ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ: ಆ-15ಕ್ಕೆ ಬೆಂಗಳೂರಲ್ಲಿ ಟ್ರೈಲರ್ ಲಾಂಚ್

Untitled design (74)

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್‌ಗೆ ಎರಡು ತಿಂಗಳು ಕೂಡ ಉಳಿದಿಲ್ಲ. ಚಿತ್ರತಂಡ ಒಂದೊಂದೇ ಕಂಟೆಂಟ್‌ನ ರಿವೀಲ್ ಮಾಡ್ತಿದ್ದು.. ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..? ಕನ್ನಡದಲ್ಲಿ ಮಾತಾಡ್ತಾರೆ ಅಂತ ಕನ್ನಡಿಗರು ಕಾತರದಿಂದ ಕಾಯ್ತಿದ್ದಾರೆ.

ಕನ್ನಡದ ಹಾಲಿವುಡ್ ಚಿತ್ರ ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ

ಆ-15ಕ್ಕೆ ಬೆಂಗಳೂರಲ್ಲಿ ಗ್ರ್ಯಾಂಡ್ ಟ್ರೈಲರ್ ಲಾಂಚ್ ಇವೆಂಟ್..!

ಕೊಟ್ಟ ಮಾತು ತಪ್ಪದ ಯಶ್.. ಎಲ್ಲರೂ ಬರ್ತಿದ್ದಾರೆ ಕರುನಾಡಿಗೆ

ಟಾಕ್ಸಿಕ್ ಟಾಕ್ಸಿಕ್ ಟಾಕ್ಸಿಕ್.. ಸದ್ಯ ವಿಶ್ವ ಸಿನಿ ದುನಿಯಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಯಾಗಿ ಟಾಕ್ಸಿಕ್ ರಾರಾಜಿಸ್ತಿದೆ. ಅದಕ್ಕೆ ಕಾರಣ ಯಶ್ ಟೀಸರ್‌ಗಳು ಹಾಗೂ ರೀಸೆಂಟ್ ರಿಲೀಸ್ ಆದ ಲೇಡಿಸ್ & ಲೇಡಿಸ್ ಲೇಟೆಸ್ಟ್ ಜಬರ್ದಸ್ತ್ ಟೀಸರ್. ಮಿಗಿಲಾಗಿ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರೋ ಕನ್ನಡದ ಹಾಲಿವುಡ್ ಸಿನಿಮಾ ಅನ್ನೋ ಹೆಗ್ಗಳಿಕೆ.

ಈ ಚಿತ್ರದ ರನ್ ಟೈಂ ಬರೋಬ್ಬರಿ 3 ಗಂಟೆ 15 ನಿಮಿಷ ಅನ್ನೋ ಸುದ್ದಿಯನ್ನ ನಾವೇ ನಿಮಗೆ ನೀಡಿದ್ವಿ. ಇದೀಗ ಸಿನಿಮಾ ಇದೇ ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಗ್ ಸ್ಕೇಲ್‌‌ನಲ್ಲಿ ತೆರೆಗಪ್ಪಳಿಸುತ್ತಿದ್ದು, ಬಿಡುಗಡೆಗೆ ಇನ್ನು ಎರಡು ತಿಂಗಳು ಕೂಡ ಉಳಿದಿಲ್ಲ. ಕನ್ನಡಿಗರಿಗೆ ಮಾತ್ರ ಯಶ್ ಯಾವಾಗ ಬೆಂಗಳೂರಿಗೆ ಬರ್ತಾರೆ..? ಕನ್ನಡದಲ್ಲಿ ಮಾತಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಆಗಸ್ಟ್ 15ಕ್ಕೆ ನಮ್ಮ ಬೆಂಗಳೂರಲ್ಲಿ ಗ್ರ್ಯಾಂಡ್ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ ಎನ್ನಲಾಗ್ತಿದೆ. ಸ್ಥಳ ಮತ್ತು ಸಮಯ ನಿಗದಿ ಆಗಬೇಕಿದ್ದು, ಅಧಿಕೃತವಾಗಿ ಚಿತ್ರತಂಡವೇ ಅನೌನ್ಸ್ ಮಾಡಲಿದೆಯಂತೆ.

ಹೌದು.. ಕೊಟ್ಟ ಮಾತು ತಪ್ಪದ ಯಶ್, ಆಗಸ್ಟ್ 15ಕ್ಕೆ ಬಾಲಿವುಡ್‌‌ನಿಂದ ಹಿಡಿದು ಹಾಲಿವುಡ್‌ ತನಕ ಎಲ್ಲರನ್ನೂ ನಮ್ಮೂರಿಗೇ ಕರೆಸುತ್ತಿದ್ದಾರೆ. ಇಲ್ಲಿ ಸಿನಿಮಾದ ವಿಶೇಷತೆಗಳ ಬಗ್ಗೆ ಮಾತನಾಡಲಿದ್ದಾರೆ. ಬಾಲಿವುಡ್‌ನ ಮೂವರು ಬ್ಯೂಟಿಯರ ಜೊತೆ ಕನ್ನಡ ಹಾಗೂ ತಮಿಳು ನಟಿಯರು ನಟರುಗಳು ಕೂಡ ಟಾಕ್ಸಿಕ್‌‌ನಲ್ಲಿ ಬಣ್ಣ ಹಚ್ಚಿದ್ದು, ಎಲ್ಲರೂ ಅಂದು ಉಪಸ್ಥಿತರಿರಲಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಯಶ್ ಬರೆದ ಕಥೆಗೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾಕಾನ್ ವೇದಿಕೆಯಲ್ಲಿ ಚಿತ್ರದ ಗ್ಲಿಂಪ್ಸ್ ಪ್ರದರ್ಶನಗೊಂಡ ಹಿನ್ನೆಲೆ ಸಹಜವಾಗಿಯೇ ಯಶ್ ನಟನೆ & ಸ್ವ್ಯಾಗ್ ಕಣ್ತುಂಬಿಕೊಳ್ಳೋಕೆ ಹಾಲಿವುಡ್ ಮಂದಿ ಕೂಡ ಎದುರು ನೋಡ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version