ಟಾಕ್ಸಿಕ್..ಟಾಕ್ಸಿಕ್..ಟಾಕ್ಸಿಕ್..ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ರಿಲೀಸ್ ಆದಾಗಿನಿಂದ ವಿಶ್ವ ಸಿನಿದುನಿಯಾ ಜಪಿಸ್ತಿರೋ ಒಂದೇ ಒಂದು ಹೆಸರು. ಅದಕ್ಕೆ ಕಾರಣ ಹಾಲಿವುಡ್ ಮಂದಿ ಕೂಡ ನಿಬ್ಬೆರಗಾಗುವಂತಹ ಮೇಕಿಂಗ್, ಕಂಟೆಂಟ್ ಹಾಗೂ ರಾಕಿಭಾಯ್ ಸ್ವ್ಯಾಗ್. ಈ ಟೀಸರ್‌ಗೆ ಜಸ್ಟ್ 24 ಗಂಟೆಯಲ್ಲಿ ಬರೋಬ್ಬರಿ 20 ಕೋಟಿಗೂ ಅಧಿಕ ರೆಕಾರ್ಡ್ ಬ್ರೇಕಿಂಗ್ ವೀವ್ಸ್ ಆಗಿದೆ. ಇದು ಮತ್ತೊಂದು ಮೈಲಿಗಲ್ಲು.
ಇದು ನಿನ್ನೆಯಷ್ಟೇ ರಿಲೀಸ್ ಆದ ಟಾಕ್ಸಿಕ್ ಚಿತ್ರದ ಹೈ-ವೋಲ್ಟೇಜ್ ಟೀಸರ್ ಝಲಕ್. ನಾಯಕನಟ ರಾಕಿಂಗ್ ಸ್ಟಾರ್ ಯಶ್ ಪಾತ್ರ ರಾಯನನ್ನ ಇಂಟ್ರಡ್ಯೂಸ್ ಮಾಡುವ ಟೀಸರ್. ರಾಕಿಭಾಯ್ ಯಶ್ ಬರ್ತ್ ಡೇ ಹಿನ್ನೆಲೆ ರಿಲೀಸ್ ಆದ ಈ ದೃಶ್ಯಗುಚ್ಚ ಕನ್ನಡದಿಂದಲೇ ತಯಾರಾದ ಹಾಲಿವುಡ್ ಸ್ಟ್ಯಾಂಡರ್ಡ್‌ನ ಗ್ಲೋಬಲ್ ಮೂವಿಯ ತುಣುಕು. ಯೆಸ್.. ಪ್ರಣಯ ಹಾಗೂ ಪ್ರಳಯಗಳನ್ನ ಬ್ಲೆಂಡ್ ಮಾಡಿರೋ ಟಾಕ್ಸಿಕ್ ಟೀಸರ್‌ಗೆ ವರ್ಲ್ಡ್ ಸಿನಿದುನಿಯಾ ಅಕ್ಷರಶಃ ದಂಗಾಗಿದೆ. ಅದಕ್ಕೆ ಟಾಕ್ಸಿಕ್ ಟೀಸರ್ ವೀವ್ಸ್ ದಾಖಲೆಯೇ ಪ್ರತ್ಯಕ್ಷ ಸಾಕ್ಷಿ.

24 ಗಂಟೆಯಲ್ಲಿ ಟಾಕ್ಸಿಕ್ ಟೀಸರ್‌ಗೆ 20+ ಕೋಟಿ ವೀವ್ಸ್
ಇದು ಭಾರತೀಯ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ
ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಕಥೆ ಬರೆದು, ಲೀಡ್‌ನಲ್ಲಿ ನಟಿಸಿ, ಕೆವಿಎನ್ ಜೊತೆ ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ಚಿತ್ರದ ರಾಯ ಟೀಸರ್ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 20 ಕೋಟಿಗೂ ಅಧಿಕ ವೀವ್ಸ್ ಪಡೆದಿದೆ. 200 ಮಿಲಿಯನ್ ರೆಕಾರ್ಡ್ ಬ್ರೇಕಿಂಗ್ ವೀವ್ಸ್‌ನಿಂದ ಇಂಡಿಯನ್ ಸಿನಿದುನಿಯಾದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಇನ್ ಫ್ಯಾಕ್ಟ್ ವರ್ಲ್ಡ್‌ನಲ್ಲೇ ಟೀಸರ್‌ಗೆ ಒಂದೇ ದಿನದಲ್ಲಿ ಇಷ್ಟು ವೀವ್ಸ್ ಆದಂತಹ ನಿದರ್ಶನವೇ ಇರಲಿಲ್ಲ. ಅದೀಗ ರಾಕಿಭಾಯ್ ಪಾಲಾಗಿದೆ. ಈ ಮೂಲಕ ಕೂಡ ಯಶ್ ರೆಕಾರ್ಡ್ ಕಾ ಬಾಪ್ ಅನಿಸಿಕೊಂಡಿದ್ದಾರೆ.

ಅಂದಹಾಗೆ ಈ 20 ಕೋಟಿ ವೀವ್ಸ್ ಯೂಟ್ಯೂಬ್, ಫೇಸ್‌ಬುಕ್, ಇನ್ಸ್‌ಟಾ ಎಲ್ಲಾ ಸೇರಿ ಆಗಿರೋದು ಅನ್ನೋದು ವಿಶೇಷ. ಡ್ಯಾಡ್ ಈಸ್ ಹೋಮ್ ಅನ್ನೋ ಡೈಲಾಗ್‌ನಿಂದ ಹಾಲಿವುಡ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ ಯಶ್. ಸ್ಮಶಾನದಲ್ಲಿ ಪ್ರಳಯ, ಕಾರ್‌ನಲ್ಲಿ ಪ್ರಣಯ, ಸಿಕ್ಕಾಪಟ್ಟೆ ವಯಲೆನ್ಸ್‌ನಿಂದ ರಾಕಿ ಈಸ್ ಬ್ಯಾಕ್ ಎಂದಿದ್ದಾರೆ. ವರ್ಲ್ಡ್ ಈಸ್ ಮೈ ಟೆರಿಟರಿ ಎಂದಿದ್ದ ಯಶ್, ಇದೀಗ ಟಾಕ್ಸಿಕ್‌ನಿಂದ ಹಾಲಿವುಡ್‌ಗೂ ನಾನೇ ಡ್ಯಾಡ್ ಅನ್ನೋದನ್ನ ಸಾರಿದ್ದಾರೆ. ಯಾಕಂದ್ರೆ ಟೀಸರ್‌ನ ಒಂದೊಂದು ಶಾಟ್ ಕೂಡ ಚಿತ್ರಪ್ರೇಮಿಗಳನ್ನ ರೋಮಾಂಚನಗೊಳಿಸಿವೆ.
ಹಾಲಿವುಡ್‌ಗೆ ಮಾಸ್ಟರ್‌ಸ್ಟ್ರೋಕ್.. ಎಲ್ರಿಗೂ ಡ್ಯಾಡ್ ಯಶ್
ಆಲಿಯಾ, ರಾಮಾಯಣ ನಮಿತ್ ಕೂಡ ಕ್ಲೀನ್ ಬೋಲ್ಡ್..!

ಸ್ಪೆಷಲ್ ಎಫೆಕ್ಟ್ಸ್, ಸಿಜಿ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಎಲಿವೇಷನ್ಸ್ ಇಲ್ಲಿಯವರೆಗೂ ಯಾರೂ ಮಾಡಿರದ ರೇಂಜ್‌ಗಿದೆ. ಅದರಲ್ಲೂ ಯಶ್ ಸ್ವ್ಯಾಗ್ ಮಾತ್ರ ನೆಕ್ಸ್ಟ್ ಲೆವೆಲ್. ಹೌದು.. ಕೆಜಿಎಫ್ ರಾಕಿಭಾಯ್ ಖದರ್‌ಗೇನೇ ಫಿದಾ ಆಗಿದ್ದ ಬಾಲಿವುಡ್, ಇದೀಗ ಟಾಕ್ಸಿಕ್ ನೋಡಿ ಅಕ್ಷರಶಃ ಕ್ಲೀನ್ ಬೋಲ್ಡ್ ಆಗಿಬಿಟ್ಟಿದೆ. ರಾಮ್ ಗೋಪಾಲ್ ವರ್ಮಾ, ಸಂದೀಫ್ ರೆಡ್ಡಿ ವಂಗಾ ಅಂತಹ ಕಲ್ಟ್ ಡೈರೆಕ್ಟರ್‌ಗಳೇ ಟಾಕ್ಸಿಕ್ ಟೀಸರ್‌ನ ಕೊಂಡಾಡಿದ್ದಾರೆ. ಯಶ್‌ಗೆ ಭೇಷ್ ಅಂದಿದ್ದಾರೆ.

ಆಲಿಯಾ ಭಟ್ ಕೂಡ ಡೈನಾಮೈಟ್ ಅಂತ ಇನ್ಸ್‌ಟಾ ಸ್ಟೋರಿ ಹಾಕಿಕೊಂಡಿದ್ರು. ಅಷ್ಟೇ ಯಾಕೆ, ರಾಕಿಂಗ್ ಸ್ಟಾರ್ ಯಶ್ ಜೊತೆ ರಾಮಾಯಣ ಸಿನಿಮಾ ಮಾಡ್ತಿರೋ ನಮಿತ್ ಮಲ್ಹೋತ್ರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋಸ್ಟ್ ರಾಕಿಂಗ್ ಸ್ಟಾರ್ ಆಫ್ ದಿ ವರ್ಲ್ಡ್ ಅಂದಿರೋ ನಮಿತ್, ಅಂಡರ್ ಡಾಗ್ ಟು ದಿ ಫೈನೆಸ್ಟ್ ಟ್ಯಾಲೆಂಟ್ ಅಂತ ಯಶ್ ಅಗಾಧವಾದ ಪ್ರತಿಭೆ ಕುರಿತು ತಮ್ಮದೇ ವ್ಯಾಖ್ಯಾನದಲ್ಲಿ ಕೊಂಡಾಡಿದ್ದಾರೆ.
ಒಟ್ಟಾರೆ ಟಾಕ್ಸಿಕ್ ಸಿನಿಮಾ ಇದೇ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಧುರಂಧರ್-2 ಎದುರು ಟಾಕ್ಸಿಕ್ ಠುಸ್ ಆಗುತ್ತೆ ಅಂತಿದ್ದವ್ರು, ಇದೀಗ ಟೀಸರ್ ಕಂಡು ನನ್ನ ಮೊದಲ ಆಯ್ಕೆ ಟಾಕ್ಸಿಕ್ ಫಿಕ್ಸ್ ಅಂತಿದ್ದಾರೆ.





