ಸದಭಿರುಚಿಯ ಹಾಗು ವಿನೂತನ ಕಾರ್ಯಕ್ರಮಗಳನ್ನ ನೀಡುವ ಮನರಂಜನೆಯ ರಾಯಭಾರಿಯ ವಾಹಿನಿ ಜೀ ಕನ್ನಡ,,
ದಾಂಪತ್ಯದ ಮೂಲಕ ಹೊಸ ದಾಖಲೆ ಬರೆದ ಅದ್ವೀತೀಯ ರಿಯಾಲಿಟಿ ಶೋ “ಜೋಡಿ ನಂ 1”. 14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳ ಮೂಲಕ ಕನ್ನಡಿಗರ ಮನೆಮನಗಳನ್ನ ಗೆದ್ದ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ 1.
ಗ್ರ್ಯಾಂಡ್ ಓಪನಿಂಗ್ ಮೂಲಕ ದಾಖಲೆ ಬರೆಯಲು ಸಜ್ಜಾದ ಕಾರ್ಯಕ್ರಮ ಯಶಸ್ವೀ ಸಂಚಿಕೆಗಳನ್ನ ಪೂರೈಸಿ ಇದೀಗ ಗ್ರ್ಯಾಂಡ್ ಫಿನಾಲೆ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದೇ ಜುಲೈ 11 ಮತ್ತು 12ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಇದರ ಅಮೂಲ್ಯ ಕ್ಷಣಗಳನ್ನ ಪ್ರೇಕ್ಷಕ ಪ್ರಭುಗಳು ಕಣ್ತುಂಬಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿದ್ದಾರೆ.
14 ವಾರಗಳು, 105 ದಿನಗಳು, ಹತ್ತು ಸೆಲೆಬ್ರಿಟಿ ಜೋಡಿಗಳು, ಒಂದು ಚಾಂಪಿಯನ್ ಪಟ್ಟ, ಯಾರ ಮುಡಿಗೆ ಸೇರುತ್ತೆ ಎನ್ನುವ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ” ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳನ್ನು ಒಂದೇ ವೇದಿಕೆಗೆ ತಂದ ವಿನೂತನ ರಿಯಾಲಿಟಿ ಶೋ ‘ಜೋಡಿ ನಂ.1’ ಇಲ್ಲಿ 30 ವರ್ಷದ ಸಾರ್ಥಕತೆಯ ದಾಂಪತ್ಯದ ಜೋಡಿ, 16 ವರ್ಷಗಳ ದಾಂಪತ್ಯದ ಅದ್ದೂರಿ ಜೋಡಿ, 10 ವರ್ಷಗಳ ಸಾಮರಸ್ಯವನ್ನ ಕಂಡಂತ ವಿನೂತನ ಜೋಡಿಗಳ ಜೊತೆಗೆ ಈಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ 3 ತಿಂಗಳ ಮುದ್ದಾದ ಜೋಡಿಗಳೊಂದಿಗೆ ಶುರುವಾದ ಸಂಭ್ರಮದ ಕಾರ್ಯಕ್ರಮ ಜೋಡಿ ನಂ 1.
ಈ ದಶಜೋಡಿಗಳ ದಾಂಪತ್ಯದ ಪಯಣದಲ್ಲಿ ನಗು ಇತ್ತು, ಅಳು ಇತ್ತು, ಪ್ರೀತಿ ಇತ್ತು, ಸಂತೋಷದ ಕ್ಷಣಗಳಿತ್ತು, ಆತ್ಮತೃಪ್ತಿಯ ಭಾವವಿತ್ತು.. ಸೋಲಿತ್ತು, ಗೆಲುವಿತ್ತು, ಕನಸಿತ್ತು, ಸವಾಲಿತ್ತು. ಪ್ರತಿವಾರ ಸಿಕ್ಕಾಪ್ಟಟ್ಟೆ ಮುದ್ದಾಡಿದ್ರು, ಆಗಾಗ ಸ್ವಲ್ಪ ಮುನಿಸಿಕೊಂಡ್ರು, ಇದರ ನಡುವೆ ಒಬ್ಬರನೊಬ್ಬರು ಅಗಾಧಾವಾಗಿ ಅರ್ಥ ಮಾಡ್ಕೊಂಡ್ರು, ಒಟ್ಟಾರೆಯಾಗಿ ಇಲ್ಲೊಂದು ಜೀವಂತ ಬದುಕಿತ್ತು.. ಬದುಕಿನ ಸಾರ್ಥಕ ಕ್ಷಣಗಳಿತ್ತು..
“ಈ ಎಲ್ಲಾ ಸಮ್ಮಿಶ್ರಣದ ಸುಂದರ ಹೂರಣ ಜೋಡಿ ನಂ 1”
ಸೀಸನ್ ಪೂರ್ತಿ ನಡೆದ ಪ್ರತಿಯೊಂದು ಸವಾಲಿನಲ್ಲೂ ಜೋಡಿಗಳ ಪ್ರೀತಿ, ಹೊಂದಾಣಿಕೆ, ಪರಸ್ಪರ ನಂಬಿಕೆ ಮತ್ತು ಒಬ್ಬರಿಗೊಬ್ಬರು ನೀಡಿದ ಬೆಂಬಲ ಪ್ರೇಕ್ಷಕರ ಮನ ಗೆದ್ದಿದ್ದು, ‘ಜೋಡಿ ನಂ.1’ ಕುಟುಂಬ ಸಮೇತರಾಗಿ ವೀಕ್ಷಿಸುವ ನೆಚ್ಚಿನ ಕಾರ್ಯಕ್ರಮವಾಗಿದೆ.
ಇನ್ನು ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಬೀಗ್ರು ಅಂತಾನೇ ಕನ್ನಡಿಗರ ಮನೆಮಾತಾದ ಜೆಡ್ಜ್ ಪ್ಯಾನೆಲ್, “ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ರಾಜೇಶ್ ನಟರಂಗ, ಛಾಯಾಸಿಂಗ್” ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಇಡೀ ಶೋನ ಒಂದು ಮುಖ್ಯ ಆಕರ್ಷಣೆ ಹಾಗು ಕಾರ್ಯಕ್ರಮದ ಆತ್ಮ ಎಂದರೆ ನೆಚ್ಚಿನ ನಿರೂಪಕರು.
ತಮ್ಮ ಹಾಸ್ಯ ಮತ್ತು ಲವಲವಿಕೆಯ ಮಾತುಗಳ ಮೂಲಕ ಇಡೀ ಸೀಸನ್‌ನ ಮೆರುಗನ್ನು ಹೆಚ್ಚಿಸಿದ ನಿರೂಪಣೆಯ ಅದ್ವೀತೀಯ ಜೋಡಿ ಕುರಿ ಪ್ರತಾಪ್ ಹಾಗು ಶ್ವೇತಾ ಚೆಂಗಪ್ಪ.
ಈ ಎಲ್ಲಾ ಒಟ್ಟಾರೇ ಆಕರ್ಷಣೆಯ, ಅದ್ವೀತೀಯ ಸಮಾಗಮದ ಸುಂದರವಾದ ದಾಂಪತ್ಯದ ವಿನೂತನ ರಿಯಾಲಿಟಿ ಶೋ “ಜೋಡಿ ನಂ 1, ಇದರ ಗ್ರ್ಯಾಂಡ್ ಫಿನಾಲೆಯ ರೋಚಕ ಸಂಚಿಕೆಯಲ್ಲಿ ಅಭಿಲಾಷ್ ಹಾಗು ಅಪೂರ್ವ, ಕೋಟೆ ಪ್ರಭಾಕರ್ ಹಾಗು ಮಾಲತಿ, ಗೀತಾ ಭಾರತಿ ಭಟ್ ಹಾಗು ರಾಜಾರಾಮ್ ಭಟ್, ರಜಿನಿ ಹಾಗು ಅರುಣ್, ರುದ್ರ ಮಾಸ್ಟರ್ ಹಾಗು ನಿರೀಕ್ಷಾ, ಮಿಮಿಕ್ರಿ ಗೋಪಿ ಹಾಗು ಉಷಾರಾಣಿ, ಧನರಾಜ್ ಹಾಗು ಪ್ರಜ್ಞಾ, ಜಗಪ್ಪ ಹಾಗು ಸುಶ್ಮಿತಾ, ಬಾಳು ಬೆಳಗುಂದಿ ಹಾಗು ಮಾಲಾಶ್ರೀ, ನಯನ ಹಾಗು ಸುಹಾಸ್ ಜೋಡಿಗಳು ಪ್ರತಿಷ್ಠಿತ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಅದ್ಭುತ ಪ್ರದರ್ಶನಗಳು, ರೋಚಕ ಟಾಸ್ಕ್‌ಗಳು, ಭಾವನಾತ್ಮಕ ಕ್ಷಣಗಳು ಹಾಗೂ ಹಲವು ಅಚ್ಚರಿಗಳೊಂದಿಗೆ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ ನಗು, ಸಂಭ್ರಮ ಮತ್ತು ಮರೆಯಲಾಗದ ಕ್ಷಣಗಳಿಂದ ಕೂಡಿದ ಅದ್ದೂರಿ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ.
ವೀಕ್ಷಿಸಿ ‘ಜೋಡಿ ನಂ. 1’ ಗ್ರ್ಯಾಂಡ್ ಫಿನಾಲೆ ಜುಲೈ 11 ಮತ್ತು 12ರಂದು ರಾತ್ರಿ 9:00 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ.
