ಧರ್ಮಸ್ಥಳ: ಕನ್ನಡ ಚಿತ್ರರಂಗದ ಪೋಷಕ ನಟ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಮನೆಮಾತಾಗಿದ್ದ ಉಗ್ರಂ ಮಂಜು ಇಂದು (ಜನವರಿ 23) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಗುರು-ಹಿರಿಯರ ಆಶೀರ್ವಾದದೊಂದಿಗೆ ಈ ಶುಭ ಕಾರ್ಯ ನೆರವೇರಿದೆ.
ಸರಳ ಸುಂದರ ವಿವಾಹ ಸಮಾರಂಭ
ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆದ ಈ ವಿವಾಹ ಸಮಾರಂಭ ಅತ್ಯಂತ ಶಾಸ್ತ್ರೋಕ್ತವಾಗಿ ಜರುಗಿತು. ಕೇವಲ ಆಪ್ತರು, ಕುಟುಂಬದ ಸದಸ್ಯರು ಮತ್ತು ಚಿತ್ರರಂಗದ ಕೆಲವೇ ಕೆಲವು ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಮಂಜು ಮತ್ತು ಸಾಯಿ ಸಂಧ್ಯಾ ಪರಸ್ಪರ ಮಾಲೆ ಬದಲಾಯಿಸಿಕೊಂಡರು. ನಿನ್ನೆ ಮಂಜು ಅವರ ನಿವಾಸದಲ್ಲಿ ಸರಳವಾಗಿ ಅರಿಶಿಣ ಶಾಸ್ತ್ರ (ಹಳದಿ ಶಾಸ್ತ್ರ) ನಡೆದಿತ್ತು. ಸಾಂಪ್ರದಾಯಿಕ ಪಂಚೆ ತೊಟ್ಟು ಸರಳ ಉಡುಗೆಯಲ್ಲಿ ಮಂಜು ಮಿಂಚಿದ್ದರು. ಈ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವದಂಪತಿಗಳಿಗೆ ಹಾರೈಸುತ್ತಿದ್ದಾರೆ.
ಯಾರು ಈ ಸಾಯಿ ಸಂಧ್ಯಾ ?
ಉಗ್ರಂ ಮಂಜು ಅವರ ಕೈಹಿಡಿದ ಹುಡುಗಿ ಸಾಯಿ ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿನ್ ಡಿಪಾರ್ಟ್‌ಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಟ್ರಾನ್ಸ್‌ಪ್ಲಾಂಟ್ ಕೋಆರ್ಡಿನೇಟರ್’ (Transplant Coordinator) ಎಂದು ಬರೆದುಕೊಂಡಿದ್ದಾರೆ.
ಶ್ರೀಮುರಳಿ ನಟನೆಯ ಉಗ್ರಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಮಂಜು, ಅಂದಿನಿಂದ ಉಗ್ರಂ ಮಂಜು ಎಂದೇ ಖ್ಯಾತಿ ಪಡೆದರು. ಇದಲ್ಲದೇ ಹೀರೋ, ಕಿಡಿ, ಕಿರೀಟ, ರಾನಿ, ದೂರದರ್ಶನ ಸಿನಿಮಾಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಮ್ಯಾಕ್ಸ್ ಸಿನಿಮಾದಲ್ಲಿ ಉಗ್ರಂ ಮಂಜು ಸೂಪರ್ ಆಗಿ ಆ್ಯಕ್ಟ್ ಮಾಡಿದ್ದರು. ಕೇವಲ ವಿಲನ್ ಪಾತ್ರಗಳಿಗೆ ಸೀಮಿತವಾಗದೆ, ವಿಭಿನ್ನ ಪಾತ್ರಗಳ ಮೂಲಕ ತಮ್ಮ ನಟನಾ ಚಾತುರ್ಯ ಮೆರೆದಿದ್ದಾರೆ.
ಬೆಂಗಳೂರಿನಲ್ಲಿ ಅದ್ದೂರಿ ರಿಸೆಪ್ಶನ್
ಧರ್ಮಸ್ಥಳದಲ್ಲಿ ಮದುವೆ ಸರಳವಾಗಿ ನಡೆದಿದ್ದರೂ, ಬೆಂಗಳೂರಿನಲ್ಲಿ ಸಿನಿಮಾ ಕ್ಷೇತ್ರದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಶನ್ ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಯ ಸಹ-ಸ್ಪರ್ಧಿಗಳು ಹಾಗೂ ಚಿತ್ರರಂಗದ ತಾರೆಯರು ಈ ಸಂಭ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಉಗ್ರಂ ಮಂಜು; ಅರಿಶಿಣ ಶಾಸ್ತ್ರದ ಫೋಟೋ ವೈರಲ್
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ ಉಗ್ರಂ ಮಂಜು ಅವರು ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಉಗ್ರಂ ಮಂಜು ಅವರು ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜನವರಿ 23ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ಅವರ ವಿವಾಹಕ್ಕೂ ಮುನ್ನ ಮನೆಯಲ್ಲೇ ಸರಳವಾಗಿ ಅರಿಶಿಣ ಶಾಸ್ತ್ರ ನೆರವೇರಿದೆ
ಉಗ್ರಂ ಮಂಜು ಅವರ ನಿವಾಸದಲ್ಲಿ ನಡೆದ ಈ ಅರಿಶಿಣ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಆಪ್ತರು ಹಾಗೂ ಕೆಲವೇ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ಯಾವುದೇ ಅದ್ದೂರಿಯಾಗಿ ಆಗದೆ, ಸಂಪ್ರದಾಯಬದ್ಧವಾಗಿ ನಡೆದ ಈ ಸಮಾರಂಭ ಎಲ್ಲರ ಮನ ಸೆಳೆದಿದೆ. ಅರಿಶಿಣ ಹಚ್ಚಿಕೊಂಡು ಮಧುಮಗನ ಕಳೆಯಲ್ಲಿ ಮಿಂಚುತ್ತಿರುವ ಉಗ್ರಂ ಮಂಜು ಅವರ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ವೈಭವದಿಂದ ನೆರವೇರಿತ್ತು. ಮಂಜು ಅವರ ಸರಳ ವ್ಯಕ್ತಿತ್ವಕ್ಕೆ ತಕ್ಕಂತೆ ಮದುವೆಯೂ ಕೂಡ ಸಂಪ್ರದಾಯಬದ್ಧವಾಗಿ ನಡೆಯಲಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಯೊಳಗಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಭಾರೀ ಸದ್ದು ಮಾಡಿತ್ತು. ಕಾರ್ಯಕ್ರಮದ ವೇಳೆ ಮಂಜು ಅವರ ಆಪ್ತ ಸ್ನೇಹಿತರು ಬಿಗ್ ಬಾಸ್ ಮನೆಗೆ ಆಗಮಿಸಿ, ಅಲ್ಲಿಯೇ ಗ್ರ್ಯಾಂಡ್ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದು ವಿಶೇಷವಾಗಿತ್ತು. ಈ ವೇಳೆ ಬಿಗ್ ಬಾಸ್ ವಿನ್ನರ್ ಆಗಿರುವ ‘ಗಿಲ್ಲಿ’ ನಟ ಮಂಜು ಅವರನ್ನು ಮದುವೆ ವಿಚಾರವಾಗಿ ನಿರಂತರವಾಗಿ ಸತಾಯಿಸಿದ್ದು, ಕೆಲ ಸಂದರ್ಭಗಳಲ್ಲಿ ಹಾಸ್ಯ ಮಿತಿಮೀರಿದೆ ಎನ್ನುವ ಅಭಿಪ್ರಾಯವೂ ಮೂಡಿತ್ತು
ಗಿಲ್ಲಿ ನಟನ ಹಾಸ್ಯ ಮಂಜು ಅವರಿಗೆ ಸಿಟ್ಟನ್ನು ತರಿಸಿದ್ದು ಮಾತ್ರವಲ್ಲದೆ, ಈ ವಿಚಾರ ಹೊರಗೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬಳಿಕ ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಕೂಡ ಈ ವಿಷಯಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತಪಡಿಸುವ ಪೋಸ್ಟ್ ಹಂಚಿಕೊಂಡಿದ್ದರು. ಇದಾದ ಬಳಿಕ ಇಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಬಿದ್ದಿದೆಯೇ ಎಂಬ ಪ್ರಶ್ನೆಗಳು ಮೂಡಿದ್ದವು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಈಗ ಉಗ್ರಂ ಮಂಜು ಅವರ ಮದುವೆ ಸಮೀಪಿಸುತ್ತಿರುವುದರಿಂದ, ‘ಪಳಾರ್ ಗಿಲ್ಲಿ’ ನಟ ಮದುವೆಗೆ ಅಥವಾ ಆರತಕ್ಷತೆಗೆ ಆಗಮಿಸುತ್ತಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಧರ್ಮಸ್ಥಳದಲ್ಲಿ ಜನವರಿ 23ರಂದು ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರ ವಿವಾಹ ಮಹೋತ್ಸವ ಸರಳವಾಗಿ ನಡೆಯಲಿದ್ದು, ಮದುವೆಯ ನಂತರ ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಆಯೋಜಿಸಲಾಗುತ್ತಿದೆ. ಈ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಆಪ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಪ್ತ ಮೂಲಗಳು ತಿಳಿಸಿವೆ.





