• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಕ್ಸಿಕ್ ಡೈರೆಕ್ಟರ್ ಗೀತು ಯಾರು? ಹಿನ್ನೆಲೆ ಏನು ಗೊತ್ತಾ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 24, 2026 - 5:41 pm
in ಸಿನಿಮಾ
0 0
0
ಗುಟ್ಕಾ (3)

ಟಾಕ್ಸಿಕ್ ಡೈರೆಕ್ಟರ್ ಯಾರು..? ಆಕೆ ಹಿನ್ನೆಲೆ ಏನು ಗೊತ್ತಾ..?! 2 ನ್ಯಾಷನಲ್.. 2 ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಪಡೆದ ಗಟ್ಟಿಗಿತ್ತಿ. 34 ಸಿನಿಮಾಗಳ ನಟಿ.. ಬಾಲನಟಿಯೂ ಹೌದು ಈ ಗೀತು. 12 ವರ್ಷದ ಹಿಂದೆಯೇ ಆಸ್ಕರ್ ಅಂಗಳಕ್ಕೆ ಕೊಟ್ಟಿದ್ರು ಎಂಟ್ರಿ. ಯಶ್ ಈಕೆಯನ್ನ ನಂಬಿದ್ದೇಕೆ..? ಇಲ್ಲಿದೆ Exclusive ಸ್ಟೋರಿ.

ಟಾಕ್ಸಿಕ್ ಡೈರೆಕ್ಟರ್ ಒಬ್ಬ ಹೆಣ್ಣು ಅಂತಷ್ಟೇ ಪ್ರಪಂಚಕ್ಕೆ ಗೊತ್ತು. ಸಾವಿರಾರು ಕೋಟಿ ಬಾಕ್ಸ್ ಆಫೀಸ್ ಗಳಿಸಿದ ಸೂಪರ್ ಸ್ಟಾರ್ ಯಶ್ ಆಕೆಯನ್ನ ನಂಬಿದ್ದಾದ್ರೂ ಯಾಕೆ ಅನ್ನೋದು ಈ ಜಗತ್ತಿಗೆ ಗೊತ್ತಿಲ್ಲ. ಮಲಯಾಳಂ ಮೂಲದ ಗೀತು ಮೋಹನ್‌ದಾಸ್ ಬ್ಯಾಗ್ರೌಂಡ್ ಕೇಳಿದ್ರೆ ನೀವೊಮ್ಮೆ ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕಂದ್ರೆ ಆಕೆ ಬಾಲ್ಯದಿಂದಲೇ ಸಿನಿಮಾನ ಜೀವಿಸ್ತಿದ್ದಾರೆ. ಆ ತಪ್ಪಸ್ಸಿನ ಫಲವೇ ಈ ಟಾಕ್ಸಿಕ್.

RelatedPosts

ಶೀಘ್ರವೇ ವಿಶ್ವದಾದ್ಯಂತ ತೆರೆಗೆ ಬರಲಿದೆ ‘ಶಿವ-ದಿ ಆದಿಯೋಗಿ’

“NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ

ಕಷ್ಟ ಪಟ್ಟು ಮೇಲೆ ಬಂದು ಬ್ರ್ಯಾಂಡ್ ಆದ ಒಂಟಿ ಹೆಣ್ಣು..!

ರೇಣುಕಾಸ್ವಾಮಿ ಕೇಸ್: ಇಂದು ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಕೋರ್ಟ್ ಆದೇಶ

ADVERTISEMENT
ADVERTISEMENT

ಟಾಕ್ಸಿಕ್ ಡೈರೆಕ್ಟರ್ ಗೀತು ಯಾರು? ಹಿನ್ನೆಲೆ ಏನು ಗೊತ್ತಾ..?

34 ಸಿನಿಮಾಗಳ ನಟಿ.. ಬಾಲನಟಿಯೂ ಹೌದು ಈ ಬ್ಯೂಟಿ

ಶಾಲೆಗೂ ಮುನ್ನ ಬಣ್ಣದಲೋಕಕ್ಕೆ ಕಾಲಿಟ್ಟ ಶಾರದಾ ಪುತ್ರಿ..!!

ಮೂಲ ಹೆಸ್ರು ಗಾಯತ್ರಿ.. ಓದಿದ್ದೆಲ್ಲಾ ಮಲೇಷಿಯಾ, ಕೆನಡಾ

ಇಡೀ ವಿಶ್ವ ಸಿನಿದುನಿಯಾ ಎದುರು ನೋಡ್ತಿರೋ ಟಾಕ್ಸಿಕ್ ಸಿನಿಮಾದ ಡೈರೆಕ್ಟರ್ ಗೀತು ಮೋಹನ್‌ದಾಸ್‌ ಬಗ್ಗೆ ಎಷ್ಟೋ ಜನಕ್ಕೆ ಆಕೆ ಯಾರು..? ಏನು..? ಎತ್ತ..? ಅಂತ ಗೊತ್ತೇ ಇಲ್ಲ. ಅಂದಹಾಗೆ ಈಕೆ ರಾತ್ರೋ ರಾತ್ರಿ ಡೈರೆಕ್ಟರ್ ಆದವರಲ್ಲ. ಬಾಲ್ಯದಿಂದಲೇ ಬಣ್ಣದಲೋಕದ ಆಳ, ಅಗಲ ಅರಿತವರು. ಸದ್ಯ ಗೀತು ಮೋಹನ್‌ದಾಸ್‌ಗೆ 45 ವರ್ಷ. ಆದ್ರೆ ಈ ನಾಲ್ಕೂವರೆ ದಶಕದಲ್ಲಿ ಅವ್ರಿಗೆ ಬುದ್ಧಿ ಬಂದಾಗಿಂದಲೂ ಅಕ್ಷರಶಃ ಸಿನಿಮಾವನ್ನೇ ಜೀವಿಸಿದ್ದಾರೆ.

ಗೀತು ಮೋಹನ್‌ದಾಸ್ ಮೂಲ ಹೆಸರು ಗಾಯತ್ರಿ ದಾಸ್. ಸಿನಿಮಾಗಾಗಿ ಗೀತು ಅಂತ ಹೆಸರು ಬದಲಿಸಿಕೊಂಡಿರೋ ಈಕೆ.. ಮಲಯಾಳಂ ಅಲ್ಲದೆ, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಬಹುದೊಡ್ಡ ನೇಮು-ಫೇಮು ಮಾಡಿದ್ದಾರೆ. ಜೂನ್ 8, 1981ರಲ್ಲಿ ಜನಿಸಿದ ಗೀತು ಓದಿದ್ದೆಲ್ಲಾ ಮಲೇಷಿಯಾ, ಕೆನಡಾದಲ್ಲಿ. ಅದಕ್ಕೂ ಮುನ್ನ ಇನ್ನೂ ಶಾಲೆ ಮುಖ ಕೂಡ ನೋಡದ ಗೀತು, ಮೊದಲು ಕಂಡಿದ್ದು ಮಾತ್ರ ಬೆಳ್ಳಿಪರದೆಯಲ್ಲಿ ಅನ್ನೋದು ವಿಶೇಷ.

ಯೆಸ್.. ಗೀತು ಮೋಹನ್‌ ದಾಸ್‌ಗೆ ನಾಲ್ಕೈದು ವರ್ಷಗಳಿದ್ದಾಗಲೇ ಬಾಲನಟಿಯಾಗಿ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರೆ. ನಾಲ್ಕು ಮಲಯಾಳಂ ಹಾಗೂ ಒಂದು ತಮಿಳು ಚಿತ್ರದಲ್ಲಿ ಗೀತು ಬಾಲನಟಿಯಾಗಿ ಮಿಂಚುತ್ತಾರೆ. ಆ ನಂತ್ರ 2000ನೇ ಇಸವಿಯಿಂದ ಗೀತು ಬದುಕು ಕಂಪ್ಲೀಟ್ ಆಗಿ ಬದಲಾಗಿ ಹೋಗುತ್ತೆ. ಇನ್‌‌ಫ್ಯಾಕ್ಟ್ ಸಖತ್ ಕಲರ್‌ಫುಲ್ ಆಗಿಬಿಡುತ್ತೆ. ಅದಕ್ಕೆ ಕಾರಣ ಆಕೆ ಬಣ್ಣ ಹಚ್ಚುವ ಚೊಚ್ಚಲ ಚಿತ್ರ ಲೈಫ್ ಈಸ್ ಬ್ಯೂಟಿಫುಲ್.

ಮೋಹನ್‌‌ಲಾಲ್, ಮಾಧವನ್, ಪೃಥ್ವಿರಾಜ್ ಜೊತೆ ನಟನೆ

ದಶಕದ ಕಾಲ ನಾಯಕನಟಿಯಾಗಿ ಮಿಂಚು ಹರಿಸಿದ ಚೆಲುವೆ

ಗೀತು ಡೈರೆಕ್ಷನ್‌ ಕನಸಿಗೆ ರೆಕ್ಕೆ ಕಟ್ಟಿದ ಪತಿ ರಾಜೀವ್ ರವಿ..!!

ಟಾಕ್ಸಿಕ್ ಸಿನಿಮಾಗೆ ಗೀತು ಗಂಡ ರಾಜೀವ್ ಸಿನಿಮಾಟೋಗ್ರಫಿ

ನಾಯಕನಟಿಯಾಗಿ ಬಣ್ಣ ಹಚ್ಚಿದ ಚೊಚ್ಚಲ ಚಿತ್ರದಲ್ಲೇ ಸೂಪರ್ ಸ್ಟಾರ್ ಮೋಹನ್‌ಲಾಲ್ ಜೊತೆ ತೆರೆ ಹಂಚಿಕೊಳ್ತಾರೆ ಗೀತು ಮೋಹನ್‌ದಾಸ್. ಆ ನಂತ್ರ ಆಕೆ ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. 2000ನೇ ಇಸವಿಯಿಂದ 2009ರ ತನಕ ಸುಮಾರು ಒಂದು ದಶಕದ ಕಾಲ ಬರೋಬ್ಬರಿ 29 ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಆ ಮೂಲಕ ಮಲಯಾಳಂ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ನಟಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸ್ತಾರೆ.

ಮೋಹನ್‌ಲಾಲ್, ಮಾಧವನ್, ಪೃಥ್ವಿರಾಜ್ ಸುಕುಮಾರನ್ ಅಂತಹ ಅದ್ಭುತ ಸ್ಟಾರ್ಸ್ ಜೊತೆ ಗೀತು ಸ್ಕ್ರೀನ್ ಶೇರ್ ಮಾಡುವ ಮುಖೇನ ನಟನೆಯಲ್ಲಿ ಚೆನ್ನಾಗಿ ಮಾಗುತ್ತಾರೆ. ಆ ನಂತ್ರ ಅದ್ಯಾಕೋ ಅವ್ರಿಗೆ ನಟನೆ ಸಾಕೆನಿಸುತ್ತೆ. ಆಗ ನಿರ್ದೇಶನದತ್ತ ವಾಲುತ್ತಾರೆ. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಕೂಡ ಕಟ್ಟುವುದರ ಮೂಲಕ ಚಿತ್ರ ನಿರ್ಮಾಣಕ್ಕೂ ಮುಂದಾಗ್ತಾರೆ. ಆಕೆಯ ನಿರ್ದೇಶನದ ಕನಸಿಗೆ ರೆಕ್ಕೆ ಕಟ್ಟುವುದೇ ಪತಿ ರಾಜೀವ್ ರವಿ.

ಹೌದು.. ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿ ಖ್ಯಾತ ಸಿನಿಮಾಟೋಗ್ರಾಫರ್. ಹಾಗಾಗಿ ಚಿತ್ರರಂಗದಿಂದಲೇ ಪರಿಚಯ ಆದಂತಹ ರಾಜೀವ್ ಜೊತೆ ಗೀತು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. 2009ರಲ್ಲಿ ಮದುವೆ ಬಳಿಕ ಅದ್ಯಾಕೋ ನಟನೆಗೆ ಗುಡ್ ಬೈ ಹೇಳಿ, ತೆರೆ ಹಿಂದೆ ಕೆಲಸ ಮಾಡಲು ಸಜ್ಜಾಗ್ತಾರೆ ಗೀತು. ಆಗ ಶುರುವಾಗೋದೇ ಕೇಲ್‌‌ಕ್ಕುನ್ನುಂಡೋ ಅನ್ನೋ ಅವ್ರ ಮೊದಲ ಶಾರ್ಟ್ ಫಿಲ್ಮ್. ಈ ಚಿತ್ರದಿಂದ ಗೀತು ಡೈರೆಕ್ಟರ್, ಪ್ರೊಡ್ಯೂಸರ್ ಆಗಿ ಬಡ್ತಿ ಪಡೆದ್ರೆ, ಆಕೆಯ ಚೊಚ್ಚಲ ಚಿತ್ರಕ್ಕೆ ಗಂಡ ರಾಜೀವ್ ಅವ್ರೇ ಕ್ಯಾಮೆರಾಮ್ಯಾನ್ ಆಗಿ ಕೆಲಸ ಕೂಡ ಮಾಡ್ತಾರೆ.

ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾಗೂ ಗೀತು ಪತಿರಾಯ ರಾಜೀವ್ ಅವ್ರೇ ಸಿನಿಮಾಟೋಗ್ರಾಫರ್. ಅವ್ರ ಕ್ಯಾಮೆರಾ ಕೈಚಳಕದಲ್ಲಿ ಅರಳಿದ ದೃಶ್ಯ ಚಿತ್ತಾರವೇ ಇಂದು ವಿಶ್ವ ಸಿನಿದುನಿಯಾ ಈ ಸಿನಿಮಾನ ತನ್ನ ಬೆರಗುಗಣ್ಣಿನಿಂದ ನೋಡುವಂತಾಗಿದೆ. ಒಂದೊಂದು ಫ್ರೇಮ್ ಕೂಡ ರೋಚಕ, ರೋಮಾಂಚಕ. ಟೆಕ್ನಿಕಲಿ ಅಡ್ವಾನ್ಸ್ಡ್ ಕ್ಯಾಮೆರಾಗಳನ್ನ ಬಳಸಿ ಚಿತ್ರಿಸಲಾಗಿದ್ದು, ನೋಡುಗರಿಗೆ ಹಂಡ್ರೆಡ್ ಪರ್ಸೆಂಟ್ ಅದು ವಿಶ್ಯುವಲ್ ಟ್ರೀಟ್ ಕೊಡಲಿದೆ.

2 ನ್ಯಾಷನಲ್.. 2 ಸ್ಟೇಟ್ ಫಿಲ್ಮ್ ಅವಾರ್ಡ್ಸ್ ಪಡೆದ ಗಟ್ಟಿಗಿತ್ತಿ

12 ವರ್ಷದ ಹಿಂದೆಯೇ ಆಸ್ಕರ್ ಅಂಗಳಕ್ಕೆ ಕೊಟ್ಟಿದ್ರು ಎಂಟ್ರಿ

ಲಯರ್ಸ್ ಡೈಸ್ & ಮೂಥೋನ್‌ಗೆ ಪ್ರಶಸ್ತಿಗಳ ಸರಮಾಲೆ

ನಿರ್ದೇಶನದ ಜೊತೆ ನಟನೆಗೂ ರಾಜ್ಯ ಪ್ರಶಸ್ತಿ ಪಡೆದ ಗೀತು

ತೆರೆ ಮುಂದೆ ಹಾಗೂ ತೆರೆ ಹಿಂದೆ.. ಚಿತ್ರರಂಗದ ಎಲ್ಲಾ ಆಗು ಹೋಗುಗಳನ್ನ ಬಹಳ ಹತ್ತಿರದಿಂದ ಕಂಡಿದ್ದ ಗೀತು ಮೋಹನ್‌ದಾಸ್.. ತಮ್ಮ ಜೀವನಾನುಭವಗಳನ್ನೇ ತೆರೆಗೆ ತರೋ ನಿಟ್ಟಿನಲ್ಲಿ ಬಾಲಿವುಡ್‌ನಲ್ಲಿ ಬಲವಾದ ಪ್ರಯೋಗ ಮಾಡ್ತಾರೆ. ಅದೇ ಲಯರ್ಸ್ ಡೈಸ್ ಸಿನಿಮಾ. ನವಾಜುದ್ದಿನ್ ಸಿದ್ದಿಕಿ ಹಾಗೂ ಗೀತಾಂಜಲಿ ಥಾಪ ಕಾಂಬೋನಲ್ಲಿ ಬಂದಂತಹ ಈ ಚಿತ್ರ ಒಂದಲ್ಲ ಎರಡೆರಡು ನ್ಯಾಷನಲ್ದ ಅವಾರ್ಡ್‌‌ಗಳನ್ನ ಮುಡಿಗೇರಿಸಿಕೊಳ್ಳುತ್ತೆ.

ಅತ್ಯುತ್ತಮ ನಟಿ ಪ್ರಶಸ್ತಿಗೆ ಗೀತಾಂಜಲಿ ಥಾಪ ಭಾಜನರಾದ್ರೆ, ಅತ್ಯುತ್ತಮ ಸಿನಿಮಾಟೋಗ್ರಫಿಗಾಗಿ ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿಗೆ ರಾಷ್ಟ್ರ ಪ್ರಶಸ್ತಿ ಲಭಿಸುತ್ತದೆ. ಅಲ್ಲದೆ ಸೋಫಿಯಾ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, NYIFF, ಪೆಸಾರೋ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಗ್ರನಾಡಾ ಸಿನೀಸ್ ಫಿಲ್ಮ್ ಫೆಸ್ಟ್.. ಹೀಗೆ ಸಾಕಷ್ಟು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತೆ.

ಅದಾದ ಬಳಿಕ ನಿರ್ದೇಶಿಸಿದ ಮೂಥೋನ್ ಸಿನಿಮಾ ಕೂಡ ಗೀತು ಮೋಹನ್‌ದಾಸ್‌‌ನ ಬಹುದೊಡ್ಡ ಸ್ಟಾರ್ ಡೈರೆಕ್ಟರ್ ಆಗಿಸುತ್ತೆ. ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾದ ಈ ದ್ವಿಭಾಷಾ ಸಿನಿಮಾಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗುತ್ತೆ. ನಿವಿನ್ ಪೌಲಿ ಲೀಡ್‌‌ನಲ್ಲಿ ನಟಿಸಿದ್ದ ಮೂಥೋನ್ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತೆ. ಈ ಸಿನಿಮಾದ ಹಿಂದಿ ಅವತರಣಿಕೆಗೆ ಅನುರಾಗ್ ಕಶ್ಯಪ್ ಡೈಲಾಗ್ಸ್ ಬರೆದಿದ್ದು ಹೈಲೈಟ್.

ಮೂಥೋನ್ ಸಿನಿಮಾ ಕೂಡ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಬರೋಬ್ಬರಿ 3 ಪ್ರಶಸ್ತಿಗಳನ್ನ ತನ್ನ ಮುಡಿಗೇರಿಸಿಕೊಳ್ಳುತ್ತೆ. ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್ ಸಹ ಈ ಚಿತ್ರಕ್ಕೆ ಲಭಿಸುತ್ತೆ. ಅಲ್ಲದೆ.. ಏಷ್ಯನೆಟ್ ಫಿಲ್ಮ್ ಅವಾರ್ಡ್‌ಗೆ ಆಯ್ಕೆಯಾಗುತ್ತೆ. ಇದೀಗ ಟಾಕ್ಸಿಕ್ ಸರದಿ.

ಅಂದಹಾಗೆ ಗೀತು ಬರೀ ನಿರ್ದೇಶನಕ್ಕಷ್ಟೇ ಅಲ್ಲ.. ನಟನೆಗೂ ಸಹ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕೆಯ ಜೀವಮಾನ ಸಾಧನೆ ಏನಪ್ಪಾ ಅಂದ್ರೆ 2014ರಲ್ಲೇ ಲಯರ್ಸ್ ಡೈಸ್ ಸಿನಿಮಾ ಬೆಸ್ಟ್ ಫಾರಿನ್ ಲಾಂಗ್ವೇಜ್ ಮೂವಿ ಕೆಟಗರಿಯಲ್ಲಿ ಭಾರತದಿಂದ ಆಸ್ಕರ್ ಅಂಗಳಕ್ಕೆ ಆಯ್ಕೆಯಾದ ಚಿತ್ರವಾಗುತ್ತೆ. 87ನೇ ಸಾಲಿನ ಆಸ್ಕರ್ ಅಕಾಡೆಮಿ ಅವಾರ್ಡ್ ಪಡೆಯದಿದ್ರೂ ಸಹ, ಅಲ್ಲಿಗೆ ಆಯ್ಕೆಯಾಗಿದ್ದೇ ಬಹುದೊಡ್ಡ ಖುಷಿ, ಹೆಮ್ಮೆ ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಗುಟ್ಕಾ (10)

ಶೀಘ್ರವೇ ವಿಶ್ವದಾದ್ಯಂತ ತೆರೆಗೆ ಬರಲಿದೆ ‘ಶಿವ-ದಿ ಆದಿಯೋಗಿ’

by ಕವಿತಾ
August 24, 2026 - 7:28 pm
0

ಗುಟ್ಕಾ (9)

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಅಭಿಮಾನಿಗಳಿಂದ ಶ್ರೀಶೈಲದಲ್ಲಿ ವಿಶೇಷ ಪೂಜೆ

by ಕವಿತಾ
August 24, 2026 - 7:13 pm
0

ಗುಟ್ಕಾ (8)

“NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ

by ಕವಿತಾ
August 24, 2026 - 7:01 pm
0

ಗುಟ್ಕಾ (7)

ಭಾರೀ ಗಾಳಿಗೆ ರಸ್ತೆ ಮಧ್ಯೆಯೇ ಉರುಳಿ ಬಿದ್ದ ಸ್ವಾಗತ ಕಮಾನು: ತಪ್ಪಿದ ಭಾರೀ ಅನಾಹುತ

by ಕವಿತಾ
August 24, 2026 - 6:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಗುಟ್ಕಾ (10)
    ಶೀಘ್ರವೇ ವಿಶ್ವದಾದ್ಯಂತ ತೆರೆಗೆ ಬರಲಿದೆ ‘ಶಿವ-ದಿ ಆದಿಯೋಗಿ’
    August 24, 2026 | 0
  • ಗುಟ್ಕಾ (8)
    “NH66” ನಲ್ಲಿ ಶೃತಿ ಹರಿಹರನ್ ಪಯಣ: ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ
    August 24, 2026 | 0
  • ಗುಟ್ಕಾ (4)
    ಕಷ್ಟ ಪಟ್ಟು ಮೇಲೆ ಬಂದು ಬ್ರ್ಯಾಂಡ್ ಆದ ಒಂಟಿ ಹೆಣ್ಣು..!
    August 24, 2026 | 0
  • Untitled design 2026 08 24T114335.465
    ರೇಣುಕಾಸ್ವಾಮಿ ಕೇಸ್: ಇಂದು ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತು ಕೋರ್ಟ್ ಆದೇಶ
    August 24, 2026 | 0
  • ‘ಟಾಕ್ಸಿಕ್’ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅನಾಹುತ ಆಯೋಜಕರ ವಿರುದ್ಧ FIR
    ‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅನಾಹುತ: ಆಯೋಜಕರ ವಿರುದ್ಧ FIR
    August 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version