ದಿ ವೆಯ್ಟ್ ಈಸ್ ಓವರ್.. ಕಮಲ್ ಹಾಸನ್ ಥಗ್ ಲೈಫ್ ಪ್ರಪಂಚ ಕೊನೆಗೂ ಅನಾವರಣಗೊಂಡಿದೆ. ವಿಕ್ರಮ್ ಸಿನಿಮಾ ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್ ಇಲ್ಲಿ ತೋರಿಸಿದ್ದಾರೆ ಯೂನಿವರ್ಸಲ್ ಸ್ಟಾರ್. ಬೆಂಕಿ- ಬಿರುಗಾಳಿಯಂತಿರೋ ಕಮಲ್-ಸಿಂಬು ಗ್ಯಾಂಗ್‌ಸ್ಟರ್‌ಗಳ ಹೈ- ವೋಲ್ಟೇಜ್ ಕಾದಾಟ ಇಲ್ಲಿದೆ. ಟ್ರೈಲರ್ ಸಮೇತ ಪಿನ್ ಟು ಪಿನ್ ಡಿಟೇಲ್ಸ್ ನಿಮ್ಮ ಮುಂದೆ.
- ಬೆಂಕಿ ಬಿರುಗಾಳಿ.. ಕಮಲ್-ಸಿಂಬು ಗ್ಯಾಂಗ್‌ಸ್ಟರ್ ಲೈಫ್
- ಅಂಡರ್‌ವರ್ಲ್ಡ್‌ನಲ್ಲಿ ತಂದೆ- ಮಗ ಬದ್ಧ ಶತ್ರುಗಳಾಗಿದ್ದೇಕೆ ?
- ಮಣಿರತ್ನಂ ಈಸ್ ಬ್ಯಾಕ್.. ಹೈ- ವೋಲ್ಟೇಜ್ ಮೇಕಿಂಗ್
- ಗುರುವಿಗೇ ತಿರುಗುಬಾಣ.. ಏನಿದು ‘ಥಗ್ ಲೈಫ್’ ಕಥೆ..?
ಇದು ಸಕಲಕಲಾ ವಲ್ಲಭ ಕಮಲ್ ಹಾಸನ್ ನಟನೆಯ 234ನೇ ಸಿನಿಮಾ ಥಗ್ ಲೈಫ್ ಟ್ರೈಲರ್ ಝಲಕ್. ಹೈ-ವೋಲ್ಟೇಜ್ ಗ್ಯಾಂಗ್‌ಸ್ಟರ್ ಮಾಸ್ ಮಸಾಲ ಎಂಟರ್‌ಟೈನರ್‌ನಲ್ಲಿ ಕಮಲ್ ಹಾಸನ್ ಹಾಗೂ ಸಿಲಂಬರಸನ್ ಸಿಂಬು ಕಾದಾಟ ನೋಡೋಕೆ ಸಖತ್ ಕಿಕ್ ಕೊಡ್ತಿದೆ. ಬೆಂಕಿ- ಬಿರುಗಾಳಿಯಂತೆ ಇಬ್ಬರ ಎನರ್ಜಿ, ಮೈಂಡ್ ಬ್ಲೋಯಿಂಗ್ ಸ್ಟಂಟ್ಸ್ ಸೆಂಟರ್ ಆಫ್ ಅಟ್ರ್ಯಾಕ್ಷನ್.
38 ವರ್ಷಗಳ ಲಾಂಗ್ ಗ್ಯಾಪ್ ಬಳಿಕ ರೀ-ಯುನೈಟ್ ಆಗಿರೋ ಮಣಿರತ್ನಂ ಹಾಗೂ ಕಮಲ್ ಹಾಸನ್, ಈ ಬಾರಿ ನೋಡುಗರ ನಿರೀಕ್ಷೆ ಮೀರಿಸೋ ರೇಂಜ್‌ಗೆ ಎಂಟರ್‌ಟೈನ್ ಮಾಡೋಕೆ ಬರ್ತಿದ್ದಾರೆ. ಹೌದು.. 1987ರ ನಾಯಕನ್ ಚಿತ್ರದ ಬಳಿಕ ಮೋಡಿ ಮಾಡೋಕೆ ಅಂತಲೇ ಥಗ್ ಲೈಫ್‌ಗಾಗಿ ಒಂದಾಗಿದೆ ಈ ಜೋಡಿ. ಅದ್ರಂತೆ ಕಣ್ಣು ಕುಕ್ಕುವ ಟ್ರೈಲರ್ ರಿವೀಲ್ ಮಾಡಿದೆ.
ರಂಗರಾಯ ಶಕ್ತಿವೇಲ್ ನಾಯ್ಕರ್ ಅನ್ನೋ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಮಲ್ ಹಾಸನ್ ಮಿಂಚು ಹರಿಸಿದ್ದಾರೆ. ತಂದೆಯನ್ನೇ ಕಾಪಾಡುವ ನಾಯ್ಕರ್ ಮಗ ಅಮರನ್ ಪಾತ್ರದಲ್ಲಿ ಸಿಂಬು ಕಮಾಲ್ ಮಾಡಿದ್ದಾರೆ. ಕಮಲ್ ಪತ್ನಿಯಾಗಿ ಅಭಿರಾಮಿ ಹಾಗೂ ಪ್ರೇಯಸಿಯಾಗಿ ತ್ರಿಶಾ ಗ್ಲಾಮರ್ ಹೆಚ್ಚಿಸಿದ್ದಾರೆ.
ಬಾಲ್ಯದಲ್ಲಿ ತಂದೆಯನ್ನೇ ಕಾಪಾಡುವ ಸಿಂಬು, ಅವರದೇ ಗರಡಿಯಲ್ಲಿ ಪಳಗಿ, ನಂತ್ರ ದೊಡ್ಡವನಾದ ಬಳಿಕ ತಂದೆಯ ಸ್ಥಾನದಲ್ಲಿ ತಾನು ಕೂರಲು ಬಡಿದಾಡುವ ಕಥೆ ಟ್ರೈಲರ್‌ನಲ್ಲಿ ಎದ್ದು ಕಾಣ್ತಿದೆ.
ನಾಸರ್, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮೀ, ಅಶೋಕ್ ಸೆಲ್ವನ್, ಸಾನ್ಯ ಮಲ್ಹೋತ್ರಾ, ಪಂಕಜ್ ತ್ರಿಪಾಠಿ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡು ಥಗ್ ಲೈಫ್‌ನಲ್ಲಿದೆ. ಅಂದಹಾಗೆ ಸಿಂಬು ಇಲ್ಲಿ ಆರ್ಮಿ ಆಫೀಸರ್ ಅಥ್ವಾ ಗ್ಯಾಂಗ್‌ಸ್ಟರ್ ಅನ್ನೋ ಕುತೂಹಲವಿದೆ. ಅಲ್ಲದೆ, ಕಮಲ್ ಹಾಸನ್ ಮಾಸ್ ಸ್ಟಂಟ್ಸ್ ಜೊತೆ ರಸಿಕತೆ ಕೂಡ ಎದ್ದು ಕಾಣುತ್ತೆ. ಅಭಿರಾಮಿ ಜೊತೆಗಿನ ಲಿಪ್‌ಲಾಕ್‌ನಿಂದ ಹಿಡಿದು ತ್ರಿಶಾಗೆ ಐ ಆ್ಯಮ್ ಯುವರ್ ಓನ್ಲಿ ಆ್ಯಡಂ ಅನ್ನುವ ತನಕ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.
ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ & ಹಿನ್ನೆಲೆ ಸಂಗೀತ, ರವಿ ಕೆ ಚಂದ್ರನ್ ಸಿನಿಮಾಟೋಗ್ರಫಿ, ಶ್ರೀಕಾರ್ ಪ್ರಸಾದ್ ಶಾರ್ಪ್ ಎಡಿಟಿಂಗ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ. ಈಗಾಗ್ಲೇ ಸಾಂಗ್ಸ್ ದೊಡ್ಡ ಮಟ್ಟಕ್ಕೆ ಹಿಟ್ ಆಗಿದ್ದು, ಸಿನಿಮಾ ಇದೇ ಜೂನ್ 5ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ವಿಕ್ರಮ್ ನೋಡಿ ಖುಷಿ ಪಟ್ಟಿದ್ದ ಚಿತ್ರಪ್ರೇಮಿಗಳಿಗೆ ಇದು ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್‌ನ ಥಗ್ ಲೈಫ್‌ನಲ್ಲಿ ತೋರಿಸ್ತೀವಿ ಅನ್ನೋ ಸಂದೇಶ ಸಾರಿದ್ದಾರೆ ಕಮಲ್ ಹಾಸನ್.