ಟಾಕ್ಸಿಕ್ v/s ಧುರಂಧರ್-2 ಮಾರ್ಚ್ 19ಕ್ಕೆ ಬಿಗ್ ಕ್ಲ್ಯಾಶ್..!!

Untitled design 2026 02 24T162704.954

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಟಾಕ್ಸಿಕ್-ಧುರಂಧರ್ ಒಂದೇ ದಿನ ತೆರೆಗಪ್ಪಳಿಸುತ್ತಿರೋದು ಈ ಜನರೇಷನ್‌ನ ಬಿಗ್ಗೆಸ್ಟ್ ಕ್ಲ್ಯಾಶ್ ಎನ್ನಲಾಗ್ತಿದೆ. ಒಂದ್ಕಡೆ ಥಿಯೇಟರ್.. ಮತ್ತೊಂದ್ಕಡೆ ಬಾಕ್ಸ್ ಆಫೀಸ್.. ಎರಡಕ್ಕೂ ಬುಹದೊಡ್ಡ ಹೊಡೆತ ಬೀಳಲಿದೆ ಅಂತ ಅಂದಾಜಿಸಲಾಗಿದೆ. ಕನಿಷ್ಟ 10 ಕೋಟಿ ಭಾರತೀಯರು ಈ ಸಿನಿಮಾಗಳನ್ನ ನೋಡಲಿದ್ದಾರೆ ಅನ್ನಲಾಗಿದ್ದು ಸರಾಸರಿ ಬಲಾಬಲಗಳ ಒಳನೋಟ ಇಲ್ಲಿದೆ ನೋಡಿ.

ಟಾಕ್ಸಿಕ್ v/s ಧುರಂಧರ್-2 ಮಾರ್ಚ್ 19ಕ್ಕೆ ಬಿಗ್ ಕ್ಲ್ಯಾಶ್..!!

ವರ್ಲ್ಡ್‌ವೈಡ್ 6000 ಸ್ಕ್ರೀನ್ಸ್ ಟಾರ್ಗೆಟ್.. ಟಾಕ್ಸಿಕ್‌ ಮೇಲುಗೈ

ಮಾರ್ಚ್ 19ರಂದು ಭಾರತೀಯ ಸಿನಿರಂಗ ಅತಿದೊಡ್ಡ ಯುದ್ಧಕ್ಕೆ ಸಾಕ್ಷಿಯಾಗಲಿದೆ. ಒಂದ್ಕಡೆ ಯಶ್ ಅಭಿನಯದ ಟಾಕ್ಸಿಕ್, ಮತ್ತೊಂದು ಕಡೆ ಚಾಪ್ಟರ್ 1 ಹಿಟ್‌ನ ಹೈಪ್ ಹೊತ್ತ ‘ಧುರಂಧರ್ 2’  ಈ ಎರಡು ಬಿಗ್ ಬಜೆಟ್ ಸಿನಿಮಾಗಳು ಮುಖಾಮುಖಿಯಾಗಲಿವೆ. ಈಗಾಗಲೇ ಸ್ಕ್ರೀನ್ ಹಂಚಿಕೆ ವಿಚಾರದಲ್ಲಿ ಟಾಕ್ಸಿಕ್ ಮೇಲುಗೈ ಸಾಧಿಸಿದೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಚರ್ಚೆ ಹುಟ್ಟಿಸಿದೆ. ಯಾವ ಸಿನಿಮಾ ಮೇಲುಗೈ ಸಾಧಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಈ ಪೈಪೋಟಿಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ‘ಧುರಂಧರ್ 2’ಗಿಂತ ಸುಮಾರು 1200 ಹೆಚ್ಚುವರಿ ಸ್ಕ್ರೀನ್ ಗಳು ದೊರೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಧುರಂಧರ್ ಚಾಪ್ಟರ್  ಯಶಸ್ಸಿನ ಕಾರಣದಿಂದ ‘ಧುರಂಧರ್ 2’ಗೆ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಇನ್ನು ಯಶ್ ಅಭಿನಯದ ‘ಟಾಕ್ಸಿಕ್’ ಬಗ್ಗೆ ಉತ್ಸಾಹ ಹೆಚ್ಚಲು ಕಾರಣ, ನಾಲ್ಕು ವರ್ಷಗಳ ನಂತರ ಬಿಗ್ ಸ್ಕ್ರೀನ್ ಮೇಲೆ ಬರ್ತಿದ್ದಾರೆ. ಕೆಜಿಎಫ್ ನಂತರ ಯಶ್ ಕ್ರೇಜ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ಉತ್ತರದಿಂದ ದಕ್ಷಿಣವರೆಗೂ ಟಾಕ್ಸಿಕ್ ಚಿತ್ರದ ಬೇಡಿಕೆ ಜೋರಾಗಿದೆ. ಸದ್ಯ ಎರಡು ಸಿನಿಮಾಗಳ ನಡುವಿನ ಕಾಳಗ ಭಾರತೀಯ ಚಿತ್ರರಂಗದಲ್ಲಿ ಅತಿ ದೊಡ್ಡ ಕಲಶ ಎಂದು ಬಣ್ಣಿಸಲಾಗಿದೆ.

ಸ್ಕ್ರೀನ್ ಹಂಚಿಕೆಯಲ್ಲಿ ಟ್ವಿಸ್ಟ್.. ಬಾಲಿವುಡ್‌ಗೆ ಬಡಾ ಶಾಕ್..!

ಸ್ಕ್ರೀನ್ ಕೌಂಟ್‌ನಲ್ಲಿ ಹಿಂದುಳಿದ ರಣ್‌ವೀರ್ ಧುರಂಧರ್-2

ಸದ್ಯ ಲಭ್ಯವಾಗುತ್ತಿರುವ ವರದಿಗಳ ಪ್ರಕಾರ ‘ಟಾಕ್ಸಿಕ್’ಗೆ ವಿಶ್ವದಾದ್ಯಂತ 5,000ರಿಂದ 6,000 ಪರದೆಗಳು ಸಿಗುವ ಸಾಧ್ಯತೆ ಇದ್ದು, ಧುರಂಧರ್ 2ಗೆ ಸುಮಾರು 4,300 ಸ್ಕ್ರೀನ್ಸ್ ಸಿಗಬಹುದು ಎನ್ನಲಾಗ್ತಿದೆ. ಕರ್ನಾಟಕದಲ್ಲಿ ಟಾಕ್ಸಿಕ್ ಗೆ ಹೆಚ್ಚು ಬೇಡಿಕೆ ಇದೆ ಸುಮಾರು 485 ರಿಂದ 530 ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್ ಆಗಬಹುದು ಎಂಬ ನಿರೀಕ್ಷೆ ಇದ್ದು ಧುರಂಧರ್ 2 ಗೆ ಸ್ಕ್ರೀನ್ಸ್ ಕಡಿಮೆ ಸಿಗಲಿದೆ.

ಈ ಹಿನ್ನೆಲೆ ಯಶ್ ಟಾಕ್ಸಿಕ್ ಚಿತ್ರಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸೂಚನೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಒಟ್ಟಾರೆ, ಇದು ಸಾಮಾನ್ಯ ಕ್ಲ್ಯಾಶ್ ಅಲ್ಲ. ಪಕ್ಕಾ ಮೆಗಾ ಕಾಳಗ. ಸ್ಕ್ರೀನ್ ಕೌಂಟ್, ಫ್ಯಾನ್ ಫಾಲೋಯಿಂಗ್, ಓಪನಿಂಗ್ ಕಲೆಕ್ಷನ್ ಎಲ್ಲದರಲ್ಲೂ ಟಾಕ್ಸಿಕ್ ಮುನ್ನಡೆಯ ಸೂಚನೆ ಕಾಣಿಸುತ್ತಿದೆ. ಆದರೆ ಅಂತಿಮ ತೀರ್ಪು ಪ್ರೇಕ್ಷಕರದ್ದೇ. ಮಾರ್ಚ್ 19ರಂದು ಯಾರು ಬಾಕ್ಸ್‌ಆಫೀಸ್ ಸಿಂಹಾಸನ ಏರಲಿದ್ದಾರೆ ಕಾದು ನೋಡಬೇಕಿದೆ

 

Exit mobile version