ನವದೆಹಲಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆದರೆ ವಿಚಾರಣೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಸೂಚನೆಗಳನ್ನು ನೀಡಿದೆ.
ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ದರ್ಶನ್ ಪರ ವಕೀಲರಿಗೆ “ವಿಚಾರಣೆ ಹಂತದಲ್ಲಿರುವ ಪ್ರಕರಣದಲ್ಲಿ ಜಾಮೀನು ನೀಡುವುದು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ಮುಖ್ಯ ಸೂಚನೆಗಳು:
- ಪ್ರಕರಣವು ವಿಚಾರಣೆ ಹಂತದಲ್ಲಿರುವುದರಿಂದ ಸದ್ಯ ಜಾಮೀನು ನೀಡಲು ಸಾಧ್ಯವಿಲ್ಲ.
- ಟ್ರಯಲ್ ಕೋರ್ಟ್ ಪ್ರತಿದಿನ ವಿಚಾರಣೆ ನಡೆಸಬೇಕು.
- ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು.
- ಒಂದು ವರ್ಷದೊಳಗೆ ವಿಚಾರಣೆ ಮುಗಿಸದಿದ್ದಲ್ಲಿ ದರ್ಶನ್ಗೆ ಜಾಮೀನು ಪಡೆಯುವ ಅವಕಾಶವಿದೆ.
- ಸಾಕ್ಷಿಗಳನ್ನು ಮತ್ತೆ ಮತ್ತೆ ವಿಚಾರಣೆಗೆ ಕರೆಸಬಾರದು.
- ಅನಗತ್ಯ ಕಾರಣಗಳಿಂದ ವಿಚಾರಣೆಯನ್ನು ಮುಂದೂಡಬಾರದು.
- ಟ್ರಯಲ್ ಕೋರ್ಟ್ಗೆ ರೆಗ್ಯುಲರ್ ಜಡ್ಜ್ನ್ನು ನೇಮಿಸಬೇಕು.
- ಆ ರೆಗ್ಯುಲರ್ ಜಡ್ಜ್ ಮೂಲಕವೇ ಪ್ರತಿದಿನ ತಪ್ಪದೆ ವಿಚಾರಣೆ ನಡೆಸಬೇಕು.
- ಜೈಲಿನಲ್ಲಿ ದರ್ಶನ್ಗೆ ಜೈಲು ನಿಯಮಗಳ ಪ್ರಕಾರ ಎಲ್ಲಾ ಸವಲತ್ತುಗಳನ್ನು ಒದಗಿಸಬೇಕು.
ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ವೇಗಗೊಳಿಸುವುದಕ್ಕೆ ಒತ್ತು ನೀಡಿದ್ದು, “ಕೇಸ್ ಅನ್ನು ಬೇಗ ಮುಗಿಸಿ” ಎಂದು ಟ್ರಯಲ್ ಕೋರ್ಟ್ಗೆ ಸೂಚಿಸಿದೆ.
ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ಆದರೆ ಕೋರ್ಟ್ ವಿಚಾರಣೆಯ ವೇಗಕ್ಕೆ ಒತ್ತು ನೀಡುತ್ತಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಈ ನಿರ್ಧಾರದಿಂದ ದರ್ಶನ್ ಅಭಿಮಾನಿಗಳಲ್ಲಿ ನಿರಾಸೆಯ ವಾತಾವರಣವಿದ್ದರೂ, ವಿಚಾರಣೆ ತ್ವರಿತಗತಿಯಲ್ಲಿ ನಡೆಯುವುದರಿಂದ ಪ್ರಕರಣ ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ ವಿಚಾರಣೆ ಪೂರ್ಣಗೊಳ್ಳದೆ ದರ್ಶನ್ಗೆ ಸದ್ಯದಲ್ಲಿ ಬೇಲ್ ಸಿಗುವುದು ಖಾತರಿಯಿಲ್ಲ.