ದಿನದಿಂದ ದಿನಕ್ಕೆ ಸಂಚಲನ ಮೂಡಿಸ್ತಿದೆ ಯಶ್ ಟಾಕ್ಸಿಕ್. ಯೆಸ್.. ರಕ್ತದೊಂದಿಗೆ ಟಬ್‌ನಲ್ಲಿ ಕೂತಿದ್ದ ರಾಕಿಭಾಯ್ ಡೇರ್‌ಡೆವಿಲ್ ಲುಕ್ ನಿನ್ನೆ ರಿವೀಲ್ ಆಗಿತ್ತು. ಸಿನಿಮಾದ ರಿಲೀಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ, ಮಾರ್ಚ್ 19ಕ್ಕೆ ಕನ್ಫರ್ಮ್ ಎಂದಿತ್ತು ಟೀಂ. ಆದ್ರೀಗ ಟಾಕ್ಸಿಕ್ ಬಾಕ್ಸ್ ಆಫೀಸ್‌ಗೆ ಗುನ್ನಾ ಇಡೋಕೆ ಒಂದಲ್ಲ, ಎರಡಲ್ಲ ಐದೈದು ಪ್ಯಾನ್ ಇಂಡಿಯಾ ಚಿತ್ರಗಳು ಬರ್ತಿವೆ.
- ಟಾಕ್ಸಿಕ್‌ಗೆ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಡ್ಡು
- ಧುರಂಧರ್, ಡಕಾಯಿತ್, ಪೆದ್ದಿ, ಪ್ಯಾರಡೈಸ್, ಧಮಾಲ್
- ಯಶ್‌ಗೆ ಥಿಯೇಟರ್ ಜೊತೆ ಮೆಗಾ ಬಾಕ್ಸಾಫೀಸ್ ಕ್ಲ್ಯಾಶ್
- ಕೆಜಿಎಫ್-2 ರೀತಿ ಅಲ್ಲ ಟಾಕ್ಸಿಕ್.. ಹೇಗಿರಲಿದೆ ಕಂಟೆಂಟ್?
ಯಶ್.. ಇದು ಬರೀ ಹೆಸರಲ್ಲ. ಕನ್ನಡ ಸಿನಿಮಾನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿಸೋಕೆ ಅಂತಲೇ ಹುಟ್ಟಿಬಂದ ಹೆಮ್ಮೆಯ ಕನ್ನಡಿಗ ಅಂದ್ರೆ ತಪ್ಪಾಗಲ್ಲ. ಹೌದು.. ಕೆಜಿಎಫ್ ಸಿನಿಮಾಗಳಿಂದ ವಿಶ್ವ ಮಾರುಕಟ್ಟೆಯಲ್ಲಿ ಕನ್ನಡದ ಸಿನಿಮಾಗಳ ಮಹತ್ವ ಹೆಚ್ಚಿಸಿದ ಯಶ್, ಸಾವಿರ ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿ ತೋರಿಸಿದ್ರು. ಇದೀಗ ಹಾಲಿವುಡ್ ಶೈಲಿಯ ಸಿನಿಮಾ ಟಾಕ್ಸಿಕ್ ಮಾಡ್ತಿದ್ದು, ಅದ್ರ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ.
ಯೆಸ್.. ಗೋವಾ ಡ್ರಗ್ ಮಾಫಿಯಾ ಕುರಿತ ಕಥಾನಕದ ಚಿತ್ರ ಟಾಕ್ಸಿಕ್ ಆಗಿದ್ದು, ನ್ಯಾಷನಲ್ ಅವಾರ್ಡ್ ವಿನ್ನರ್ ಗೀತು ಮೋಹನ್‌ದಾಸ್ ನಿರ್ದೇಶನವಿದೆ. ಯಶ್ ಈ ಸಿನಿಮಾಗೆ ಕಥೆ ಬರೆದು, ಕೆವಿಎನ್ ಜೊತೆ ಸಹ ನಿರ್ಮಾಣ ಕೂಡ ಮಾಡ್ತಿರೋದು ವಿಶೇಷ. ಇತ್ತೀಚೆಗೆ ಶರ್ಟ್ ಲೆಸ್ ಅಗಿ ರಕ್ತದ ಟಬ್‌ನಲ್ಲಿ ಕೂತಿರೋ ಯಶ್ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿತ್ತು. ಆ ಮೂಲಕ ಚಿತ್ರದ ಮೇಲಿನ ಭರವಸೆ, ನಿರೀಕ್ಷೆ ಡಬಲ್ ಆಗಿದೆ.
2026ರ ಮಾರ್ಚ್ 19ಕ್ಕೆ ಟಾಕ್ಸಿಕ್ ತೆರೆಗೆ ಬರೋದು ಖಚಿತ. ಆದ್ರೆ ಕೆಜಿಎಫ್-2 ಬಂದಾಗ ಇದ್ದ ಆ ಪರಿಸ್ಥಿತಿ ಈಗ ಇಲ್ಲ. ಹೌದು.. ಆಗ ಯಶ್ ಎದುರು ಸಿನಿಮಾನ ರಿಲೀಸ್ ಮಾಡೋಕೆ ಎಲ್ಲರೂ ಹೆದರುತ್ತಿದ್ದರು. ಇದೀಗ ಟಾಕ್ಸಿಕ್ ಜೊತೆ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಇದು ಒಂಥರಾ ನಿರ್ಮಾಪಕರಿಗೆ ಬಹುದೊಡ್ಡ ಸವಾಲಾಗಲಿದೆ.
ಇತ್ತೀಚೆಗೆ ತೆರೆಕಂಡು ಫಾಸ್ಟೆಸ್ಟ್ ಹಂಡ್ರೆಡ್ ಕ್ರೋರ್ ಕ್ಲಬ್ ಸೇರಿದ ರಣ್‌ವೀರ್ ಸಿಂಗ್ ನಟನೆಯ ಪೇಟ್ರಿಯಾಟಿಕ್ ಮೂವಿ ಧುರಂಧರ್ ಚಿತ್ರದ ಸೀಕ್ವೆಲ್ ಮಾರ್ಚ್ 19ಕ್ಕೆ ತೆರೆಗೆ ಬರೋದಾಗಿ ಅನೌನ್ಸ್ ಆಗಿದೆ. ಅಜಯ್ ದೇವಗನ್ ನಟನೆಯ ಬಾಲಿವುಡ್‌ನ ಮಲ್ಟಿಸ್ಟಾರ್ ಮೂವಿ ಧಮಾಲ್-4 ಕೂಡ ಟಾಕ್ಸಿಕ್ ರಿಲೀಸ್ ಆದ ಮರು ದಿನವೇ ಬರ್ತಿದೆ.
ಅಡವಿ ಶೇಷು ನಟಿಸ್ತಿರೋ ಡಕಾಯಿತ್ ಅನ್ನೋ ಸ್ಪೈ ಥ್ರಿಲ್ಲರ್ ಮೂವಿ ಕೂಡ ಟಾಕ್ಸಿಕ್ ಎದುರು ಪಂಚಭಾಷೆಯಲ್ಲಿ ಮಾರ್ಚ್ 19ಕ್ಕೆ ತೆರೆಗಪ್ಪಳಿಸುತ್ತಿದೆ. ಇವುಗಳ ಜೊತೆ ಜೊತೆಗೆ ಅದೇ ಮಾರ್ಚ್ 27ರಂದು ರಾಮ್ ಚರಣ್ ತೇಜಾ ಅಭಿನಯದ ಪೆದ್ದಿ ಹಾಗೂ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾರಡೈಸ್ ಮೂವಿಗಳು ಬಿಡುಗಡೆ ಆಗ್ತಿವೆ. ಇದ್ರಿಂದ ಥಿಯೇಟರ್ ಜೊತೆ ಬಾಕ್ಸ್ ಆಫೀಸ್‌ಗೂ ಬಹುದೊಡ್ಡ ಹೊಡೆತ ಬೀಳಲಿದೆ.
ಟಾಕ್ಸಿಕ್‌ನಲ್ಲಿ ಪ್ಯಾನ್ ಇಂಡಿಯಾ ಆರ್ಟಿಸ್ಟ್‌ಗಳು, ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್, ಯಶ್ ಸ್ವ್ಯಾಗ್ ಎಲ್ಲವೂ ಇರಬಹುದು. ಆದ್ರೆ ಉಳಿದ ಸಿನಿಮಾಗಳು ಕೂಡ ಸಖತ್ ಪ್ರಾಮಿಸಿಂಗ್ ಕಂಟೆಂಟ್ ಜೊತೆ ಬರ್ತಿವೆ. ಹೀಗಾಗಿ ಟಾಕ್ಸಿಕ್ ಪೋಸ್ಟ್‌ಪೋನ್ ಮಾಡಿಕೊಳ್ಳುತ್ತಾ ಅಥ್ವಾ ಅವರುಗಳೊಂದಿಗೆ ಬರುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





