರ ಸಿನಿಮಾಗಳೇ ಸಾಕು ಪ್ರೇಕ್ಷಕರಿಗೆ ಹೊಸ ರೀತಿಯ ಯೋಚನೆ ಹುಟ್ಟಿಸಲು. ಹೀಗಿರುವಾಗ ನಿನ್ನೆ ರಾತ್ರಿ ಉಪೇಂದ್ರ ಹಾಕಿದ ಒಂದು ಪೋಸ್ಟ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕುತೂಹಲದ ಅಲೆ ಎಬ್ಬಿಸಿತು.
ಭಾನುವಾರ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಹಾಕ್ತೀನಿ ಸ್ವಲ್ಪ ಹೊತ್ತಿನಲ್ಲಿ ಡಿಲೀಟ್ ಆಗಬಹುದು… ನೋಡಿದ್ರೆ ಬೇರೆ, ಯಾರಿಗೂ ಹೇಳ್ಬೇಡಿ ಸದ್ಯಕ್ಕೆ ಇದು ನಮ್ಮ ಮಧ್ಯೆ ಇರಲಿ ಅಂತ ಬರೆದಿದ್ದ ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಏನಿರಬಹುದು ಆ ಲಿಂಕ್‌ನಲ್ಲಿ? ಹೊಸ ಸಿನಿಮಾ ಅನೌನ್ಸ್‌ಮೆಂಟ್ ಆಗಿರಬಹುದಾ? ಹೊಸ ಲುಕ್ ರಿವೀಲ್ ಆಗ್ತಿದೆಯಾ? ಅಥವಾ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸರ್ಪ್ರೈಸ್ ಇದೆಯಾ? ಅಂತ ಫ್ಯಾನ್ಸ್ ರಾತ್ರಿ ಪೂರಾ ಕಾಯುತ್ತಿದ್ದರು.
ರಿಯಲ್ ಸ್ಟಾರ್ ಉಪೇಂದ್ರ ಹೇಳಿದಂತೆ ಮಾಡಿದ್ದಾರೆ. ಕರೆಕ್ಟ್ ಆಗಿ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿದ್ದಾರೆ. ಈ ಲಿಂಕ್ ಓಪನ್ ಮಾಡಿದ್ಮೇಲೆ ನಿಮಗೆ ಶಾಕ್ ಆಗುತ್ತದೆ. ಇಷ್ಟೇನಾ ಅಂತಲೂ ಫೀಲ್ ಆಗುತ್ತದೆ. ಆದರೆ, ಉಪ್ಪಿ ಇಲ್ಲಿ ಸತ್ಯವನ್ನೆ ಹೇಳಿದ್ದಾರೆ. ಎಸ್, ಸೀಕ್ರೆಟ್ ಲಿಂಕ್ ಓಪನ್ ಮಾಡಿದ್ರೇ ಕಣ್ಣೀಗೆ ಬಿದ್ದಿದ್ದು ಸಿಲಿಂಡರ್. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಪರಿಣಾಮ ಭಾರತದ ಮೇಲೆ ಗಂಭೀರವಾಗಿ ಬೀರಿದೆ. ಸಿಲೆಂಡ್ ಹಾಹಾಕಾರ ಶುರುವಾಗಿದೆ.
ಇರಾನ್‌ನಿಂದ ಭಾರತಕ್ಕೆ ಬರುವ ಡ್ರೈ ಫ್ರೂಟ್ಸ್‌ಗಳು ದುಬಾರಿ ಆಗ್ತಿವೆ.ಈ ನಡುವೆ ಹೆಚ್ಚು ಇಕ್ಕಟ್ಟಿಗೆ ಸಿಲುಕಿರುವುದು ಸಿಲಿಂಡರ್ ಬಳಕೆದಾರರು. ಮನೆ, ಹೋಟೆಲ್‌ಗಳಲ್ಲಿ ಸಿಲಿಂಡರ್‌ಗೆ ದುಬಾರಿ ಬೆಲೆ ತೆತ್ತು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಲ್ಯಾಕ್‌ನಲ್ಲಿ ಸಿನಿಮಾ ಟಿಕೆಟ್‌ಗಳನ್ನ ಮಾರುವುದನ್ನ ನೋಡಿದ್ದೀವಿ, ಈಗ ಬ್ಲ್ಯಾಕ್‌ನಲ್ಲಿ ಸಿಲಿಂಡರ್ ಮಾರಟ ಮಾಡೋವುದನ್ನ ನೋಡುತ್ತಿದ್ದೇವೆ. ಉಪೇಂದ್ರ ಅವರು ಕಳುಹಿಸಿರುವ ಹೆಸರಿಲ್ಲದ ಖಾಲಿ ಸಿಲಿಂಡರ್ ಫೋಟೋ ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ.
ಹೌದು, ಇರೋ ಸತ್ಯವನ್ನ ತುಂಬಾನೆ ಕ್ರಿಯೇಟಿವ್ ಆಗಿಯೇ ಉಪೇಂದ್ರ ಹೇಳಿದ್ದಾರೆ. ಒಂದು ಸಾಮಾನ್ಯ ಸಿಲಿಂಡರ್ ಫೋಟೋ ಹಾಕಿದರೂ ದೇಶದ ಪರಿಸ್ಥಿತಿಯ ಬಗ್ಗೆ ದೊಡ್ಡ ಚರ್ಚೆ ಶುರುಮಾಡಿಸುವ ಶಕ್ತಿ ಇದ್ದರೆ ಅದೇ ಉಪೇಂದ್ರ ಮಾಯೆ ಅಂತ ಹೇಳಬೇಕು. ಸದ್ಯ ಬುದ್ಧಿವಂತ 2, ಭಾರ್ಗವ ಸೇರಿದಂತೆ ಪರಭಾಷೆ ಸಿನಿಮಾಗಳು ಲೈನಪ್‌ನಲ್ಲಿ ಇದ್ದು, ಮತ್ತೆ ದೊಡ್ಡ ಸರ್ಪ್ರೈಸ್ ನೀಡಲು ರಿಯಲ್ ಸ್ಟಾರ್ ರೆಡಿಯಾಗ್ತಿದ್ದಾರೆ. ಉಪ್ಪಿ ಮುಂದಿನ ಹೆಜ್ಜೆ ಏನು ಅನ್ನೋದನ್ನ ನೋಡೋ ಕುತೂಹಲ ಈಗ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್