ಪೊಲೀಸರನ್ನೇ ಯಾಮಾರಿಸಿದ್ರಾ ರಜತ್‌‌ ಹಾಗೂ ವಿನಯ್‌? ಫೈಬರ್ ಮಚ್ಚಿನ ಮೇಲೆ ಸಂಶಯ

Film (59)

ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇತ್ತೀಚೆಗೆ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ರಾತ್ರಿ ವೇಳೆಗೆ ಸ್ಟೇಷನ್ ಬೇಲ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಈಗ ವಿಚಾರಣೆ ವೇಳೆ ಸಲ್ಲಿಕೆಯಾದ ಫೈಬರ್ ಮಚ್ಚಿನ ಮೇಲೆ ಅನುಮಾನ ಮೂಡಿದೆ.

ರೀಲ್ಸ್‌‌‌ನಲ್ಲಿ ಹಿಡಿದಿರೋ ಮಚ್ಚು ನಿಜವಾದದ್ದು ಎಂದು ತೋರಿಸುವ ವೀಡಿಯೋ ಬಯಲಾಗಿದೆ, ಪೊಲೀಸರಿಗೆ ಸಲ್ಲಿಸಿದ ಫೈಬರ್ ಮಚ್ಚಿನ ನಡುವೆ ವ್ಯತ್ಯಾಸ ಕಂಡುಬಂದಿದೆ. ಇದರಿಂದಾಗಿ, “ಪೊಲೀಸರನ್ನೇ ಮೋಸ ಮಾಡಿದ್ದಾರಾ?” ಎಂಬ ಪ್ರಶ್ನೆ ಉದ್ಭವಿಸಿದೆ.

ADVERTISEMENT
ADVERTISEMENT

ಪೊಲೀಸರ ಪ್ರಕಾರ, ವಿನಯ್ ಮತ್ತು ರಜತ್ ಅವರು “ರಿಯಾಲಿಟಿ ಶೋ”ನಲ್ಲಿ ರೀಲ್ಸ್ ತಯಾರಿಸಿದ್ದು ಎಂದು ಹೇಳಿಕೆ ನೀಡಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತು. ಸಬ್ ಇನ್ಸ್ಪೆಕ್ಟರ್ ಅವರ ವಿಚಾರಣೆಯ ನಂತರ ಇಬ್ಬರಿಗೂ ಬೇಲ್ ನೀಡಲಾಗಿತ್ತು. ಈಗ, ವೀಡಿಯೋದ ಮಚ್ಚು ಮತ್ತು ಸಲ್ಲಿಕೆಯಾದ ಮಚ್ಚಿನ ತಾಳೆ ನಡೆಯಲಿದೆ.

ಬಸವೇಶ್ವರ ನಗರ ಪೊಲೀಸರು ತನಿಖೆ ನಡೆಸಿದ ನಂತರ ರಿಲ್ಸ್‌‌‌ನಲ್ಲಿ ಬಳಸಿದ್ದು ಬೇರೆ ಮಚ್ಚು, ಆದರೆ ಠಾಣೆಗೆ ಹಾಜರುಪಡಿಸಿದ್ದು ಬೇರೆ ಮಚ್ಚು ಎಂದು ಕಂಡುಬಂದಿದೆ.

ರಾತ್ರೋರಾತ್ರಿ ಪೊಲೀಸರನ್ನೇ ದಾರಿ ತಪ್ಪಿಸಿದ್ರಾ ರಜತ್ ಹಾಗೂ ಆತನ ಪತ್ನಿ ಅಕ್ಷತಾ. 41a ಅಡಿ ನೋಟಿಸ್ ಜಾರಿ ಮಾಡಿರುವ ಪೊಲೀಸ್‌‌. ರಜತ್ ಮತ್ತು ಆತನ ಪತ್ನಿ ಮೇಲೆ ಸಾಕ್ಷಿ ನಾಶ ಆರೋಪದಡಿ ಬಂಧನ ಸಾಧ್ಯತೆ?

ಈ ಒಂದು ವಿಷಯದ ಬಗ್ಗೆ ದೂರು ದಾಖಲಾಗಿದೆ. ವಶಪಡಿಸಿಕೊಂಡ ಮಚ್ಚನ್ನು FSLಗೆ ಕಳುಹಿಸಲಾಗಿದೆ. ರೀಲ್ಸ್‌‌ನಲ್ಲಿ ಮಾಡಿರೋದನ್ನ, ಹಾಗೂ ವಶಪಡಿಸಿಕೊಂಡ ಮಚ್ಚನ್ನು ಹೋಲಿಕೆ ಮಾಡಲಾಗುತ್ತೆ.ಒಂದು ವೇಳೆ ಒರಿಜಿನಲ್ ಆಗಿದ್ರೆ ಮುಂದಿನ ತನಿಖೆ ಮಾಡುತ್ತೇವೆ ಎಂದ ಪೊಲೀಸ್ ಕಮೀಷನರ್ ಬಿ ದಯಾನಂದ ಹೇಳಿಕೆ ನೀಡಿದ್ದಾರೆ.

Exit mobile version