ಎನ್‌ಟಿಆರ್-ನೀಲ್ ಡ್ರ್ಯಾಗನ್ ಸಿನಿಮಾದಿಂದ ಮಲಯಾಳಂ ನಟ ಟೊವಿನೋ ಥಾಮಸ್ ಹೊರಬಂದಿದ್ದಾರೆ. ಅದಕ್ಕೆ ಟೊವಿನೋ ಕೊಡೋ ರೀಸನ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯೆಸ್.. ಮಾನ್‌ಸ್ಟರ್ ನೀಲ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಗೆ ಟೊವಿನೋ ಗುಡ್ ಬೈ ಹೇಳಿದ್ಯಾಕೆ..? ಸದ್ಯ ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಏನು ಅನ್ನೋದ್ರ ಕಲರ್‌ಫುಲ್ ಸ್ಟೋರಿ ಇಲ್ಲಿದೆ ನೋಡಿ.
- NTR-ನೀಲ್ ‘ಡ್ರ್ಯಾಗನ್’ನಿಂದ ಟೊವಿನೋ ಥಾಮಸ್ ಔಟ್
- ಶೂಟಿಂಗ್ ಪದ್ಧತಿಯೇ ಸರಿ ಇಲ್ಲ ಎಂದು ಹೊರನಡೆದ ಸ್ಟಾರ್
- ಮೇಕಿಂಗ್ ಹಂತದಲ್ಲೇ ಡ್ರ್ಯಾಗನ್ 125Cr ಓಟಿಟಿ ಬ್ಯುಸಿನೆಸ್
- ತಾರಕ್ ಜೊತೆ ರುಕ್ಮಿಣಿ ವಸಂತ್, ಅನಿಲ್ ಕಪೂರ್ ಕಮಾಲ್
ವಾರ್-2 ಬಳಿಕ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಬಣ್ಣ ಹಚ್ಚಿರೋ ಬಹು ನಿರೀಕ್ಷಿತ ಸಿನಿಮಾ ಡ್ರ್ಯಾಗನ್. ನಮ್ಮ ಕನ್ನಡದ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಲಾರ್ ನಂತ್ರ ಕೈ ಹಾಕಿರೋ ಪ್ರಾಜೆಕ್ಟ್ ಇದಾಗಿದ್ದು, ಸಹಜವಾಗಿಯೇ ಈ ಕಾಂಬೋ ಮೇಲೆ ತುಂಬಾ ದೊಡ್ಡ ಎಕ್ಸ್‌ಪೆಕ್ಟೇಷನ್ ಇದೆ. ಅದಕ್ಕೆ ತಕ್ಕನಾಗಿ ಚಿತ್ರತಂಡ 2024ರ ಆಗಸ್ಟ್‌ನಿಂದ ಮೇಕಿಂಗ್ ಶುಭಾರಂಭ ಮಾಡಿದೆ.
ಜೂನಿಯರ್ ಎನ್‌ಟಿಆರ್‌ಗೆ ನಮ್ಮ ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಜೋಡಿಯಾಗಿ ಬಣ್ಣ ಹಚ್ಚಿದ್ದು, ಅನಿಮಲ್ ಚಿತ್ರದಿಂದ ಮತ್ತೆ ಟ್ರ್ಯಾಕ್‌ಗೆ ಬಂದಿರೋ ಅನಿಲ್ ಕಪೂರ್ ಕೂಡ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗ್ಲೇ ಚಿತ್ರದ ಶೂಟಿಂಗ್ ಮಂಗಳೂರು, ಹೈದ್ರಾಬಾದ್ ಅಲ್ಲದೆ, ಜೋರ್ಡಾನ್‌ನ ಮರುಭೂಮಿಯಲ್ಲಿ ಭರದಿಂದ ಸಾಗಿತ್ತು. ಆದ್ರೆ ಇರಾನ್-ಇಸ್ರೇಲ್ ವಾರ್‌ನಿಂದಾಗಿ ಜೋರ್ಡಾನ್‌ನಿಂದ ಕಾಲ್ಕಿತ್ತು, ಪ್ರಾಣಾಪಾಯ ಉಳಿಸಿಕೊಳ್ಳಲು ಹೈದ್ರಾಬಾದ್‌ಗೆ ಸೇಫ್ ಆಗಿ ವಾಪಸ್ ಆಗಿತ್ತು ಟೀಂ.
ಇದೀಗ ಡ್ರ್ಯಾಗನ್ ಅಡ್ಡಾದಿಂದ ಹೊಚ್ಚ ಹೊಸ ನ್ಯೂಸ್ ಹೊರಬಂದಿದೆ. ಅದೇನಪ್ಪಾ ಅಂದ್ರೆ ಮಲಯಾಳಂ ನಟ ಟೊವಿನೋ ಥಾಮಸ್ ಡ್ರ್ಯಾಗನ್ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರಂತೆ. ಅದಕ್ಕೆ ಕಾರಣ ಕೇಳಿದ್ರೆ ನೀವು ಅಕ್ಷರಶಃ ಶಾಕ್ ಆಗ್ತೀರಾ. ಅರೇ ಇಷ್ಟು ಸಿಲ್ಲಿ ರೀಸನ್‌ನಿಂದ ಟೊವಿನೋ ಇಂತಹ ಬಿಗ್ಗೆಸ್ಟ್ ಪ್ರಾಜೆಕ್ಟ್‌ನ ಕೈ ಬಿಟ್ರಾ ಅಂತೀರಾ. ಹೌದು.. ಮಲಯಾಳಂ ಹಾಗೂ ತೆಲುಗು ಸಿನಿಮಾಗಳ ಶೂಟಿಂಗ್ ಪದ್ಧತಿಗಳು ಬೇರೆ ಬೇರೆ. ಯಾಕಂದ್ರೆ ಮಲಯಾಳಂನಲ್ಲಿ ಒಂದು ಸಿನಿಮಾನ ಒಂದೇ ಸ್ಟ್ರೆಚ್‌ನಲ್ಲಿ ಸಿಂಗಲ್ ಶೆಡ್ಯೂಲ್ ಮೂಲಕ ಮಾಡಿ ಮುಗಿಸ್ತಾರಂತೆ ಮಲಯಾಳಿಗಳು. ಆದ್ರೆ ತೆಲುಗು ಸಿನಿಮಾಗಳು ಹಾಗಲ್ಲ. ಹಂತ ಹಂತವಾಗಿ ಹಲವು ಶೆಡ್ಯೂಲ್‌ಗಳ ಮೂಲಕ ಸಿನಿಮಾ ಮಾಡ್ತಾರೆ. ಅದೇ ಕಾರಣ ನೀಡಿ, ನನಗೆ ಇದು ಸೆಟ್ ಆಗಲ್ಲ ಅಂತ ಹೊರಗೆ ಬಂದುಬಿಟ್ಟಿದ್ದಾರೆ ಟೊವಿನೋ.
ಮಿನ್ನಲ್ ಮುರಳಿ, 2018, ಲೂಸಿಫರ್, ಎಂಪುರಾನ್, ಲೋಕ್ಹಾ.. ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಂದ ಬಹುದೊಡ್ಡ ಹೆಸರು ಮಾಡಿರೋ ಟೊವಿನೋಗೆ ಒಳ್ಳೆಯ ತೆಲುಗು ಸಿನಿಮಾ ಮಾಡೋ ಆಶಯವಿತ್ತಂತೆ. ಆದ್ರೀಗ ಆ ಕನಸು ನನಸಾಗೋ ಸಮಯದಲ್ಲಿ ಅವರೇ ಅದಕ್ಕೆ ವಿಘ್ನ ತಂದುಕೊಂಡಿರೋದು ವಿಪರ್ಯಾಸ. ಎನ್‌ಟಿಆರ್, ಅನಿಲ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡುವುದರಿಂದ ಅವರಿಗೆ ಅವರೇ ವಂಚಿಸಿಕೊಂಡಂತಾಗಿದೆ.
ಅಂದಹಾಗೆ ಡ್ರ್ಯಾಗನ್ ಮೂವಿ ಈಗಾಗ್ಲೇ ಮೇಕಿಂಗ್ ಹಂತದಲ್ಲಿ ಇರುವಾಗಲೇ ಪ್ರತಿಷ್ಠಿತ ನೆಟ್‌ಫ್ಲಿಕ್ಸ್ ಗೆ ಬರೋಬ್ಬರಿ 125 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ತನ್ನ ಓಟಿಟಿ ಹಕ್ಕುಗಳನ್ನ ಮಾರಾಟ ಮಾಡಿ ಬ್ಯುಸಿನೆಸ್ ಆರಂಭಿಸಿದೆ. ಇದು ಚಿತ್ರತಂಡದ ಜೋಶ್ ಹೆಚ್ಚಿಸಿದ್ದು, ಅದ್ಭುತ ಸಿನಿಮಾ ಆಗಿ ಮೂಡಿಬರೋಕೆ ಹುರುಪು, ಹುಮ್ಮಸ್ಸು ನೀಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
