ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಈಗಾಗಲೇ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದೆ. ಚಿತ್ರದ ಹೊಸ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಹಲ್ಚಲ್ ಎದ್ದಿದೆ. ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇದೀಗ ದೃಢಪಟ್ಟಿದ್ದು, ಟೀಸರ್ ನೋಡಿದವರೆಲ್ಲರೂ ಒಂದೇ ಮಾತು ಹೇಳುತ್ತಿದ್ದಾರೆ.
ಟೀಸರ್‌ನಲ್ಲಿ ಏನಿದೆ?
ಹೊಸ ಟೀಸರ್‌ನಲ್ಲಿ ಯಶ್ ರಾಯನ್ ಎಂಬ ಪಾತ್ರದಲ್ಲಿ ಸಖತ್ ವೈಲೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತದ ಸಾಹಸ, ಭಯಾನಕ ಫೈಟ್ ಸೀನ್‌ಗಳು, ರಾ ಎನರ್ಜಿ ಮತ್ತು ಡೈಲಾಗ್‌ಗಳು ಟೀಸರ್‌ನ ಮುಖ್ಯ ಆಕರ್ಷಣೆಯಾಗಿವೆ. ವಿಶೇಷವಾಗಿ “ಈ ಸಲ ಯುದ್ಧನೇ ಬೇರೆ” ಮತ್ತು “ಹಠ ಬಿಡೋ ಮಾತೇ ಇಲ್ಲ” ಎಂಬ ಡೈಲಾಗ್‌ಗಳು ಫ್ಯಾನ್ಸ್‌ರನ್ನು ಜೋರಾಗಿ ಎಕ್ಸೈಟ್ ಮಾಡಿವೆ.
ಯಶ್ ಯಂಗ್ ಲುಕ್‌ನಲ್ಲಿಯೂ ಕಾಣಿಸಿಕೊಂಡಿದ್ದು, ಇದು ರಾಯನ್ ಮಗನ ಪಾತ್ರವಾಗಿರಬಹುದೇ ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ. ದ್ವಿಪಾತ್ರದ ದೃಶ್ಯಗಳು ಸ್ಪಷ್ಟವಾಗಿ ಸಿಗುತ್ತಿರುವುದರಿಂದ ಈ ಚಿತ್ರದಲ್ಲಿ ಯಶ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಹಿಂದಿನ ಟೀಸರ್ vs ಹೊಸ ಟೀಸರ್ :
ಹಿಂದೆ ಬಿಡುಗಡೆಯಾದ ಮೊದಲ ಟೀಸರ್‌ನಲ್ಲಿ ಲೈಂಗಿಕ ಕ್ರಿಯೆಯ ದೃಶ್ಯಗಳು ವಿವಾದಕ್ಕೆ ಕಾರಣವಾಗಿ ದೂರುಗಳೂ ದಾಖಲಾಗಿದ್ದವು. ಆದರೂ ಆ ಟೀಸರ್ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಳ ವೀಕ್ಷಣೆ ಪಡೆದಿತ್ತು. ಈಗ ಬಿಡುಗಡೆಯಾದ ಹೊಸ ಟೀಸರ್ ಸಂಪೂರ್ಣವಾಗಿ ಭಿನ್ನವಾಗಿದ್ದು, ಆಕ್ಷನ್, ರಾ ಎನರ್ಜಿ ಮತ್ತು ಯಶ್‌ರ ಡಬಲ್ ಧಮಾಕದ ಮೇಲೆ ಫೋಕಸ್ ಮಾಡಿದೆ. ಟೀಸರ್ ನೋಡಿದ ಫ್ಯಾನ್ಸ್ “ಧುರಂಧರ್ 2ಗೂ ನಡುಕ ಹುಟ್ಟಿಸುವ ಲೆವೆಲ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಟಾಕ್ಸಿಕ್ ಟೀಸರ್ ಈಗಾಗಲೇ ಯಶ್ ಅಭಿಮಾನಿಗಳಲ್ಲಿ ಭಾರಿ ಎಕ್ಸ್‌ಪೆಕ್ಟೇಷನ್ ಎಬ್ಬಿಸಿದೆ. ಟ್ರೇಲರ್ ಬಿಡುಗಡೆಯಾಗುವುದೇ ಇನ್ನೂ ದೊಡ್ಡ ಧಮಾಕವಾಗಲಿದೆ ಎಂಬ ನಿರೀಕ್ಷೆ ಇದೆ. ಯಶ್ ಫ್ಯಾನ್ಸ್ ಗೆ ಡಬಲ್ ಧಮಾಕ ಸಿಕ್ಕಂತಾಗಿದೆ.




