ನ್ಯಾಯ ವ್ಯವಸ್ಥೆಗೇ ನ್ಯಾಯ ಒದಗಿಸೋಕೆ ಬರ್ತಿದ್ದಾರೆ ಸೂರ್ಯ. ಅದಕ್ಕೆ ಅವ್ರ ಬ್ರದರ್ ಕಾರ್ತಿ ಕೂಡ ಸಾಥ್ ನೀಡಿದ್ದು, ಕರುಪ್ಪು ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಎರಡು ದಶಕಗಳ ನಂತ್ರ ತ್ರಿಶಾ-ಸೂರ್ಯ ಕಾಂಬೋ ಕಮಾಲ್ ಮಾಡೋಕೆ ಬರ್ತಿದ್ದು, ಟ್ರೈಲರ್ ಸಮೇತ ಬಾಹುಬಲಿಗೆ ಅಣ್ಣನನ್ನ ಹೋಲಿಸಿದ ತಮ್ಮನ ಮಾತುಗಳನ್ನ ಕೂಡ ಕೇಳಿಸ್ತೀವಿ. ಈ ಧಮಾಕೇದಾರ್ ಸ್ಟೋರಿ ನೋಡ್ಕೊಂಡ್ ಬನ್ನಿ.
ಸದಾ ಒಂದಿಲ್ಲೊಂದು ಎಕ್ಸ್‌ಪೆರಿಮೆಂಟ್ ಮಾಡ್ತಿದ್ದ ತಮಿಳು ಸ್ಟಾರ್ ಸೂರ್ಯ, ಈ ಬಾರಿ ಫ್ಯಾನ್ಸ್‌ಗಾಗಿ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಮಾಡಿದ್ದಾರೆ. ಅದೇ ಕರುಪ್ಪು. ಯೆಸ್.. ಆ್ಯಕ್ಷನ್ ಡ್ರಾಮಾ ಜಾನರ್‌ನ ಈ ಸಿನಿಮಾ ಇದೇ ಮೇ 14ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದೆ. ತಮಿಳಿನ ಜೊತೆ ತೆಲುಗಿಗೂ ಡಬ್ ಆಗಿರೋ ಈ ಚಿತ್ರ ವೀರ ಭದ್ರುಡು ಟೈಟಲ್‌ನಲ್ಲಿ ರಂಜಿಸೋಕೆ ಬರ್ತಿದೆ.
ಸೂರ್ಯನ ಬಾಹುಬಲಿಗೆ ಹೋಲಿಸಿದ್ಯಾಕೆ ಬ್ರದರ್ ಕಾರ್ತಿ?
ನ್ಯಾಯ ವ್ಯವಸ್ಥೆಗೇ ನ್ಯಾಯ ಒದಗಿಸೋಕೆ ಕರುಪ್ಪು ಕಮಿಂಗ್
ಇತ್ತೀಚೆಗೆ ಹೈದ್ರಾಬಾದ್‌ನಲ್ಲಿ ವೀರ ಭದ್ರುಡು ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನ ಅದ್ಧೂರಿಯಾಗಿ ಆಯೋಜಿಸಿತ್ತು ಚಿತ್ರತಂಡ. ಅಲ್ಲಿ ರೋಲೆಕ್ಸ್ ಅಣ್ಣನಿಗಾಗಿ ಸೂರ್ಯ ಸಹೋದರ ಕಾರ್ತಿ ಚೀಫ್ ಗೆಸ್ಟ್ ಆಗಿ ಬಂದು ಅಚ್ಚರಿ ಮೂಡಿಸಿದ್ರು. ಅಣ್ಣನ ಎನರ್ಜಿ ಬಾಹುಬಲಿಯಲ್ಲಿ ಪ್ರಭಾಸ್ ಶಿವಲಿಂಗ ಎತ್ತುವುದಕ್ಕಿಂತ ಜೋರಿದೆ ಎಂದ ಕಾರ್ತಿ, ನಾನು ಇಲ್ಲೇ ಶೂಟಿಂಗ್‌ನಲ್ಲಿ ಇರಲಿದ್ದೇನೆ. ಹಾಗಾಗಿ ತೆಲುಗು ವರ್ಷನ್‌ನಲ್ಲೇ ಸಿನಿಮಾ ನೋಡ್ತೀನಿ ಎಂದರು.
2 ದಶಕಗಳ ನಂತ್ರ ಸೂರ್ಯ-ತ್ರಿಶಾ ಬ್ಯೂಟಿಫುಲ್ ಕಾಂಬೋ
ಮೊದಲಾರ್ಧ ಕೋರ್ಟ್ ಡ್ರಾಮಾ.. 2nd ಹಾಫ್ ಫುಲ್ ಫನ್
ಇನ್ನೂ ಸೂರ್ಯ ಮಾತಾಡ್ತಾ ಮೊದಲಾರ್ಧ ಎಮೋಷನಲ್ ಕೋರ್ಟ್ ಡ್ರಾಮಾ ಇರಲಿದ್ದು, ದ್ವಿತಿಯಾರ್ಧ ಕಂಪ್ಲೀಟ್ ಥಿಯೇಟ್ರಿಕಲ್ ಎಂಟರ್‌ಟೈನರ್. ಸಖತ್ ಫನ್ ಇರಲಿದೆ ಎಂದರು. ಅಷ್ಟೇ ಅಲ್ಲ, ಎರಡು ದಶಕಗಳ ನಂತ್ರ ತ್ರಿಶಾ ಜೊತೆ ನಟಿಸಿರೋದಾಗಿ, ಸ್ಕ್ರೀನ್ ಮೇಲೆ ಅದು ನೆಕ್ಸ್ಟ್ ಲೆವೆಲ್ ಎಂಟರ್‌ಟೈನ್ಮೆಂಟ್ ಇರಲಿದೆ ಎಂದರು.
ಸಮಸ್ಯೆಯಲ್ಲಿರೋ ಕೋರ್ಟ್ ಹಾಗೂ ಅದ್ರ ಇಲ್ಲೀಗಲ್ ಆ್ಯಕ್ಟಿವಿಟೀಸ್‌ಗೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಆ ದೇವರಂತೆ ಬರುವ ನಾಯಕನಟ ಸೂರ್ಯಗೆ ವಿಲನ್ ಆಗಿ ಆರ್ಜೆ ಬಾಲಾಜಿ ಕಾಣಸಿಗಲಿದ್ದಾರೆ. ಬಾಲಾಜಿಯೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದು, ಸಿನಿಮಾ ಇದೇ ವಾರ ಅದೃಷ್ಠ ಪರೀಕ್ಷೆಗೆ ಬರ್ತಿದೆ.
