ಸೂಪರ್ ಸ್ಟಾರ್ ಉಪೇಂದ್ರ.. ಸದ್ಯ ಭಾರತೀಯ ಚಿತ್ರರಂಗದಲ್ಲಿ ಟಾಕ್ ಆಫ್ ದಿ ಟೌನ್ ಆಗಿರೋ ಹೆಸರು. ಯೆಸ್.. ಕೂಲಿ ಸಕ್ಸಸ್‌ನಿಂದ ಎಲ್ಲೆಲ್ಲೂ ಸದ್ದು ಮಾಡ್ತಿರೋ ಉಪ್ಪಿ, ಸದ್ಯ ಸ್ಯಾಂಡಲ್‌ವುಡ್‌ನ ಭಾರ್ಗವನ ಅವತಾರ ತಾಳಿದ್ದಾರೆ. ಗಣೇಶ ಹಬ್ಬದಲ್ಲಿ ಈ ವಿಷಯ ರಿವೀಲ್ ಮಾಡಿದ್ದು, ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
- ‘ಭಾರ್ಗವ’ನಾದ ಉಪೇಂದ್ರ.. ವಯಲೆಂಟ್ ಫ್ಯಾಮಿಲಿಮ್ಯಾನ್
- ಉಪ್ಪಿ-ನಾಗಣ್ಣ ಐದನೇ ಕಾಂಬೋ.. ಪಂಚ್ ಕೊಡೋಕೆ ಸಜ್ಜು..!
- ‘ಕೂಲಿ’ ಸಕ್ಸಸ್ ಅಲೆಯಲ್ಲಿರೋ ಸೂಪರ್ ಸ್ಟಾರ್ ಉಪೇಂದ್ರ
- ಡಿಸೆಂಬರ್‌ನಲ್ಲಿ ಮಲ್ಟಿಸ್ಟಾರರ್ ‘45’.. ಉಪ್ಪಿ ಮಾಸ್ ಖದರ್..!
ಉಪ್ಪಿಗಿಂತ ರುಚಿ ಬೇರೆ ಇಲ್ಲ.. ಒಪ್ಪಿಕೊಂಡೋರು ದಡ್ಡರಲ್ಲ. ಹೌದು, ಡಿಫರೆಂಟ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಸೂಪರ್ ಸ್ಟಾರ್ ಉಪೇಂದ್ರ, ರಿಯಾಲಿಟಿಗೆ ಹತ್ತಿರ ಆಗಿರೋ ವಿಷಯಗಳಿಂದ, ಸತ್ಯವನ್ನು ತಲೆಮೇಲೆ ಹೊಡೆದಂತೆ ಹೇಳುವ ರಿಯಲ್ ಸ್ಟಾರ್. ಹಾಗಾಗಿಯೇ ಅವರ ಸಿನಿಮಾಗಳು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಅನ್ನೋದು ಓಪನ್ ಸೀಕ್ರೆಟ್. ತಮ್ಮ ನಿರ್ದೇಶನದಿಂದ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಉಪ್ಪಿ, ಇದೀಗ ಕೂಲಿ ಚಿತ್ರದಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಹೌದು, ತಲೈವಾ ರಜನೀಕಾಂತ್ ಜೊತೆ ಕಲೀಶನಾಗಿ ಕಮಾಲ್ ಮಾಡಿರೋ ಉಪೇಂದ್ರ ನಟನಾ ಗಮ್ಮತ್ತಿಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇವರಲ್ಲಿ ಇಂತಹ ಅದ್ಭುತ ಕಲಾವಿದನಿದ್ದಾನಾ ಅಂತ ಹೆಬ್ಬೇರಿಸಿ ನೋಡ್ತಿದ್ದಾರೆ. ಸಾವಿರ ಕೋಟಿ ಗಡಿ ಮುಟ್ಟುತ್ತಿರೋ ರಜನಿ- ಉಪ್ಪಿಯ ಕೂಲಿ ಬಿಗ್ಗೆಸ್ಟ್ ಸಕ್ಸಸ್ ಬೆನ್ನಲ್ಲೇ ಉಪ್ಪಿ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಒಳ್ಳೊಳ್ಳೆಯ ಸಿನಿಮಾಗಳನ್ನ ಮಾಡೋದ್ರಲ್ಲಿ ಬ್ಯುಸಿ ಆಗ್ತಿದ್ದಾರೆ.
ಶಿವರಾಜ್‌ಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ಉಪೇಂದ್ರ ನಟಿಸಿರೋ ಮತ್ತೊಂದು ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ 45. ಈ ಚಿತ್ರ ಇದೇ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸುತ್ತಿದ್ದು, ಡಿಫರೆಂಟ್ ಹಾಗೂ ಸ್ಟೈಲಿಶ್ ಲುಕ್ಸ್‌ನಲ್ಲಿ ಉಪ್ಪಿ ಮಾಸ್ ಖದರ್ ತೋರಲಿದ್ದಾರೆ. ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ಅದಕ್ಕಿಂತ ನೆಕ್ಸ್ಟ್ ಲೆವೆಲ್‌ನಲ್ಲಿ ಪ್ರೇಕ್ಷಕರನ್ನ ಉಣಬಡಿಸಲಿದೆ ಎನ್ನಲಾಗ್ತಿದೆ.
ಇನ್ನು ಇವುಗಳ ಜೊತೆಗೆ ತ್ರಿಶೂಲಂ, ಬುದ್ಧಿವಂತ-2, ನೆಕ್ಸ್ಟ್ ಲೆವೆಲ್ ಹೀಗೆ ಸಾಕಷ್ಟು ಚಿತ್ರಗಳು ಮೇಕಿಂಗ್ ಹಂತದಲ್ಲಿವೆ. ಅವುಗಳ ಜೊತೆಗೆ ಮತ್ತೊಂದು ಮೆಗಾ ಮೂವಿಯ ಚಿತ್ರೀಕರಣ ಭರದಿಂದ ಸಾಗ್ತಿದೆ. ಅದೇ ಭಾರ್ಗವ. ಹೌದು, ಕೋಟಿಗೊಬ್ಬ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗ್ತಿರೋ ಈ ಸಿನಿಮಾಗೆ ಭಾರ್ಗವ ಅಂತ ಟೈಟಲ್ ಇಟ್ಟಿದ್ದು, ವಯಲೆಂಟ್ ಫ್ಯಾಮಿಲಿಮ್ಯಾನ್ ಆಗಿ ಉಪ್ಪಿ ಮಿಂಚು ಹರಿಸಲಿದ್ದಾರೆ. ಗಣೇಶ ಹಬ್ಬದ ವಿಶೇಷ ಚಿತ್ರದ ಟೈಟಲ್ ಜೊತೆ ಫಸ್ಟ್‌ಲುಕ್ ಪೋಸ್ಟರ್ ಕೂಡ ರಿವೀಲ್ ಮಾಡಿದೆ ಚಿತ್ರತಂಡ.
ಅಂದಹಾಗೆ ಫ್ಯಾಮಿಲಿಮ್ಯಾನ್ ಆಗಿ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ ಬಣ್ಣ ಹಚ್ಚಿದ್ರು. ಆದ್ರೆ ಇದರಲ್ಲಿ ಕೊಂಚ ವಯಲೆಂಟ್ ಆಗಿ ಖದರ್ ತೋರಲಿದ್ದಾರಂತೆ. ಈ ಭಾರ್ಗವ ಚಿತ್ರಕ್ಕೆ ಖ್ಯಾತ ಹಿರಿಯ ನಿರ್ದೇಶಕರಾದ ನಾಗಣ್ಣ ಆ್ಯಕ್ಷನ್ ಕಟ್ ಹೇಳ್ತಿದ್ದು, ಇದು ಉಪೇಂದ್ರ- ನಾಗಣ್ಣ ಐದನೇ ಕಾಂಬೋ ಆಗಲಿದೆ. ಹೌದು, ಈ ಹಿಂದೆ ಗೋಕರ್ಣ, ಕುಟುಂಬ, ಗೌರಮ್ಮ ಹಾಗೂ ದುಬೈ ಬಾಬು ಅಂತಹ ಹಿಟ್ ಚಿತ್ರಗಳನ್ನ ಉಪ್ಪಿಗೆ ಡೈರೆಕ್ಟ್ ಮಾಡಿದ್ದ ನಾಗಣ್ಣ, ಈ ಬಾರಿ ಮಗದೊಮ್ಮೆ ಬುದ್ದಿವಂತನಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.