ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು ‘ಮಹಾಸಂಗಮ’ ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ “ತ್ರಿವೇಣಿ ಸಂಗಮ” ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ.
‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು.
ಗೌರಿಶಂಕರ, ನೀ ಇರಲು ಜೊತೆಯಲ್ಲಿ ಹಾಗು ಶಾರದೆ “ತ್ರಿವೇಣಿ ಸಂಗಮ” ಇಂದಿನಿಂದ ಸಂಜೆ 6 ರಿಂದ 7.30 ರ ವರೆಗೆ. ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಿ.
