ಬಾಕ್ಸ್ ಆಫೀಸ್‌ಗೆ ಬಡಿಯಲಿದೆ ‘ಟಾಕ್ಸಿಕ್’ ಸುನಾಮಿ, ರಿಲೀಸ್‌ಗೂ ಮುಂಚೆಯೇ ಬರೋಬ್ಬರಿ 500 ಕೋಟಿ ಬಾಚಿದ ರಾಕಿಂಗ್ ಸ್ಟಾರ್ ಯಶ್. ದೇಶ-ವಿದೇಶಗಳಲ್ಲಿ ಅಬ್ಬರಿಸ್ತಿರೋ ಟಾಕ್ಸಿಕ್ ಪ್ರೀ-ರಿಲೀಸ್ ಬ್ಯುಸಿನೆಸ್ ಆಟ ಹೇಗಿದೆ? ಕೆಜಿಎಫ್ ದಾಖಲೆ ಧೂಳೀಪಟ ಮಾಡೋಕೆ ಬರ್ತಿದ್ಯಾ ‘ಟಾಕ್ಸಿಕ್’? ಇಲ್ಲಿದೆ ಕಂಪ್ಲೀಟ್ ಇನ್ಫರ್ಮೇಷನ್.
- ಓ ಮೈ ಗಾಡ್.. ಟಾಕ್ಸಿಕ್ ಪ್ರೀ-ರಿಲೀಸ್ ಬ್ಯುಸಿನೆಸ್ 500 ಕೋಟಿ
- ಕೆಜಿಎಫ್ ಬಳಿಕ ಟಾಕ್ಸಿಕ್‌ನಿಂದ ಮತ್ತೊಂದು ಬಿಗ್ ರೆಕಾರ್ಡ್
- ಓವರ್ಸೀಸ್ನಲ್ಲಿ 54 ಕೋಟಿಗೆ ಟಾಕ್ಸಿಕ್ ಥಿಯೇಟ್ರಿಕಲ್ ರೈಟ್ಸ್
- AA ಫಿಲ್ಮ್ಸ್ ಪಾಲಾದ ಟಾಕ್ಸಿಕ್ ನಾರ್ತ್ ಇಂಡಿಯಾ ರೈಟ್ಸ್
ಸ್ಯಾಂಡಲ್‌ವುಡ್ ಬ್ರಾಂಡ್ ಅನ್ನು ಗ್ಲೋಬಲ್ ಲೆವೆಲ್‌ಗೆ ತಗೊಂಡು ಹೋದ ರಾಕಿಂಗ್ ಸ್ಟಾರ್ ಯಶ್, ‘ಕೆಜಿಎಫ್ ಚಾಪ್ಟರ್ 2’ ಮೆಗಾ ಸಕ್ಸಸ್ ನಂತರ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಇಡೀ ಇಂಡಿಯನ್ ಸಿನಿಫೀಲ್ಡ್‌ನಲ್ಲೇ ಇತ್ತು. ಈಗ ಆ ಕಾಯುವಿಕೆಗೆ ಕೊನೆ ಬಿದ್ದಿದ್ದು, ‘ಟಾಕ್ಸಿಕ್’ ಅನ್ನೋ ಬಿಗ್ ಬಾಂಬ್ ಚಿತ್ರರಂಗದಲ್ಲಿ ಸದ್ದು ಮಾಡೋಕೆ ರೆಡಿಯಾಗಿದೆ. ಈ ಬಾರಿ ಯಶ್ ಬರೀ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಉಳಿದಿಲ್ಲ, ಬದಲಿಗೆ ಗ್ಲೋಬಲ್ ಮಟ್ಟದಲ್ಲಿ ಹೊಗೆ ಎಬ್ಬಿಸೋಕೆ ಬರ್ತಿದ್ದಾರೆ. ಚಿತ್ರ ರಿಲೀಸ್‌ಗೂ ಮುಂಚೆಯೇ ಗಾಂಧಿನಗರದಿಂದ ಹಿಡಿದು ಹಾಲಿವುಡ್‌ವರೆಗೆ ‘ಟಾಕ್ಸಿಕ್’ ಫೀವರ್ ಸ್ಟಾರ್ಟ್ ಆಗಿದ್ದು, ಪ್ರೀ-ರಿಲೀಸ್ ಬ್ಯುಸಿನೆಸ್‌ನಲ್ಲೇ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದೆ.
ಇನ್ನು ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ‘ಟಾಕ್ಸಿಕ್’ ಸಿನಿಮಾದ ಪ್ರೀ-ರಿಲೀಸ್ ಬ್ಯುಸಿನೆಸ್ ಅಂಕಿ-ಅಂಶಗಳನ್ನು ನೋಡಿದ್ರೆ ಯಾರೇ ಆದ್ರೂ ಶಾಕ್ ಆಗ್ಲೇಬೇಕು. ಹೌದು, ಸಿನಿಮಾ ಥಿಯೇಟರ್‌ಗೆ ಬರೋದಕ್ಕೂ ಮುಂಚೆಯೇ ಬರೋಬ್ಬರಿ 500 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಪ್ರಮುಖ ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳು ಮತ್ತು ಓವರ್‌ಸೀಸ್ ಡಿಜಿಟಲ್ ಡೀಲ್‌ಗಳು ಬಿಗ್ ಪ್ರೊಡಕ್ಷನ್ ಹೌಸ್‌ಗಳ ಪಾಲಾಗಿದ್ದು, ಬಿಡುಗಡೆಗೂ ಮುನ್ನವೇ ಪ್ರೊಡ್ಯೂಸರ್ಸ್ ಜೇಬು ಭರ್ತಿಯಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ ಥಿಯೇಟ್ರಿಕಲ್ ಹಕ್ಕುಗಳನ್ನು ಟಾಲಿವುಡ್‌ನ ನಿರ್ಮಾಪಕ ದಿಲ್ ರಾಜು ಬರೋಬ್ಬರಿ 90 ಕೋಟಿ ಗೆ ತನ್ನದಾಗಿಸಿಕೊಂಡಿದ್ದಾರೆ. ಇನ್ನು ತಮಿಳುನಾಡಿನಲ್ಲಿ 54 ಕೋಟಿ ಗೆ ಡೀಲ್ ಕುದುರಿದ್ರೆ, ಕೇರಳದಲ್ಲಿ ಪನೋರಮಾ ಸ್ಟುಡಿಯೋಸ್ 26 ಕೋಟಿಗೆ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಉತ್ತರ ಭಾರತದಲ್ಲಂತೂ ಯಶ್ ಕ್ರೇಜ್ ನೆಕ್ಸ್ಟ್ ಲೆವೆಲ್‌ನಲ್ಲಿದ್ದು, ಪ್ರಸಿದ್ಧ AA ಫಿಲ್ಮ್ಸ್ ಸಂಸ್ಥೆ ಬರೊಬ್ಬರಿ 108 ಕೋಟಿ ಕೊಟ್ಟು ನಾರ್ತ್ ಇಂಡಿಯಾ ಹಕ್ಕುಗಳನ್ನು ಬುಕ್ ಮಾಡಿಕೊಂಡಿದೆ.
ಇನ್ನು ರಾಕಿ ಭಾಯ್ ತವರು ನೆಲ ನಮ್ಮ ಕರ್ನಾಟಕದಲ್ಲಂತೂ ‘ಟಾಕ್ಸಿಕ್’ ಹವಾ ಹೇಳತೀರದಾಗಿದೆ. ನಮ್ಮ ರಾಜ್ಯವೊಂದರಲ್ಲೇ ಈ ಸಿನಿಮಾ 100 ರಿಂದ 150 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡುವ ನಿರೀಕ್ಷೆಯಿದೆ. ಇದರ ಜೊತೆಗೆ ಭಾರತದ ಗಡಿ ದಾಟಿ ವಿದೇಶಗಳಲ್ಲೂ ಯಶ್ ಹವಾ ಜೋರಾಗಿದ್ದು, ಓವರ್‌ಸೀಸ್ ಒಟ್ಟು ಥಿಯೇಟ್ರಿಕಲ್ ರೈಟ್ಸ್ ಬರೋಬ್ಬರಿ 54 ಕೋಟಿಗೆ ದೊಡ್ಡ ಮಟ್ಟದಲ್ಲಿ ಸೇಲ್ ಆಗಿದೆ.
ಸದ್ಯಕ್ಕಂತೂ ‘ಟಾಕ್ಸಿಕ್’ ಅಬ್ಬರ ನೋಡ್ತಿದ್ರೆ ಭಾರತೀಯ ಚಿತ್ರರಂಗದ ಹಳೆಯ ದಾಖಲೆಗಳನ್ನೆಲ್ಲಾ ಪುಡಿಪುಡಿ ಮಾಡೋದು ಪಕ್ಕಾ ಅನಿಸ್ತಿದೆ. ಕೆಜಿಎಫ್ ಸೃಷ್ಟಿಸಿದ ಟ್ರೆಂಡ್‌ಗಿಂತ ಒಂದು ಹೆಜ್ಜೆ ಮುಂದಿಟ್ಟು, ಜಾಗತಿಕ ಮಟ್ಟದಲ್ಲಿ ಕನ್ನಡದ ಪವರ್ ತೋರಿಸೋಕೆ ಯಶ್ & ಟೀಮ್ ಭರ್ಜರಿಯಾಗಿ ಸಜ್ಜಾಗಿದೆ. ಈ ಪ್ರೀ-ರಿಲೀಸ್ ಬ್ಯುಸಿನೆಸ್ ನೋಡ್ತಿದ್ರೆ, ಥಿಯೇಟರ್‌ಗೆ ಬಂದಾಗ ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಯಾವ ಮಟ್ಟಕ್ಕೆ ತಲುಪಲಿವೆ ಅನ್ನೋದನ್ನ ಕಾದು ನೋಡಬೇಕಿದೆ.
