ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ ಜೀ ಕನ್ನಡ ಸದಾ ಮುಂದೆ. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ ಕನ್ನಡ ಈಗ ಯುವ ಕಥೆಗಾರರಿಗೆ ಒಂದು ಅದ್ಭುತ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಅದರ ಜೊತೆಗೆ ಡ್ಯಾನ್ಸರ್‌ಗಳು ಹಾಗು ಕಾಮಿಡಿಯನ್‌ಗಳಿಗೂ ಇಲ್ಲಿದೆ ಸುವವಕಾಶ. ಜೀ ರೈಟರ್ಸ್ ರೂಮ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್ಸ್ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಜೀ ರೈಟರ್ಸ್ ರೂಮ್‌ನಲ್ಲಿ ಭಾಗವಹಿಸುವವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಆಯ್ಕೆ ಆದ ಯುವಪ್ರತಿಭೆಗಳು ಮುಂದಿನ ಸುತ್ತಿಗೆ ಹೋಗುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳು ಜೀ ರೈಟರ್ಸ್ ರೂಮ್‌ಗೆ ಸೇರಲು ಅವಕಾಶವನ್ನು ಹೊಂದಿರುತ್ತಾರೆ. ಅಲ್ಲಿ ಅವರು ಇಂಡಸ್ಟ್ರಿಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯುತ್ತಾರೆ ಹಾಗೂ ಜೀನ ಮುಂಬರುವ ಯೋಜನೆಗಳಿಗೆ ಕೆಲಸ ಮಾಡುವ ಸುವವಕಾಶ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಖಿಲಾಡಿಗಳು ಆಡಿಷನ್‌ನಲ್ಲಿ ಉತ್ತೀರ್ಣರಾದವರು ಮುಂದಿನ ಸುತ್ತಿದೆ ಆಯ್ಕೆ ಆಗುತ್ತಾರೆ.
ಇಲ್ಲಿದೆ ಆಡಿಷನ್ಸ್ ನ ವಿವರಗಳು:
ಜೀ ರೈಟರ್ಸ್ ರೂಮ್ ಆಡಿಷನ್ಸ್:
ಸ್ಥಳ: ಸಂತ ಸೋಫಿಯಾ ಕಾನ್ವೆಂಟ್ ಸ್ಕೂಲ್, #6, 10th ಬ್ಲಾಕ್, 2ನೆ ಹಂತ, ನಾಗರಬಾವಿ, ಬೆಂಗಳೂರು
ದಿನಾಂಕ: 7th ಸೆಪ್ಟೆಂಬರ್ 2025
ಸಮಯ: 9:00 AM-2:00 PM
ದೂರವಾಣಿ ಸಂಖ್ಯೆ: 9900207711
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ & ಕಾಮಿಡಿ ಖಿಲಾಡಿಗಳು ಆಡಿಷನ್ಸ್:
ಸ್ಥಳ: ಹೈಯರ್ ಸೆಕೆಂಡರಿ ಸ್ಕೂಲ್, ಆರ್ ವಿ ರೋಡ್, ಬಸವನಗುಡಿ, ಬೆಂಗಳೂರು
ದಿನಾಂಕ: 7th ಸೆಪ್ಟೆಂಬರ್ 2025
ಸಮಯ: 9:00 AM-6:00 PM
ದೂರವಾಣಿ ಸಂಖ್ಯೆ: 9513134434
ಮತ್ಯಾಕೆ ತಡ, ಈಗಲೇ ಭಾಗವಹಿಸಿ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ.





