ಜಾಗತಿಕ ಮಟ್ಟದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ರಾಜಾ ಸಾಬ್’ (The Raja Saab) ಶುಕ್ರವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಹಲವು ವರ್ಷಗಳ ಬಳಿಕ ಪ್ರಭಾಸ್ ಹಾರರ್-ಕಾಮಿಡಿ ಶೈಲಿಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಆದರೆ, ಈ ಸಂಭ್ರಮಾಚರಣೆ ಕೆಲವು ಕಡೆ ಅಪಾಯಕಾರಿ ಘಟನೆಗಳಿಗೆ ಕಾರಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಚಿತ್ರಮಂದಿರಗಳ ಮುಂದೆ ಮೊದಲ ಪ್ರದರ್ಶನಕ್ಕೂ ಮುನ್ನವೇ ಅಭಿಮಾನಿಗಳು ಪಟಾಕಿ ಸಿಡಿಸಿ ಹಬ್ಬ ಮಾಡಿದ್ದಾರೆ. ಪ್ರಭಾಸ್ ಅವರ ಮ್ಯಾಕಿನೋ ಅಲ್ಫಾ ಲುಕ್ ಮತ್ತು ಸ್ವಾಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಚಿತ್ರದ ಒಟ್ಟಾರೆ ವಿಮರ್ಶೆಯ ಬಗ್ಗೆ ಹೇಳುವುದಾದರೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಭಾಸ್ ಅವರ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಕೆಲವು ಕಾಮಿಡಿ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಅದರೊಟ್ಟಿಗೆ ಚಿತ್ರದ ಗ್ರಾಫಿಕ್ಸ್ (VFX) ಕಳಪೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕೆಲವು ಕಡೆ ಚಿತ್ರಕಥೆ ಜಟಿಲವಾಗಿದ್ದು, ನಿಧಾನವಾಗಿ ಕಥೆಯ ಮುಂದುವರೆದಿದೆ ಎಂದು ಚಿತ್ರಪ್ರೇಮಿಗಳು ಅಭಿಪ್ರಾಯ ಪಟ್ಟಿದ್ದಾರೆ.
రాజాసాబ్ క్రేజ్ హద్దులు దాటింది… రాయగడ థియేటర్లో అగ్నికలకలం
రాజాసాబ్ రిలీజ్ సందర్భంగా ఒడిశాలోని రాయగడలో ఫ్యాన్స్ రెచ్చిపోయారు. థియేటర్లో బాణసంచా పేల్చడంతో స్క్రీన్ ముందున్న కాగితాలపై పడి మంటలు చెలరేగాయి. హాల్ యాజమాన్యం, కొందరు ప్రేక్షకులు వెంటనే స్పందించి మంటలను ఆర్పేశారు.… pic.twitter.com/y7XtvMkhCG
— Milagro Movies (@MilagroMovies) January 9, 2026
ನೆರೆಯ ರಾಜ್ಯಗಳಲ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದರೆ ಒಡಿಶಾದ ರಾಯಗಡ ಜಿಲ್ಲೆಯ ಚಿತ್ರಮಂದಿರವೊಂದರಲ್ಲಿ ಅಭಿಮಾನಿಗಳ ವರ್ತನೆ ದೊಡ್ಡ ಮಟ್ಟದ ಅವಘಡಕ್ಕೆ ನಾಂದಿ ಹಾಡಿತು. ಚಿತ್ರದಲ್ಲಿ ಪ್ರಭಾಸ್ ಅವರ ಎಂಟ್ರಿ ಸೀನ್ ಬರುತ್ತಿದ್ದಂತೆ ಸಂಭ್ರಮ ತಡೆಯಲಾರದ ಅಭಿಮಾನಿಗಳು ಥಿಯೇಟರ್ ಒಳಗಡೆಯೇ ಪಟಾಕಿಗಳನ್ನು ಸಿಡಿಸಲು ಪ್ರಾರಂಭಿಸಿದರು. ಪಟಾಕಿ ಸಿಡಿದ ಕಿಡಿಗಳು, ಪರದೆಯ ಮುಂದೆ ಸಂಭ್ರಮಕ್ಕಾಗಿ ಎಸೆಯಲಾಗಿದ್ದ ಕಾಗದದ ತುಂಡುಗಳ ಮೇಲೆ ಬಿದ್ದವು. ಕೇವಲ ಸೆಕೆಂಡುಗಳ ಅಂತರದಲ್ಲಿ ಕಾಗದಕ್ಕೆ ಬೆಂಕಿ ಹೊತ್ತಿಕೊಂಡು ಪರದೆಯ ಹತ್ತಿರ ಹರಡಲಾರಂಭಿಸಿತು. ಇದನ್ನು ಕಂಡು ಪ್ರೇಕ್ಷಕರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದರು.
ಬೆಂಕಿ ಹರಡುವುದನ್ನು ಗಮನಿಸಿದ ಚಿತ್ರಮಂದಿರದ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿ ನಂದಿಸುವ ಉಪಕರಣಗಳ ಮೂಲಕ ಜ್ವಾಲೆಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಒಂದು ವೇಳೆ ಬೆಂಕಿ ಪರದೆಗೆ ಪೂರ್ಣವಾಗಿ ವ್ಯಾಪಿಸಿದ್ದರೆ ನೂರಾರು ಜನರ ಪ್ರಾಣಕ್ಕೆ ಅಪಾಯವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಭಯದಿಂದ ಹೇಳಿಕೊಂಡಿದ್ದಾರೆ.
ಚಿತ್ರಮಂದಿರಗಳ ಒಳಗೆ ಪಟಾಕಿ ಸಿಡಿಸುವುದು ಕಾನೂನುಬಾಹಿರ ಮತ್ತು ಅತ್ಯಂತ ಅಪಾಯಕಾರಿ. ನಿಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನವು ಇತರರ ಜೀವಕ್ಕೆ ಸಂಚಕಾರ ತರಬಾರದು. ಸಂಭ್ರಮದ ಹೆಸರಲ್ಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಹಿರಿಯ ಚಿತ್ರೋದ್ಯಮಿಗಳು ಮತ್ತು ಪೋಲೀಸ್ ಇಲಾಖೆ ಮನವಿ ಮಾಡಿದೆ.





