ಟಾಕ್ಸಿಕ್ ಮುಂದೆ ಧುರಂಧರ್-2 ಧೂಳಿಪಟ ಆಗೋದು ಗ್ಯಾರಂಟಿ. ಅದಕ್ಕೆ ಟಾಕ್ಸಿಕ್ ನಯಾ ಟೀಸರ್ ಪ್ರತ್ಯಕ್ಷ ಸಾಕ್ಷಿ. ಭಯಂಕರ ಹಾಗೂ ಭೀಭತ್ಸವಾಗಿರೋ ಡೆಡ್ಲಿ & ಡೇರಿಂಗ್ ಟೀಸರ್‌ನಲ್ಲಿ ರಕ್ತದೋಕುಳಿ ಜೋರಿದೆ. ಅಷ್ಟೇ ಅಲ್ಲ, ರಾಕಿಂಗ್ ಸ್ಟಾರ್ ಯಶ್ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದ್ರ ಹಿಂಟ್ ಸಿಕ್ಕಿದೆ. ರಾಯ ಅಂಡ್ ಸನ್ಸ್ ಬ್ಲಡ್ ವಾರ್ ಹೇಗಿದೆ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.
ಅಂದುಕೊಂಡಂತೆ ಅಲ್ಲ ನಮ್ಮ ರಾಕಿಂಗ್ ಸ್ಟಾರ್ ಯಶ್. ಊಹೆಗೂ ನಿಲುಕದ ವ್ಯಕ್ತಿ ಹಾಗೂ ವ್ಯಕ್ತಿತ್ವ. ಮಿಗಿಲಾಗಿ ನಮ್ಮ ಕನ್ನಡ ಚಿತ್ರರಂಗದ ಶಕ್ತಿ. ಅದಕ್ಕೆ ಕಾರಣ ಸದ್ಯ ರಿಲೀಸ್ ಆಗಿರೋ ಈ ಲೇಟೆಸ್ಟ್ ಟಾಕ್ಸಿಕ್ ಹೈ ವೋಲ್ಟೇಜ್ ಟೀಸರ್ ಝಲಕ್. ಹೌದು.. ಮಾರ್ಚ್ 19ಕ್ಕೆ ವರ್ಲ್ಡ್ ಬಾಕ್ಸ್ ಆಫೀಸ್‌ನ ಶೇಕ್ ಮಾಡೋಕೆ ಬರ್ತಿರೋ ರಾಯನ ಪ್ರಪಂಚದ ಒಂದು ಕಿರುನೋಟವಿದು.
ಯಶ್ ತ್ರಿಬಲ್ ರೋಲ್ ರಿವೀಲ್..ರಾಯ & ಸನ್ಸ್ ರಾಕಿಂಗ್
ಭಯಂಕರ, ಭೀಭತ್ಸ ‘ಟಾಕ್ಸಿಕ್’ ಡೆಡ್ಲಿ & ಡ್ಯಾಶಿಂಗ್ ಟೀಸರ್..!
ಭಯಂಕರ ಹಾಗೂ ಭೀಭತ್ಸವಾಗಿದೆ ಟಾಕ್ಸಿಕ್ ಡೆಡ್ಲಿ & ಡ್ಯಾಶಿಂಗ್ ಟೀಸರ್. ಯಾಕಂದ್ರೆ ಇದು ಬರೀ ಗ್ಯಾಂಗ್‌ಸ್ಟರ್ ವಾರ್ ಮೂವಿ ಅಲ್ಲ. ಬ್ಲಡ್ ವಾರ್..ಅದೂ ಇಂಟರ್‌ನ್ಯಾಷನಲ್ ಗ್ಯಾಂಗ್‌ಸ್ಟರ್‌ಗಳ ಬ್ಲಡಿ ವಾರ್. ಇಲ್ಲಿಯವರೆಗೆ ಯಶ್ ಡಬಲ್ ರೋಲ್‌ನಲ್ಲಿ ಧಮಾಕ ಮಾಡೋಕೆ ಬರ್ತಾರೆ ಅಂದುಕೊಂಡಿದ್ರು ಚಿತ್ರಪ್ರೇಮಿಗಳು. ಆದ್ರೀಗ ಅವ್ರ ಊಹೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಯಾಕಂದ್ರೆ ಯಶ್ ಡಬಲ್ ರೋಲ್‌ನಲ್ಲಿ ಮಾತ್ರವಲ್ಲ ತ್ರಿಬಲ್ ರೋಲ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಒಂದ್ಕಡೆ ರಾಯ. ಮತ್ತೊಂದ್ಕಡೆ ಲಾಂಗ್ ಹೇರ್ ಬಿಟ್ಕೊಂಡು, ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿರೋ ವ್ಯಕ್ತಿ, ಮಗದೊಂದು ಕಡೆ ಹೊಸ ಟೀಸರ್‌ನ ಕ್ಲೈಮ್ಯಾಕ್ಸ್‌ನಲ್ಲಿ ಬರೋ ಯಂಗೆಸ್ಟ್ ಯಶ್. ಹೀಗೆ ಒಂದಲ್ಲ ಎರಡಲ್ಲ ಮೂರು ಮೂರು ರೋಲ್‌ಗಳಲ್ಲಿ ಕಿಲ್ಲಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ರಾಕಿಭಾಯ್.
1940-1970 ಗೋವಾ ಇಂಟರ್‌ನ್ಯಾಷನಲ್ ಗ್ಯಾಂಗ್‌ಸ್ಟರ್ ಕಥೆ
ಟಾಕ್ಸಿಕ್ ಅಬ್ಬರಕ್ಕೆ ಬಿಟೌನ್ ಧುರಂಧರ್-2 ಧೂಳಿಪಟ ಗ್ಯಾರಂಟಿ
1940ರಿಂದ 1970ರ ಕಾಲಘಟ್ಟದಲ್ಲಿ ಗೋವಾದಲ್ಲಿ ನಡೆಯೋ ಗ್ಯಾಂಗ್‌ಸ್ಟರ್ ವಾರ್ ಇದಾಗಿದ್ದು, ಪೋರ್ಚುಗಲ್ ಡಾನ್‌ಗಳು ಹಾಗೂ ನಮ್ಮ ಇಂಡಿಯಾದ ಗ್ಯಾಂಗ್‌ಸ್ಟರ್ ಕಾಳಗ ಎನ್ನಲಾಗ್ತಿದೆ. ಈ ಸಲ ಯುದ್ಧನೇ ಬೇರೆ. ಅವರುಗಳ ಕುತಂತ್ರನೇ ಬೇರೆ. ಎಲ್ಲರನ್ನೂ ಎದುರು ಹಾಕಿಕೊಂಡು ಬದುಕೋಕೆ ಆಗಲ್ಲ. ಹಠ ಬಿಟ್ಬಿಡು. ಗೀವ್ ಅಪ್ ರಾಯ ಅನ್ನೋ ಡೈಲಾಗ್. ಅದಕ್ಕೆ ‘ಇಟ್ಸ್ ಓವರ್.. ನಾನು ಹೇಳಿದ್ರೆ ಇಟ್ಸ್ ಓವರ್’ ಅಂತ ಕೌಂಟರ್ ಡೈಲಾಗ್ ಹೊಡೆಯೋ ರಾಯ.
ಪೋರ್ಟ್ ಏರಿಯಾ, ದೊಡ್ಡ ದೊಡ್ಡ ಬೋಟ್, ರಾಯಲ್ ಸರ್ಕಸ್, ಜೋಕರ್ ಲುಕ್ಸ್, ಚಾಪರ್‌ಗಳು, ಬ್ಲಾಸ್ಟ್‌ಗಳು.. ಮೈಂಡ್ ಬ್ಲೋಯಿಂಗ್ ಮೇಕಿಂಗ್. ಅಲ್ಲಿಯವರೆಗೆ ಮ್ಯಾನರ್ಸ್ ಇಟ್ಕೋ ಅಂತ ನಾಯಕನಟ ಕೊಡೋ ಚಮಕ್ ನೋಡೋಕೆ ಎರಡು ಕಣ್ಣುಗಳು ಸಾಲದಂತಿವೆ. ಯಶ್ ತುಂಬಾ ರಾ ಅಂಡ್ ರಸ್ಟಿಕ್ ಆಗಿ ಕಾಣ್ತಿದ್ದು, ಸಿಕ್ಕಾಪಟ್ಟೆ ಕಲ್ಟ್ ರೋಲ್ ಮಾಡಿದಂತಿದೆ. ಕೆಜಿಎಫ್‌ಗಿಂತ ಈ ಚಿತ್ರದಲ್ಲಿ ತರಹೇವಾರಿ ಸ್ಟೈಲು, ಮ್ಯಾನರಿಸಂ ಇದ್ದು, ವೆರಿ ವೆರಿ ಇಂಟೆನ್ಸ್ ಆ್ಯಕ್ಟರ್ ಯಶ್ ಅವ್ರಲ್ಲಿ ಕಾಣ್ತಿದ್ದಾರೆ.
ಇಂಡಿಯಾದ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿರೋ ಈ ಟೀಸರ್, ಮತ್ತೊಂದು ಇಂಗ್ಲಿಷ್‌ನಲ್ಲೂ ಮಿಂಚಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಯಶ್ ಕತೆ ಬರೆದು ನಟಿಸೋದ್ರ ಜೊತೆಗೆ ಸಹ ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ವೈಬ್ರೆಂಟ್ ಇರೋ ರೀತಿ ಈ ಟೀಸರ್‌ನ ಕ್ಲೈಮ್ಯಾಕ್ಸ್ ನಿಜಕ್ಕೂ ಸರ್‌ಪ್ರೈಸಿಂಗ್ ಆಗಿದೆ.
ಕ್ಲೀನ್ ಶೇವ್‌ನಲ್ಲಿ ರಾಯನ ಮಗನಾಗಿ ಯಂಗೆಸ್ಟ್ ಲುಕ್
ಅನಿಮಲ್, ಮಾರ್ಕೋ ನೆನಪಿಸಿದ ಟೀಸರ್ ಕ್ಲೈಮ್ಯಾಕ್ಸ್..!
ಕ್ಲೀನ್ ಶೇವ್‌ನಲ್ಲಿ ಶಾರ್ಟ್ ಹೇರ್‌ನಲ್ಲಿ ಯಂಗೆಸ್ಟ್ ರಾಯನಾಗಿ ಯಶ್ ಲುಕ್ ಸಖತ್ ಕಿಕ್ ಕೊಡ್ತಿದೆ. ಅದ್ರಲ್ಲೂ ಬೇರ್ ಬಾಡಿಯಲ್ಲಿ ನೀರಲ್ಲಿ ಏರಿಯಲ್ ಶಾಟ್ ಕಣ್ಣಿಗೆ ಹಬ್ಬ. ಎರಡು ಕಿವಿಗೆ ಎರಡು ಬೆಂಡೋಲೆ ಹಾಕಿಕೊಂಡು, ಕತ್ತಿ ಹಿಡಿದು, ರಕ್ತದ ಕೋಡಿ ಹರಿಸೋ ರಾಯನ ಮಗನಾಗಿ ಮಿಂಚು ಹರಿಸಿದ್ದಾರೆ ಯಶ್. ಇನ್‌ಫ್ಯಾಕ್ಟ್ ಇದಕ್ಕೆ ಮಲಯಾಳಂನ ಉನ್ನಿ ಮುಕುಂದನ್ ನಟನೆಯ ಮಾರ್ಕೋ ಹಾಗೂ ಅನಿಮಲ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಣ್‌ಬೀರ್ ಹೊಸ ಅವತಾರದಲ್ಲಿ ಕಾಣುವ ಲುಕ್‌ನ ಸಾಮಥ್ಯಯಿದೆ.
ಅದ್ರಲ್ಲೂ ಐ ಆ್ಯಮ್ ಹೋಮ್ ಡ್ಯಾಡಿ ಅನ್ನೋ ಯಶ್ ಡೈಲಾಗ್ ಟೀಸರ್‌ಗೆ ತಿಲಕವಿಟ್ಟಂತಿದೆ. ಅಂದಹಾಗೆ ರಣ್‌ವೀರ್ ಸಿಂಗ್ ಧುರಂಧರ್-2 ಎದುರು ಟಾಕ್ಸಿಕ್ ಬರ್ತಿರೋದು ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುನ್ನುಡಿ ಬರೆದಂತಿತ್ತು. ಆದ್ರೀಗ ಟಾಕ್ಸಿಕ್ ಟೀಸರ್ ನೋಡ್ತಿದ್ರೆ ಧುರಂಧರ್ ಸೀಕ್ವೆಲ್‌ನ ಧೂಳಿಪಟ ಮಾಡ್ತಾರೆ ಯಶ್. ಅದರಲ್ಲಿ ಯಾವುದೇ ಡೌಟ್ ಇಲ್ಲ. ಈ ತರಹದ ವರ್ಲ್ಡ್ ಕ್ಲಾಸ್ ಮಾಸ್ಟರ್‌ಪೀಸ್ ಕೊಟ್ಟ ಯಶ್ ಕನ್ನಡಿಗರನ್ನ ಮತ್ತೊಮ್ಮೆ ಕಾಲರ್ ಎತ್ತುವಂತೆ ಮಾಡಿದ್ದಾರೆ.