ಸ್ಯಾಂಡಲ್ ವುಡ್ ಗೆ ಯೋಗೇಶ್ವರ್ ಮಗ ಎಂಟ್ರಿ

Satish jarkiholi visits dhupdal falls as ghataprabha inflow rises (1)

ಹೀರೋ ಆಗ್ಬೇಕು ಅಂತ ಬಹುದೊಡ್ಡ ಕನಸು ಇಟ್ಕೊಂಡು ಬಂದ ಸಿ. ಪಿ. ಯೋಗೇಶ್ವರ್ ರಾಜಕಾರಣಿ ಆದ್ರು. ಆದ್ರೀಗ ತನ್ನ ಕನಸನ್ನ ಮಗನ ಮೂಲಕ ನನಸು ಮಾಡಿಕೊಳ್ತಿದ್ದಾರೆ ಸಿಪಿವೈ. ಯೆಸ್.. ಬರೋಬ್ಬರಿ 25 ವರ್ಷಗಳ ನಂತ್ರ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿರೋ ಸಿಪಿವೈ, ತನ್ನ ಮಗ ಧ್ಯಾನ್‌‌ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಒಂದಲ್ಲ ಎರಡೆರಡು ಚಿತ್ರಗಳ ಮುಹೂರ್ತ ಕಂಡಿದ್ದು, ಸಿಎಂ ಡಿಕೆಶಿ ಖುದ್ದು ಬಂದು ಶುಭ ಹಾರೈಸಿದ್ದು ಹೈಲೈಟ್.

ಸೈನಿಕ.. ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಮೂವಿ. ಚನ್ನಪಟ್ಟಣ ಶಾಸಕ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಲೀಡ್‌‌ನಲ್ಲಿ ನಟಿಸಿದ್ದ ದೇಶಪ್ರೇಮ ಸಾರುವ ಸಿನಿಮಾ. ಕಥೆ, ಪಾತ್ರಗಳು, ಸಾಂಗ್ಸ್‌, ಮೇಕಿಂಗ್‌‌ನಿಂದ ಸಿನಿಮಾ ಅದ್ಭುತ, ಅಮೋಘ ಅನಿಸಿತ್ತು. ಇದೀಗ ಅದು ತೆರೆಕಂಡು ಹೆಚ್ಚೂ ಕಡಿಮೆ 25 ವರ್ಷಗಳಾಗ್ತಿದೆ. ಇದೀಗ ಸೈನಿಕ-2 ಸೆಟ್ಟೇರಿದೆ. ಒನ್ಸ್ ಅಗೈನ್ ಸಿಪಿ ಯೋಗೇಶ್ವರ್ ಹೀರೋ ಆಗಿ ಕಂಬ್ಯಾಕ್ ಮಾಡ್ತಿದ್ದಾರೆ. ಅದೂ ಒಂದಲ್ಲ ಎರಡೆರಡು ಚಿತ್ರಗಳ ಮೂಲಕ ಅನ್ನೋದು ಇಂಟರೆಸ್ಟಿಂಗ್.

ಇಂಟರೆಸ್ಟಿಂಗ್ ಅಂದ್ರೆ ಸಿಪಿ ಯೋಗೇಶ್ವರ್ ಹೀರೋ ಆಗ್ಬೇಕು ಅಂತಲೇ ಬಂದವರು. ಆದ್ರೆ ವಿಧಿ ಅವ್ರನ್ನ ರಾಜಕಾರಣಿಯನ್ನಾಗಿಸಿತು. ಇದೀಗ ತಮ್ಮ ಕನಸನ್ನ ಮಗನ ಮೂಲಕ ನನಸು ಮಾಡ್ತಿದ್ದಾರೆ. ಯೆಸ್.. ಮಗ ಧ್ಯಾನ್ ಯೋಗೇಶ್ವರ್‌‌ನ ಕನ್ನಡ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡ್ತಿದ್ದಾರೆ. ಇನ್‌ಫ್ಯಾಕ್ಟ್ ಇಂದು ಪಂಚತಾರಾ ಹೋಟೆಲ್ ತಾಜ್ ವೆಸ್ಟೆಂಡ್‌‌ನಲ್ಲಿ ಮುಹೂರ್ತ ಕಂಡ ಕರ್ಣಾಟಬಲಂ ಹಾಗೂ ಸೈನಿಕ-2 ಎರಡೂ ಚಿತ್ರಗಳ ನಾಯಕನಟ ಧ್ಯಾನ್. ಮಗನಿಗಾಗಿ ತಾವೂ ಒಂದೊಂದು ಪಾತ್ರ ಮಾಡ್ತಿದ್ದಾರೆ ಸಿಪಿವೈ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರು ಬಂದು ಸಿಪಿ ಯೋಗೇಶ್ವರ್ ಹಾಗೂ ಮಗನ ಸಿನಿಮಾಗಳಿಗೆ ಕ್ಲಾಪ್ ಮಾಡಿ, ಕ್ಯಾಮೆರಾಗೆ ಚಾಲನೆ ನೀಡಿ ಶುಭಹಾರೈಸಿದ್ದು ವಿಶೇಷ. ಫಸ್ಟ್ ಲುಕ್ ಟೀಸರ್‌ಗಳು ಕೂಡ ರಿಲೀಸ್ ಆಗಿದ್ದು, ಒಂದಕ್ಕಿಂತ ಒಂದು ಪ್ರಾಮಿಸಿಂಗ್ ಅನಿಸಿವೆ. ಒನ್ಸ್ ಅಗೈನ್ ಸೈನಿಕ-2 ಪೇಟ್ರಿಯಾಟಿಕ್ ಮೂವಿ ಆಗಿ ಹೊರಹೊಮ್ಮುತ್ತಿದ್ದು, ಪುನೀತ್ ರುದ್ರನಾಗ ಇದಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಖ್ಯಾತಿಯ ನಾಗಣ್ಣ ಕರ್ಣಾಟಬಲಂ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮೊದಲು ಇದೇ ಸಿನಿಮಾ ತೆರೆಗೆ ಬರಲಿದೆಯಂತೆ. ಸೈನಿಕ-2 ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಅಂದಹಾಗೆ ಧ್ಯಾನ್ ಲಂಡನ್‌ಗೆ ತೆರಳಿ ಸಿನಿಮಾ ಕೋರ್ಸ್ ಮಾಡಿಕೊಂಡು ಬಂದಿದ್ದು, ಸಿನಿಮಾಗಾಗಿ ಎಲ್ಲಾ ರೀತಿಯ ತಯಾರಿ ನಡೆಸಿಯೇ ಬಂದಿರೋದು ಅಚ್ಚರಿ. ನೋಡೋಕೆ ಸುದೀಪ್, ದರ್ಶನ್ ಹೈಟ್‌ನ ಕೂಡ ಮೀರಿಸುವಂತಿರೋ ಧ್ಯಾನ್ 6.4 ಫೀಟ್ ಹೀರೋ. ಸಿಕ್ಸ್ ಪ್ಯಾಕ್‌‌ನಲ್ಲಿ ಪ್ರಾಮಿಸಿಂಗ್ ಆಗಿ ಕಾಣ್ತಿದ್ದು, ನಿರ್ದೇಶಕರು ಆತನನ್ನ ಹೇಗೆ ಮೌಲ್ಡ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಟಗರು, ಸಲಗ ಸಿನಿಮಾಗಳು ಖ್ಯಾತಿಯ ಕೆ ಪಿ ಶ್ರೀಕಾಂತ್ ಈ ಚಿತ್ರಗಳಿಗೆ ಕ್ರಿಯೇಟೀವ್ ಹೆಡ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸಿಪಿ ಯೋಗೇಶ್ವರ್ ಒಳ್ಳೆಯ ಟೀಮ್ಸ್‌‌ ಕೈಗೆ ತಮ್ಮ ಮಗನನ್ನ ಒಪ್ಪಿಸಿದ್ದಾರೆ. ವಿಶೇಷ ಅಂದ್ರೆ ತೆಲುಗಿನ ಜಗಪತಿ ಬಾಬು ಕೂಡ ಕರ್ಣಾಟಬಲಂ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ವೈಟ್ ಅಂಡ್ ವೈಟ್‌ನಲ್ಲಿ ಪೊಲಿಟಿಷಿಯನ್ ರೋಲ್‌ಗಾಗಿ ಪೊಲಿಟಿಷಿಯನ್ ನಂತೆ ಬಂದದ್ದು ಹೈಲೈಟ್.

ನಿರ್ಮಾಪಕಿ ಶೀಲಾ ಯೋಗೇಶ್ವರ್ ತಮ್ಮ ಪತಿಯ ಕಂಬ್ಯಾಕ್ ಹಾಗೂ ಮಗನ ಲಾಂಚ್ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ನಾನು ಥಿಯೇಟರ್ ಮಾಲೀಕಳಾದ್ದರಿಂದ ಸಿನಿಮಾ ಆಸಕ್ತಿ ಜಾಸ್ತಿನೇ ಇತ್ತು. ಅಣ್ಣಾವ್ರು ಸೇರಿದಂತೆ ಎಲ್ಲಾ ಹೀರೋಗಳು ಧ್ಯಾನ್‌‌ಗೆ ಇಷ್ಟ. ಸಿನಿಮಾಗೆ ಬೇಕಾದ ಕಸರತ್ತು ಮಾಡಿಕೊಂಡೇ ಬಂದಿದ್ದಾನೆ. ನಿಮ್ಮ ಆಶೀರ್ವಾದ ಅವನ ಮೇಲಿರಲಿ ಎಂದರು.

ಇನ್ನೂ ಸ್ಯಾಂಡಲ್‌ವುಡ್‌ನ ಹೊಚ್ಚ ಹೊಸ ಆರಡಿ ಕಟೌಟ್‌ಗೆ ಸೀಕಲ್ ರಾಮಚಂದ್ರಗೌಡ, ಉದಯ್ ಕೆ ಮೆಹ್ತಾ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರರಂಗದವರು ಶುಭ ಕೋರಿದರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version