ಬೆಂಗಳೂರು: ಜನಪ್ರಿಯ ಮನರಂಜನಾ ವಾಹಿನಿ ‘ಜೀ ತೆಲುಗು’, ತನ್ನ ಅತ್ಯಂತ ಯಶಸ್ವಿ ಸಿಂಗಿಂಗ್ ರಿಯಾಲಿಟಿ ಶೋ ‘ಸ ರಿ ಗ ಮ ಪ’ದ ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಭಾರತೀಯ ಚಿತ್ರರಂಗಕ್ಕೆ ಹಲವು ಪ್ರತಿಭಾನ್ವಿತ ಗಾಯಕರನ್ನು ಪರಿಚಯಿಸಿರುವ ಈ ಕಾರ್ಯಕ್ರಮ, ಇದೀಗ ‘ಸ ರಿ ಗ ಮ ಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’ ಹೆಸರಿನಲ್ಲಿ ಹೊಸ ಆಯಾಮ ಪಡೆದುಕೊಂಡಿದೆ. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಜಾಗತಿಕ ಮಟ್ಟದಲ್ಲಿರುವ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸುವರ್ಣಾವಕಾಶವಾಗಿದೆ. ಆನ್-ಗ್ರೌಂಡ್ ಮತ್ತು ಡಿಜಿಟಲ್ ಆಡಿಷನ್‌ಗಳ ಮೂಲಕ ಈ ರಿಯಾಲಿಟಿ ಶೋಗೆ ಪ್ರತಿಭಾವಂತ ಗಾಯಕರನ್ನು ಆಯ್ಕೆ ಮಾಡಲಾಗುತ್ತದೆ.
ಈ ಕಾರ್ಯಕ್ರಮದ ಭಾಗವಾಗಿ, ಜೀ ತೆಲುಗು ದೇಶದ ವಿವಿಧ ನಗರಗಳಲ್ಲಿ ಆನ್-ಗ್ರೌಂಡ್ ಮತ್ತು ಡಿಜಿಟಲ್ ಆಡಿಷನ್‌ಗಳನ್ನು ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಆಡಿಷನ್‌ಗಳು ಜೂನ್ 28, 2026ರ ಭಾನುವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಅಬ್ಬಯ್ಯ ನಾಯ್ಡು ಸ್ಟುಡಿಯೋ (ಮಧು ಆರ್ಟ್ ಸ್ಟುಡಿಯೋ), ನಂ. 134, 7ನೇ ಕ್ರಾಸ್ ರಸ್ತೆ, ನಾಯ್ಡು ಲೇಔಟ್, ಬೆಂಗಳೂರು – 560061 ಇಲ್ಲಿ ನಡೆಯಲಿವೆ.
18 ರಿಂದ 35 ವರ್ಷದೊಳಗಿನ ಗಾಯಕರು ಈ ಆಡಿಷನ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಡುವುದು ಮತ್ತು ಉಜ್ವಲ ಭವಿಷ್ಯ ರೂಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ನಿಮ್ಮ ಸಿಂಗಿಂಗ್ ಕನಸನ್ನು ನನಸಾಗಿಸಿಕೊಳ್ಳಲು ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜೀ ತೆಲುಗು ವಾಹಿನಿಯನ್ನು ತಪ್ಪದೆ ವೀಕ್ಷಿಸಿ .
ಈ ಬಾರಿ ಜೀ ತೆಲುಗು ಆನ್-ಗ್ರೌಂಡ್ ಆಡಿಷನ್ ಜೊತೆಗೆ ಡಿಜಿಟಲ್ ಆಡಿಷನ್‌ಗಳಿಗೂ ಅವಕಾಶ ಕಲ್ಪಿಸಿದೆ. ನೇರವಾಗಿ ಭಾಗವಹಿಸಲು ಸಾಧ್ಯವಾಗದ ಪ್ರತಿಭೆಗಳು ಡಿಜಿಟಲ್ ಮೂಲಕವೂ ತಮ್ಮ ಗಾಯನವನ್ನು ಸಲ್ಲಿಸಬಹುದಾಗಿದೆ.
‘ಸ ರಿ ಗ ಮ ಪ’ ಕಾರ್ಯಕ್ರಮದ ಮೂಲಕ ಹಲವು ಗಾಯಕರು ಸಿನಿಮಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದಾರೆ. ಹೊಸ ಸೀಸನ್‌ನ ಉದ್ದೇಶವೂ ದೇಶದ ಮೂಲೆ ಮೂಲೆಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಮಟ್ಟದ ವೇದಿಕೆ ಒದಗಿಸುವುದಾಗಿದೆ.
ಆಡಿಷನ್ ವಿವರಗಳು
- ಕಾರ್ಯಕ್ರಮ: ಜೀ ತೆಲುಗು ‘ಸ ರಿ ಗ ಮ ಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್’
- ದಿನಾಂಕ: 28 ಜೂನ್ 2026 (ಭಾನುವಾರ)
- ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:00
- ಸ್ಥಳ: ಅಬ್ಬಯ್ಯ ನಾಯ್ಡು ಸ್ಟುಡಿಯೋ (ಮಧು ಆರ್ಟ್ ಸ್ಟುಡಿಯೋ), ನಾಯ್ಡು ಲೇಔಟ್, ಬೆಂಗಳೂರು
- ವಯೋಮಿತಿ: 18 ರಿಂದ 35 ವರ್ಷ
