ದಿ ವೆಯ್ಟ್ ಈಸ್ ಓವರ್.. ದಿ ಎಪಿಕ್ ಬಾಹುಬಲಿ ನಾಳೆಯಿಂದಲೇ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಎರಡು ಸಿನಿಮಾಗಳಿಂದ ನೀಡಿದ್ದ ಆ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್‌ನ ಒಟ್ಟೊಟ್ಟಿಗೆ ನೀಡಲಿದೆ. ಮಾಹಿಷ್ಮತಿ ಸಾಮ್ರಾಜ್ಯಕ್ಕಾಗಿ ಮತ್ತೊಮ್ಮೆ ಬಾಹುಬಲಿ-ಬಲ್ಲಾಳ ನಡುವೆ ಮಹಾ ಕದನ ಶುರುವಾಗ್ತಿದೆ. ಏನಿದು ಅಂತೀರಾ..? ಈ ಸ್ಟೋರಿ ನೋಡಿ.
ಬಾಹುಬಲಿ.. ಎಸ್ ಎಸ್ ರಾಜಮೌಳಿ ಸಾರಥ್ಯದ ಮಹಾದೃಶ್ಯಕಾವ್ಯಗಳು. ಎರಡೆರಡು ಭಾಗಗಳಲ್ಲಿ ತೆರೆಕಂಡು, ಪ್ರೇಕ್ಷಕರನ್ನ ಅಕ್ಷರಶಃ ಮಂತ್ರಮುಗ್ಧಗೊಳಿಸಿದ ಮಾಸ್ಟರ್‌ಕ್ಲಾಸ್ ಮಾಸ್ಟರ್‌ಪೀಸ್ ಮೂವೀಸ್. ಭಾರತೀಯ ಚಿತ್ರರಂಗದ ಗತ್ತು, ಗಮ್ಮತ್ತನ್ನು ವಿಶ್ವ ಸಿನಿದುನಿಯಾಗಿ ಪರಿಚಯಿಸಿದ ರಾಜಮೌಳಿ, ಸಿನಿಮಾದ ಕಥೆ, ಮೇಕಿಂಗ್ ಹಾಗೂ ವಿಶ್ಯುವಲ್ ಟ್ರೀಟ್‌ನ ಹೀಗೂ ನೀಡಬಹುದು ಅನ್ನೋದನ್ನ ತೋರಿಸಿಕೊಟ್ಟ ಚಿತ್ರಗಳು.
ಮಾಹಿಷ್ಮತಿಗಾಗಿ ಬಾಹುಬಲಿ-ಬಲ್ಲಾಳ ನಡುವೆ ಮತ್ತೆ ಕದನ
ಈ ವಾರದಿಂದ ಥಿಯೇಟರ್‌ನಲ್ಲಿ ನ್ಯೂ ಬಾಹುಬಲಿ ಆರ್ಭಟ
ಮಾಹಿಷ್ಮತಿ ಸಾಮ್ರಾಜ್ಯಕ್ಕಾಗಿ ಬಾಹುಬಲಿ-ಬಲ್ಲಾಳ ನಡುವೆ ನಡೆಯುವ ಕದನ. ಅವರುಗಳ ನಡುವೆ ಶಿವಗಾಮಿಯ ಮಾತೇ ಶಾಸನ ಆಗುವುದು. ರಾಜ್ಯದ ಅರಸರಿಗೆ ಕಟ್ಟುಬಿದ್ದು ಬಾಹುಬಲಿಯನ್ನ ಕೊಲ್ಲಲು ಕಟ್ಟಪ್ಪ ತೆಗೆದುಕೊಳ್ಳುವ ಆ ಕಟು ನಿರ್ಧಾರ. ಸಾಮ್ರಾಜ್ಯದ ಜೊತೆ ಗಂಡನನ್ನ ಕಳೆದುಕೊಳ್ಳುವ ದೇವಸೇನಾ, ಬಂಧಿಯಾಗಿದ್ದುಕೊಂಡೇ ರಿವೆಂಜ್ ತೀರಿಸಿಕೊಳ್ಳಲು ಆಕೆ ಚಿತೆ ಜೋಡಿಸೋ ಜಿದ್ದಿನ ಕಿಚ್ಚು. ಅವಂತಿಕಾ ಗ್ಲಾಮರ್ ಜೊತೆ ಕಣ್ಣಿನ ನೋಟದಂತೆ ಬಿಡೋ ಬಾಣಗಳು. ಆಂತರಿಕ ಯುದ್ಧಗಳು ಸಾಲದು ಅಂತ ಮಾಹಿಷ್ಮತಿ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬರುವ ಕಾಲಕೇಯ. ಹೀಗೆ ಬಾಹುಬಲಿ ಹತ್ತು ಹಲವು ಮೈಂಡ್ ಬ್ಲೋಯಿಂಗ್ ಅಂಶಗಳ ಮಹಾದೃಶ್ಯಕಾವ್ಯ.
ರಾಜಮೌಳಿ ತನ್ನ ಚಾಕಚಕ್ಯತೆಯಿಂದ ತಂದೆಯ ಕಥೆಗೆ ಜೀವ ತುಂಬಿರೋ ಪರಿ ಅದ್ಭುತ. ಮೇಕಿಂಗ್ ಮಾಸ್ಟರ್ ಅನಿಸಿಕೊಂಡಿರೋ ರಾಜಮೌಳಿ ಬಹುದೊಡ್ಡ ತಾರಾಗಣದಿಂದ ಬಾಹುಬಲಿ ಎಪಿಕ್ ಸಾಗಾನ ಕಟ್ಟಿಕೊಟ್ಟಿದ್ದಾರೆ. ಪ್ರಭಾಸ್, ರಾಣಾರನ್ನ ಪ್ರಮುಖ ಪಾತ್ರಗಳನ್ನಾಗಿ ಇಟ್ಕೊಂಡು ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ಸುದೀಪ್, ನಾಸರ್‌ರಂತಹ ಕಲಾವಿದರ ದಂಡಿನಿಂದ ಪ್ರೇಕ್ಷಕರ ಹೃದಯಗಳ ಮೇಲೆ ದಂಡೆತ್ತಿ ಬಂದಿದ್ದರು. ಇದೀಗ ಮಗದೊಮ್ಮೆ ಬಾಹುಬಲಿಯನ್ನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ದಿ ಎಪಿಕ್ ಬಾಹುಬಲಿ ಸಿನಿಮಾ ಇದೇ ಶುಕ್ರವಾರ ಅಕ್ಟೋಬರ್ 31ರಿಂದ ಬೆಳ್ಳಿಪರದೆ ಬೆಳಗುತ್ತಿದೆ.
ಪ್ರಭಾಸ್-ರಾಣಾ ಗುದ್ದಾಟ.. ಕಟ್ಟುಬಿದ್ದ ಕಟ್ಟಪ್ಪ ಸತ್ಯರಾಜ್..!
ಶಿವಗಾಮಿ ಶಾಸನ.. ದೇವಸೇನಾ ಜಿದ್ದು.. ಅವಂತಿಕಾ ಅಬ್ಬರ
ಟೀಸರ್ ಜೊತೆ ಟ್ರೈಲರ್ ಕೂಡ ಮಜಭೂತಾಗಿದ್ದು, ಎರಡೂ ಬಾಹುಬಲಿ ಚಿತ್ರಗಳನ್ನ ಬ್ಲೆಂಡ್ ಮಾಡಿ ಒಂದೇ ಚಿತ್ರವಾಗಿಸಿದ್ದಾರೆ ರಾಜಮೌಳಿ. ಹೊಸ ಸಿನಿಮಾಗಳ ರೀತಿ ಇದನ್ನ ಸಹ ದೊಡ್ಡ ಮಟ್ಟಕ್ಕೆ ಪಬ್ಲಿಸಿಟಿ ಮಾಡಿ, ತೆರೆಗೆ ತರ್ತಿದ್ದಾರೆ. ಆದ್ರೆ ಸಿನಿಮಾದ ರನ್ ಟೈಂ ತುಂಬಾ ದೊಡ್ಡದಾಗಿದ್ದು, ಪ್ರೇಕ್ಷಕರು ನಾಲ್ಕು ಗಂಟೆಗಳ ಕಾಲ ಒಂದೇ ಕಡೆ ಒಮ್ಮೆಲೆ ಕೂರುವುದು ಕಷ್ಟ ಕಷ್ಟ. ಆದ್ರೂ ಸಹ, ಆ ಬಾಹುಬಲಿ ವಿಶ್ಯುವಲ್ ಟ್ರೀಟ್‌ನ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ಮಾಡೋಕೆ ಮತ್ತೊಮ್ಮೆ ಅವಕಾಶ ಸಿಗ್ತಿರೋದು ಇಂಟರೆಸ್ಟಿಂಗ್.
 
			
 
					




 
                             
                             
                             
                            